May 17, 2024

Bhavana Tv

Its Your Channel

ಬೀನಾ ವೈದ್ಯ ಶಿಕ್ಷಣ ಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನ ಆಚರಣೆ

ಭಟ್ಕಳ: ಮಾರ್ಚ 8 ರಂದು ಬೀನಾ ವೈದ್ಯ ಶಿಕ್ಷಣ ಸಂಸ್ಥೆಯಲ್ಲಿ ಅಂತರಾಷ್ಟಿçÃಯ ಮಹಿಳಾ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಟ್ರಸ್ಟಿ, ಮ್ಯಾನೆಜಿಂಗ್ ಡೈರೆಕ್ಟರ್ ಶ್ರೀಮತಿ ಪುಷ್ಪಲತಾ ವೈದ್ಯ ಅವರು ವಹಿಸಿ ಮಾತನಾಡುತ್ತಾ ಸುಸ್ಥಿರ, ಅಭಿವೃದ್ಧಿ, ಶಾಂತಿ, ಸುರಕ್ಷತೆ, ಶೈಕ್ಷಣಿಕ, ಆರ್ಥೀಕ, ಸಾಮಾಜಿಕ ಸಮಾನತೆ ಸುರಕ್ಷತೆಯನ್ನು ಸಾಧಿಸಲು ಮಹಿಳೆಯರ ಭಾಗಿತ್ವವನ್ನು ಪುರುಷ ಸಮಾನವಾಗಿ ಉತ್ತೇಜಿಸಲು ಹಲವು ವರ್ಷಗಳಿಂದ ವಿಶ್ವಸಂಸ್ಥೆ ಹಾಗೂ ಅದರ ಅಂಗ ಸಂಸ್ಥೆಗಳು ಮಹಿಳಾ ದಿನಾಚರಣೆಯನ್ನು ಉತ್ತೇಜಿಸುತ್ತವೆ. ಅಷ್ಟೇ ಅಲ್ಲದೇ ಲಿಂಗ ಸಮಾನತೆಯ, ಆರ್ಥೀಕ, ಶೈಕ್ಷಣಿಕ, ಮಹೀಳಾ ಸಬಲೀಕರಣದ ಪ್ರಾಮುಖ್ಯತೆಯನ್ನು ಕುರಿತು ಅರಿವು ಮೂಡಿಸುವಲ್ಲಿಯೂ ಸಹಾ ಮಹಿಳಾ ದಿನಾಚರಣೆ ಸಹಕಾರಿಯಾಗಿದೆ ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಚಂದ್ರಕಲಾ ಕಾಮತ್ ನೆರವೇರಿಸಿದರು. ಇವರು ಸುಮಾರು 35 ವರ್ಷಗಳ ಕಾಲ ಜನತಾ ವಿದ್ಯಾಲಯದಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನೂರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ್ದಾರೆ. ಇವರ ಶಿಕ್ಷಣ ಕ್ಷೇತ್ರದ ಸೇವೆಯನ್ನು ಗುರುತಿಸಿ ಬೀನಾ ವೈದ್ಯ ಶಿಕ್ಷಣ ಸಂಸ್ಥೆಯಲ್ಲಿ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಇವರು ಬೀನಾ ವೈದ್ಯ ಶಿಕ್ಷಣ ಸಂಸ್ಥೆಯು ಸಾವಿರಾರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು ಕಲೆ, ಕ್ರೀಡೆ, ವಿದ್ಯೆ, ವಿಜ್ಞಾನ ಎಲ್ಲದಕ್ಕೂ ಸಮಾನ ಅವಕಾಶ ನೀಡುತ್ತಿದ್ದು ಇದು ಅತ್ಯುನ್ನತವಾದ ವಿದ್ಯಾ ಸಂಸ್ಥೆಯಾಗಿ ಬೆಳೆದು ನಿಂತಿರುವುದು ಅತ್ಯಂತ ಸಂತೋಷದ ವಿಷಯವಾಗಿದೆ ಎಂದು ಶುಭ ಹಾರೈಸಿದರು. ಹಲವಾರು ಮಹಿಳಾ ಸಾಧಕರ ಉದಾಹರಣೆ ನೀಡಿದರು.
ಮುಖ್ಯ ಅತಿಥಿಯಾಗಿ ಮೇಘನಾ ತಿಮ್ಮಪ್ಪ ನಾಯ್ಕ ಸದಸ್ಯರು ಗ್ರಾಮ ಪಂಚಾಯತ್ ಬೆಂಗ್ರೆ ಇವರು ಆಗಮಿಸಿ ಮಾತನಾಡಿದರು. ಮಹಿಳೆಗೆ ಇನ್ನೂ ಸ್ವಾತಂತ್ರö್ಯ ಸಿಗಬೇಕಾಗಿದೆ, ಮಹಿಳೆ ಹಲವಾರು ಕಟ್ಟು ಪಾಡುಗಳಿಂದ ಬಂಧಿತಲಾಗಿದ್ದಾಳೆ. ಮಹಿಳೆಯನ್ನು ಸಮಾಜ ಗೌರವಿಸಬೇಕು ಎಂದು ಅತಿಥಿಯಾಗಿ ಆಗಮಿಸಿದ್ದ ಸಂಸ್ಥೆಯ ಅಧ್ಯಕ್ಷರು ಮಾಜಿ ಶಾಸಕರು ಆದ ಮಂಕಾಳ ವೈದ್ಯ ಮಾತನಾಡಿ ಮಹಿಳೆ & ಪುರುಷರಲ್ಲಿ ಹೊಂದಾಣಿಕೆ ಇದ್ದರೆ ಮಾತ್ರ ಸಂಸಾರವಾಗಲಿ, ಸಮಾಜವಾಗಲಿ ಸ್ವಾರಸ್ಯದಿಂದ ಇರಲು ಸಾಧ್ಯ. ಮಹಿಳೆಗೆ ರಾಜಕೀಯದಲ್ಲಿಯೂ ಹಲವಾರು ಅವಕಾಶಗಳನ್ನು ಕಲ್ಪಿಸಲಾಗಿದೆ. ಅದನ್ನು ಉಪಯೋಗಿಸಿಕೊಂಡು ಬೆಳೆಯಬೇಕು. ಸಂಸಾರವನ್ನು ಸರಿಯಾದ ದಾರಿಯಲ್ಲಿ ನಡೆಸುವ ಸಾಮರ್ಥ್ಯ ಇರುವುದು ಹೆಣ್ಣಿನಲ್ಲಿ ಮಾತ್ರ ಎಂದರು.
ಶಾಲೆಯ ಪ್ರಾಂಶುಪಾಲರಾದ ವಿಠ್ಠಲ ನಾಯ್ಕ ಸ್ವಾಗತಿಸಿದರು. ಶಾಲೆಯ ಸಂಯೋಜಕರಾದ ಕೃಷ್ಣಮೂರ್ತಿ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು, ಶಿಕ್ಷಕ ಮಹೇಶ ನಾಯ್ಕ ಎಲ್ಲರನ್ನು ವಂದಿಸಿದರು. ಮಹಿಳಾ ಸಿಬ್ಬಂದಿಗಳಿಗಾಗಿ ಕಾರ್ಯಕ್ರಮದ ನಿಮಿತ್ತ ಹಲವಾರು ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

error: