
?????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
ಭಟ್ಕಳದ ದಿ ನ್ಯೂ ಇಂಗ್ಲೀಷ್ ಪಿ.ಯು.ಕಾಲೇಜಿನಲ್ಲಿ ಪಿ.ಯು. ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿಯ“ಕೌಶಲ್ಯ” ಕಾರ್ಯಕ್ರಮದ ಕರ ಪತ್ರವನ್ನು ಬಿಡುಗಡೆ ಮಾಡಿದ ಮಂಗಳೂರಿನ ಕೆನರಾ ಇಂಜಿನಿಯರಿAಗ್ ಕಾಲೇಜಿನ ಡಾ. ಬಿ. ಕೃಷ್ಣ ಪ್ರಭು
ಪಿ.ಯು.ಸಿ. ಯ ವಿಜ್ಞಾನ ವಿಬಾಗದ ತರಗತಿಯಲಿ,್ಲ ಓದುವ ತತ್ವ ಮತ್ತು ಸಿದ್ಧಾಂತಗಳನ್ನು ತಾರ್ಕಿಕವಾಗಿ ಕಾರ್ಯಾಚರಣೆಗಿಳಿಸುವ ಕಾರ್ಯವನ್ನು ಇಂಜಿನಿಯರಿAಗ್ ಕಾಲೇಜುಗಳು ಮಾಡುತ್ತವೆ. ಆದರೆ ಇಂದಿನ ವಿದ್ಯಾರ್ಥಿಗಳು ಕೇವಲ ಪರೀಕ್ಷೆಗೆ ಸಿದ್ಧಪಡುವುದರಿಂದ ಕಲಿತ ವಿಷಯ ವಸ್ತುವನ್ನು ತಾರ್ಕಿಕವಾಗಿ ಬಳಸುವಲ್ಲಿ ಪಿ.ಯು. ಕಾಲೇಜುಗಳೊಂದಿಗೆ ಕೈಜೋಡಿಸಿ ವಿದ್ಯಾರ್ಥಿಗಳಿಗೆ ನೆರವಾಗಲು “ಕೌಶಲ್ಯ” ಎನ್ನುವ ಹೆಸರಿನಲ್ಲಿ ಕೌಶಲ್ಯಾಭಿವೃದ್ಧಿಯ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತಿದ್ದೇವೆ ಎಂದು ಮಂಗಳೂರಿನ ಕೆನರಾ ಇಂಜಿನಿಯರಿAಗ್ ಕಾಲೇಜಿನ ಡಾ. ಬಿ. ಕೃಷ್ಣ ಪ್ರಭು ಹೇಳಿದರು.
ಅವರು ಭಟ್ಕಳದ ದಿ ನ್ಯೂಇಂಗ್ಲೀಷ್ ಪಿ.ಯು.ಕಾಲೇಜಿನಲ್ಲಿಪಿ.ಯು. ವಿದ್ಯಾರ್ಥಿಗಳಕೌಶಲ್ಯಾಭಿವೃದ್ಧಿಯ“ಕೌಶಲ್ಯ”ಎನ್ನುವ ಕಾರ್ಯಕ್ರಮದ ಕರ ಪತ್ರವನ್ನು ಬಿಡುಗಡೆ ಮಾಡಿ ಮಾತನಾಡುತ್ತಾ ಕೆನರಾ ಇಂಜಿನಿಯರಿoಗ್ ಕಾಲೇಜು ಪ್ರತಿಷ್ಠಿತ ಪದವಿ ಪೂರ್ವ ಕಾಲೇಜುಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ ಕೌಶಲ್ಯವನ್ನುವಿವಿಧ ಚಟುವಟಿಕೆಗಳ ಮೂಲಕ ಹೆಚ್ಚಿಸುವನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದು ಈ ವರ್ಷಭಟ್ಕಳದ ದಿ ನ್ಯೂಇಂಗ್ಲೀಷ್ ಪಿ.ಯು. ಕಾಲೇಜನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಹೆಮ್ಮೆ ಇದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಭಟ್ಕಳ ಎಜ್ಯುಕೇಶನ ಟ್ರಸ್ಟನ ಅಧ್ಯಕ್ಷ ಡಾ.ಸುರೇಶ್ ನಾಯಕ ಕೆನರಾ ಇಂಜಿನಿಯರಿAಗ್ ಕಾಲೇಜಿನ ಸಹಯೋಗದೊಂದಿಗೆ ನಮ್ಮ ವಿದ್ಯಾರ್ಥಿಗಳಿಗೆ ಆಗುವ ಸದುಪಯೋಗಗಳನ್ನು ಎದುರು ನೋಡುತ್ತಿದ್ದು, ವಿದ್ಯಾರ್ಥಿಗಳು ಈ ಒಪ್ಪಂದದ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕೆಂದು ಹೇಳಿದರು.
ಕೆನರಾ ಇಂಜಿನಿಯರಿAಗ್ ಕಾಲೇಜಿನ ಉಪನ್ಯಾಸಕರಾದ ಸುಜಿತ್ ಪೈ ಮತ್ತು ಸಂದೀಪ ಪ್ರಭು ಉಪಸ್ಥಿತರಿದ್ದರು. ಪ್ರಾಶುಂಪಾಲ ಡಾ. ವಿರೇಂದ್ರ ವಿ. ಶಾನಬಾಗ ಸ್ವಾಗತಿಸಿದರು. ಉಪನ್ಯಾಸಕಿ ಶ್ಯಾಮಲ ಕಾಮತ್ ನಿರ್ವಹಿಸಿ ವಂದಿಸಿದರು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ