March 12, 2025

Bhavana Tv

Its Your Channel

ವಿದ್ಯಾಂಜಲಿ ಪಬ್ಲಿಕ್ ಶಾಲೆಯಲ್ಲಿ ಏಪ್ರಿಲ್ 3 ರಿಂದ ಏಪ್ರಿಲ್ 15 ರವರೆಗೆ ಚಿಣ್ಣರ ಮೇಳ ಬೇಸಿಗೆ ಶಿಬಿರ

ಭಟ್ಕಳ: ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಗುರುತಿಸಿ, ಉತ್ತೇಜಿಸಿ, ಪ್ರೋತ್ಸಾಹಿಸಿ ವೇದಿಕೆಯನ್ನೂ ಸಹ ಒದಗಿಸಿ ಕೊಡುವ ಉದ್ದೇಶದಿಂದ ಚಿಣ್ಣರ ಮೇಳ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದ್ದು, ಯೋಗ, ಥಿಯೇಟರ್, ಕಿರುಚಿತ್ರ, ಸಂಗೀತ, ನೃತ್ಯ, ಯಕ್ಷಗಾನ, ಚಿತ್ರಕಲೆ, ಮಣ್ಣಿನ ಮಾದರಿ, ಕ್ರಾಫ್ಟ್, ವಾದ್ಯಗಳ ತರಬೇತಿ, ಜನಪದ ಆಟಗಳು, ಕಂಸಾಳೆ, ಚಂಡೆ ಮುಂತಾದ ಪ್ರಕಾರಗಳಲ್ಲಿ ತರಬೇತಿ ನೀಡಲಗುವುದು ಎಂದು ಅಸ್ಥೆಟಿಕ್ ಕಲ್ಷರಲ್ ಅಂಡ್ ಎಜ್ಯುಕೇಶನಲ್ ಫೌಂಡೇಶನ್‌ನ ಸುದರ್ಶನ ಭಟ್ಕಳ ಹೇಳಿದರು.


ಅವರು ವಿದ್ಯಾಂಜಲಿ ಪಬ್ಲಿಕ್ ಶಾಲೆಯಲ್ಲಿ ಏಪ್ರಿಲ್ 3 ರಿಂದ ಏಪ್ರಿಲ್ 15 ರವರೆಗೆ 6 ರಿಂದ 15 ವರ್ಷದ ವಯೋಮಿತಿಯ ಮಕ್ಕಳಿಗಾಗಿ ನಡೆಯಲಿರುವ ಚಿಣ್ಣರ ಮೇಳ ಬೇಸಿಗೆ ಶಿಬಿರದ ಭತ್ತಿಪತ್ರ ಬಿಡುಗಡೆ ಮಾಡಿ ಮಾತನಾಡಿದರು. ದಿ ನ್ಯೂ ಇಂಗ್ಲೀಷ್ ಪಿ ಯು ಕಾಲೇಜಿನ ಪ್ರಾಂಶುಪಾಲರಾದ ಡಾ. ವೀರೇಂದ್ರ ಶಾನಭಾಗ ಮಾತನಾಡುತ್ತ ಬೆಂಗಳೂರಿನ ಕಾಮಿಡಿ ಕಿಲಾಡಿ ಮತ್ತು ಡ್ರಾಮಾ ಜುನಿಯರ‍್ಸ್ ಮೆಂಟರ‍್ಸ್ ಮುಂತಾದ ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಂಡು ಭಟ್ಕಳದ ವಿದ್ಯಾರ್ಥಿಗಳಿಗೆ ಒಂದು ಹೊಸ ಅವಕಾಶವನ್ನು ಸುದರ್ಶನ ಭಟ್ಕಳ ಒದಗಿಸಿಕೊಡುತ್ತಿದ್ದು, ಮಕ್ಕಳು ಟಿವಿಯ ಮುಂದೆ ಅಥವಾ ಮೊಬೈಲ್ ನೊಂದಿಗೆ ಸಮಯವನ್ನ ವ್ಯರ್ಥ ಮಾಡುವುದಕ್ಕಿಂತ ಈ ಅವಕಾಶವನ್ನು ಬಳಸಿಕೊಳ್ಳಬೇಕಾಗಿದೆ ಎಂದು ಹೇಳಿದರು.ವಿದ್ಯಾಂಜಲಿ ಪಬ್ಲಿಕ್ ಶಾಲೆಯ ಮುಖ್ಯಾಧ್ಯಾಪಕಿ ಶೈಲಜಾ ಪ್ರಭು, ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಪ್ರಕಾಶ ಶಿರಾಲಿ, ವಿದ್ಯಾಭಾರತಿ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ರೂಪಾ ರಮೇಶ ಮತ್ತು .ವಿದ್ಯಾಂಜಲಿ ಪಬ್ಲಿಕ್ ಶಾಲೆಯ ಶಿಕ್ಷಕ ರಾಘವೇಂದ್ರ ಕಾಮತ್ ಉಪಸ್ಥಿತರಿದ್ದರು.

error: