May 17, 2024

Bhavana Tv

Its Your Channel

ಪವರ್​​ ಸ್ಟಾರ್​ ಪುನೀತ್​ ರಾಜ್​ ಕುಮಾರ್​ ಅಭಿನಯದ ಜೇಮ್ಸ್​​ ಸಿನಿಮಾ ಬಿಡುಗಡೆ;ಭಟ್ಕಳದಲ್ಲಿ ಅಪ್ಪು ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮ.

ಟ್ಕಳ: ಪವರ್​​ ಸ್ಟಾರ್​ ಪುನೀತ್​ ರಾಜ್​ ಕುಮಾರ್​ ಅಭಿನಯದ ಜೇಮ್ಸ್​​ ಸಿನಿಮಾ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿದ್ದು, ಭಟ್ಕಳದಲ್ಲಿಯು ಸಹ ಅಪ್ಪು ಅಭಿಮಾನಿಗಳು ಸಿನಿಮಾ ಬಿಡುಗಡೆ ಹಿನ್ನೆಲೆ ಥಿಯೇಟರ್​​ಗಳ ಮುಂದೆ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ತಾಲ್ಲೂಕಿನ ಸಂಶುದ್ದೀನ್ ಸರ್ಕಲನಿಂದ ಪುಷ್ಪಾಂಜಲಿ ಚಿತ್ರಮಂದಿರಕ್ಕೆ ಬೈಕ್ ರ್ಯಾಲಿ ಮೂಲಕ ಅಭಿಮಾನಿಗಳು ಆಗಮಿಸಿ ಚಿತ್ರಮಂದಿರದ ಮುಂಭಾಗ ಹಾಕಲಾದ ಪುನೀತ್ ರಾಜ್ ಕುಮಾರ್ ಪೋಸ್ಟರ್ ಗೆ ಹಾಲಿನ ಅಭಿಷೇಕ ಮಾಡಿ ಪಟಾಕಿ ಸಿಡಿಸಿ ಕುಣಿದು ಕುಪ್ಪಳಿಸಿದರು.
ಇದೇ ವೇಳೆ ದೇವಾಡಿಗ ಸಮಾಜದಿಂದ ಕರಾವಳಿ ಭಾಗದ ವಿಶೇಷ ಹುಲಿ ಕುಣಿತ ಪ್ರದರ್ಶನ ಕೂಡ ಮಾಡಲಾಯಿತು. ಹಾಗೂ ವಿಶೇಷ ವಾದ್ಯದೊಂದಿಗೆ ನ್ರತ್ಯ ಪ್ರದರ್ಶನ ಮಾಡಲಾಯಿತು. ಇಷ್ಟು ದಿನ ಖಾಲಿ ಹೊಡೆಯುತ್ತಿದ್ದ ಪುಷ್ಪಾಂಜಲಿ ಚಿತ್ರಮಂದಿರ ಜೆಮ್ಸ್ ಸಿನಿಮಾ ಮೂಲಕ ಬಹುದಿನದ ಬಳಿಕ ಹೌಸ್ ಫುಲ್ ಆಗಿದ್ದು ಕಂಡು ಬಂತು.

ಸಾಕಷ್ಟು ವರ್ಷದ ಹಿಂದೆ ಸಿನಿಮಾ ಮಂದಿರದಲ್ಲಿ ಹೌಸ ಪುಲ್ ಪ್ರದರ್ಶನ ಕಂಡು ಬಂದಿದ್ದು, ಈ ಸಿನಿಮಾಕ್ಕಾಗಿಯೇ ಮುಂಜಾನೆಯ ಚಿತ್ರ ಪ್ರದರ್ಶನ ಅವಕಾಶ ಸಿಕ್ಕಿರುವುದು ಪುನೀತ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದ್ದರೆ ಸಿನಿಮಾ ಮಂದಿರದ ಮಾಲೀಕರಿಗೂ ಸಹ ಹಣ ಗಳಿಕೆ ಏರಿಕೆಯ ಸಂತಸದಲ್ಲಿದ್ದಾರೆ.

ಪುಷ್ಪಾಂಜಲಿ ಚಿತ್ರಮಂದಿರದಲ್ಲಿ ಮೊದಲ ಪ್ರದರ್ಶನಕ್ಕೆ ಅಭಿಮಾನಿಗಳ ದಂಡೇ ಆಗಮಿಸಿತ್ತು. ಚಿತ್ರಮಂದಿರದ ಮುಂದೆ ಪಟಾಕಿ ಸದ್ದಿಗೆ ಅಭಿಮಾನಿಗಳು ಹೆಜ್ಜೆ ಹಾಕಿದರು. ಪುನೀತ್ ಹುಟ್ಟುಹಬ್ಬದ ದಿನದಂದೇ ಜೇಮ್ಸ್​ ಸಿನಿಮಾ ಬಿಡುಗಡೆಗೊಂಡಿರುವುದು ಪುನೀತ್ ಅಭಿಮಾನಿಗಳಲ್ಲಿ ಸಂಭ್ರಮ ಇಮ್ಮಡಿಗೆ ಕಾರಣವಾಗಿದೆ.

error: