
ಭಟ್ಕಳ: ಅಕ್ರಮವಾಗಿ ಆಕಳು ಕರು ಸಾಗಾಟ ಮಾಡುತ್ತಿದ್ದ ವೇಳೆ ಆರೋಪಿ ಬಂಧಿಸಿದ ಘಟನೆ ಭಟ್ಕಳದ ವಿ.ಟಿ ರೊಡ್ ಆಸರಕೇರಿಯಲ್ಲಿ ನಡೆದಿದೆ
ಖಚಿತ ಮಾಹಿತಿ ಮೇರೆಗೆ ಆಟೋ ರಿಕ್ಷಾವೊಂದರಲ್ಲಿ ಅಕ್ರಮವಾಗಿ ಆಕಳು ಕರುವನ್ನು ಸಾಗಾಟ ಮಾಡುವ ವೇಳೆ ಪೊಲೀಸರು ದಾಳಿ ಮಾಡಿ ಕರುವನ್ನು ವಶಪಡಿಸಿಕೊಂಡು ಘಟನೆ ವಿ.ಟಿ ರೊಡ್ ಆಸರಕೇರಿ ಆಸಿಯಾ ಆಸ್ಪತ್ರೆ ಹತ್ತಿರ ನಡೆದಿದೆ
ಬಂಧಿತ ಆರೋಪಿಯನ್ನು ಇರ್ಷಾದ್ ಅಹಮ್ಮದ್ ಜಗೂರ ಎಂದು ತಿಳಿದು ಬಂದಿದೆ. ಈತ ವಧೆ ಮಾಡುವ ಉದ್ದೇಶದಿಂದ 5000 ಸಾವಿರ ಮೌಲ್ಯದ ಒಂದು ಆಕಳು ಹೆಣ್ಣು ಕರುವನ್ನು ಯಾವುದೇ ಪಾಸ್ ಯಾ ಪರವಾನಿಗೆ ಇಲ್ಲದೆ ಆಟೋ ರಿಕ್ಷಾವೊಂದರಲ್ಲಿ ಎಲ್ಲಿಂದಲೋ ಕಳವು ಮಾಡಿಕೊಂಡು ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ತುಂಬಿಕೊAಡು ಅಕ್ರಮವಾಗಿ ಸಾಗಾಟ ಮಾಡಿಕೊಂಡು ಹೋಗುವಾಗ ವಿ.ಟಿ ರೋಡ್ ಆಸರಕೇರಿ ಆಸಿಯಾ ಆಸ್ಪತ್ರೆ ಹತ್ತಿರ ಪೋಲಿಸರು ದಾಳಿ ಮಾಡಿ ಆರೋಪಿಯನ್ನು ವಶಪಡಿಸಿಕೊಂಡು ಘಟನೆ ನಡೆದಿದೆ
ಈ ಕುರಿತು ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ