May 16, 2024

Bhavana Tv

Its Your Channel

ಭಟ್ಕಳ ತಾಲೂಕಿನಲ್ಲಿ ಹೋಳಿ ಹುಣ್ಣಿಮೆಯನ್ನು ಅತ್ಯಂತ ಸಡಗರ ಸಂಭ್ರಮದಿOದ ಆಚರಣೆ

ಭಟ್ಕಳ: ಎರಡು ವರ್ಷಗಳ ಕಾಲ ಕೋವಿಡ್-೧೯ನಿಂದ ನೀರಸಗೊಂಡಿದ್ದ ಹೋಳಿ ಹುಣ್ಣಿಮೆ ಈ ವರ್ಷದಿಂದ ಮತ್ತೆ ತನ್ನ ಹಿಂದಿನ ಮೆರಗನ್ನು ಪಡೆದುಕೊಂಡಿದೆ. ಭಟ್ಕಳ ತಾಲೂಕಿನಲ್ಲಿ ಹೋಳಿ ಹುಣ್ಣಿಮೆಯನ್ನು ಅತ್ಯಂತ ಸಡಗರ ಸಂಭ್ರಮದಿoದ ಆಚರಿಸಲಾಗುತ್ತದೆ.ಎಲ್ಲಾ ಸಮುದಾಯದವರೂ ಕೂಡಿ ಆಚರಿಸುವ ಹೋಳಿ ಹಬ್ಬಕ್ಕೆ ಇಲ್ಲಿನ ಮಾವಿನಕುರ್ವೆಯಲ್ಲಿ ವಿಶೇಷವಾಗಿ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ.

ಪ್ರತಿ ವರ್ಷವೂ ಖಾರ್ವಿ ಸಮಾಜದ ಒಂದು ಕುಟುಂಬ ಹೋಳಿ ಹಬ್ಬದ ಹರಕೆ ಹೊತ್ತು ನಿಯಮ ಪಾಲಿಸುತ್ತದೆ. ಹರಕೆದಾರರ ಮನೆಯಿಂದ ಒಂದು ಅಡಕೆ ಮರವನ್ನು ಹುಣ್ಣಿಮೆ ದಿನ ಸಮಾಜದವರೆಲ್ಲರೂ ಸೇರಿ ವಾದ್ಯ ಕುಣಿತ ಮೆರವಣಿಗೆಯ ಮೂಲಕ ಕಡಲತೀರಕ್ಕೆ ತರುತ್ತಾರೆ. ಜೈಕಾರ, ಘೋಷಣೆ ಜತೆಗೆ ವೇಷಧಾರಿಗಳು ಮೆರವಣಿಗೆಗೆ ಮೆರಗು ನೀಡುತ್ತಾರೆ. ಮಹಿಳೆಯರು, ಪುರುಷರು ಎಲ್ಲರೂ ನೃತ್ಯದಲ್ಲಿ ಭಾಗವಹಿಸಿ ಸಂಭ್ರಮಿಸುತ್ತಾರೆ. ಮೆರವಣಿಗೆ ಮೂಲಕ ಕಡಲತೀರಕ್ಕೆ ತಂದು ನೆಟ್ಟ ಅಡಕೆ ಮರವನ್ನು ದಹನ ಮಾಡುವ ಮೂಲಕ ಸಂಪ್ರದಾಯದ ಹೋಳಿಯ ಆಚರಣೆ ನಡೆದಿದೆ. ಮೊದಲೇ ತಯಾರಿ ಮಾಡಿಕೊಂಡಿದ್ದ ಹುಲ್ಲಿನಿಂದ ಮಾಡಿದ ಕಾಮನ ರೂಪಿಗೆ ಬೆಂಕಿಯನ್ನು ಹಚ್ಚಿ ಕಾಮದಹನ ಮಾಡುವ ಮೂಲಕ ಸಂಭ್ರಮಿಸಿದರು.
ಈ ಬಾರಿ ವಿಶೇಷವಾಗಿ ಮಹಿಳೆಯರು ಯಕ್ಷಗಾನ ವೇಷ ರಾಮ, ಸೀತೆ, ಲಕ್ಷ್ಮಣ, ಶೂರ್ಪನಖಿ ದೂತ ಇತ್ಯಾದಿ ವೇಷ ಧರಿಸಿ ಹೊಳಿ ಹಬ್ಬದಲ್ಲಿ ಪಾಲ್ಗೊಂಡಿರುವುದು.
ಗ್ರಾಮೀಣ ಠಾಣೆ ಪಿ.ಎಸೈ ಭರತ ಹಾಗೂ ಸಿಬ್ಬಂದಿಗಳು ಯಾವುದೇ ಅಹಿತಕರ ಘಟನೆಗಳು ನಡೆದಂತೆ
ಸೂಕ್ತ ಬಂದೋಬಸ್ತ್ ಮಾಡಿದರು

error: