May 3, 2024

Bhavana Tv

Its Your Channel

ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಭಟ್ಕಳದ ಶೋಟೊಕಾನ್ ಕರಾಟೆ ಇನ್ಸ್ಟಿಟ್ಯೂಟ್ ನ ಕರಾಟೆ ವಿದ್ಯಾರ್ಥಿಗಳಿಂದ ಅತ್ಯುತ್ತಮ ಸಾಧನೆ

ಭಟ್ಕಳ: ಉಡುಪಿಯಲ್ಲಿ ನಡೆದ ಎರಡನೇ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಭಟ್ಕಳದ ಶೋಟೊಕಾನ್ ಕರಾಟೆ ಇನ್ಸ್ಟಿಟ್ಯೂಟ್ ನ ಕರಾಟೆ ವಿದ್ಯಾರ್ಥಿಗಳಿಂದ ಕಟಾ ಮತ್ತು ಕುಮಿತೆ ವಿಭಾಗದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಶೋಟೊಕಾನ್ ಕರಾಟೆ ಸಂಸ್ಥೆಯ ಭಟ್ಕಳ ತಾಲೂಕಿನ ಚೌತನಿ ಕರಾಟೆ ತರಬೇತಿ ಶಾಖೆ, ಸರ್ಪನಕಟ್ಟೆ ಕರಾಟೆ ತರಬೇತಿ ಶಾಖೆ, ನ್ಯೂ ಇಂಗ್ಲೀಷ್ ಶಾಲೆ ಮಹಿಳಾ ಕರಾಟೆ ತರಬೇತಿ ಶಾಖೆ ಮತ್ತು ಮುಖ್ಯ ಕರಾಟೆ ತರಬೇತಿಯ ಶಾಲೆಯ 40ಕ್ಕೂ ಅಧಿಕ ಕರಾಟೆ ವಿದ್ಯಾರ್ಥಿಗಳು ಕಟಾ ಮತ್ತು ಕುಮಿತೆಯ ವಿಭಾಗದಲ್ಲಿ ಭಾಗವಹಿಸಿ ಪ್ರಥಮ, ದ್ವೀತಿಯ ಮತ್ತು ತೃತೀಯ ಸ್ಥಾನವನ್ನು ಗಳಿಸಿದ್ದಾರೆ.

ಬ್ರೌನ್ ಬೆಲ್ಟ್ ವಿಭಾಗದಲ್ಲಿ ಅಂಜಲಿ ನಾಗರಾಜ ಕಾಮತ್ ಕಟಾ ವಿಭಾಗದಲ್ಲಿ ತೃತೀಯ ಮತ್ತು ಕುಮಿತೆ ತೃತೀಯ ಸ್ಥಾನ.
ಮಂಜುನಾಥ ಗಜಾನನ ದೇವಾಡಿಗ ಕಟಾ ವಿಭಾಗಲ್ಲಿ ತೃತೀಯ ಮತ್ತು ಕುಮಿತೆ ವಿಭಾಗದಲ್ಲಿ ತೃತೀಯ ಸ್ಥಾನ. ರೋಹನ್ ಕೃಷ್ಣ ನಾಯ್ಕ ಕುಮಿತೆ ವಿಭಾಗದಲ್ಲಿ ತೃತೀಯ ಸ್ಥಾನ. ಆದರ್ಶ್ ಸುರೇಂದ್ರ ಪೂಜಾರಿ ಕಟಾ ವಿಭಾಗದಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ.

ಕಲರ್ ಬೆಲ್ಟ್ ವಿಭಾಗದಲ್ಲಿ ಅಖಿಲಾ ಚಂದ್ರಕಾAತ ನಾಯಕ ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ
ಪ್ರತ್ಯಕ್ಷ ಕಟಾ ವಿಭಾಗದಲ್ಲಿ ಪ್ರಥಮ ಮತ್ತು ಕುಮಿತೆ ವಿಭಾಗದಲ್ಲಿ ಪ್ರಥಮ ಸ್ಥಾನ.ಯಶಸ್ ಶ್ರೀಧರ ಮೊಗೇರ ಕಟಾ ವಿಭಾಗದಲ್ಲಿ ದ್ವಿತೀಯ ಮತ್ತು ಕುಮಿತೆ ವಿಭಾಗದಲ್ಲಿ ತೃತೀಯ ಸ್ಥಾನ.ಶ್ರೇಯಸ್ ಭಾಸ್ಕರ ಮೊಗೇರ ಕಟಾ ವಿಭಾಗದಲ್ಲಿ ತೃತೀಯ ಮತ್ತು ಕುಮಿತೆ ವಿಭಾಗದಲ್ಲಿ ದ್ವೀತಿಯ ಸ್ಥಾನ.ವೃಂದಾ ರಾಮನಾಥ ಜೋಗಿ ಕಟಾ ವಿಭಾಗದಲ್ಲಿ ತೃತೀಯ ಮತ್ತು ಕುಮಿತೆ ವಿಭಾಗದಲ್ಲಿ ದ್ವೀತಿಯ ಸ್ಥಾನ ಸಿಂಧು ಶಿವಾಜಿ ಅರೇರ್ ಕಟಾ ವಿಭಾಗದಲ್ಲಿ ತೃತೀಯ ಸ್ಥಾನ. ರಿಷಿಮಾ ರಾಜೇಶ ನಾಯ್ಕ ಕಟಾ ವಿಭಾಗದಲ್ಲಿ ದ್ವಿತೀಯ ಸ್ಥಾನ.
ಪ್ರಣವ್ ನಾರಾಯಣ ಮೊಗೇರ ಕಟಾ ವಿಭಾಗದಲ್ಲಿ ತೃತೀಯ ಸ್ಥಾನ. ಆಧ್ಯಾ ರವಿ ನಾಯ್ಕ ಕಟಾ ವಿಭಾಗದಲ್ಲಿ ತೃತೀಯ ಸ್ಥಾನ. ಮಣೆಪ್ರಸಾದ್ ಅಶ್ವಥ್ ಶೆಟ್ಟಿ ಕಟಾ ವಿಭಾಗದಲ್ಲಿ ತೃತೀಯ ಸ್ಥಾನ. ಹರ್ಷ ಮೊಗೇರ ಕಟಾ ವಿಭಾಗದಲ್ಲಿ ದ್ವೀತಿಯ ಸ್ಥಾನ.ತನ್ವಿ ಕಟಾ ವಿಭಾಗದಲ್ಲಿ ತೃತೀಯ ಸ್ಥಾನ.ಪ್ರಾಂಜಲ್ ಕಟಾ ವಿಭಾಗದಲ್ಲಿ ತೃತೀಯ ಸ್ಥಾನ.ದಿಶಾ ಕಟಾ ವಿಭಾಗದಲ್ಲಿ ತೃತೀಯ ಸ್ಥಾನ.ಹರ್ಷ ಕಟಾ ವಿಭಾಗದಲ್ಲಿ ತೃತೀಯ ಸ್ಥಾನ.ಮಹೇಶ್ ಕುಮಿತೆ ವಿಭಾಗದಲ್ಲಿ ದ್ವೀತಿಯ ಮತ್ತು ಕಟಾ ವಿಭಾಗದಲ್ಲಿ ತೃತೀಯ ಸ್ಥಾನ. ಹರ್ಷ ನಾಯ್ಕ ಕಟಾ ವಿಭಾಗದಲ್ಲಿ ತೃತೀಯ ಸ್ಥಾನ. ನಂದನ್ ಕಟಾ ವಿಭಾಗದಲ್ಲಿ ತೃತೀಯ ಸ್ಥಾನ.
ಶ್ರೇಯಸ್ ಗಾವಳಿ ಕಟಾ ವಿಭಾಗದಲ್ಲಿ ತೃತೀಯ ಸ್ಥಾನ. ಅನಿಕೇತ್ ಕುಮಿತೆ ವಿಭಾಗದಲ್ಲಿ ತೃತೀಯ ಮತ್ತು ಕಟಾ ವಿಭಾಗದಲ್ಲಿ ತೃತೀಯ ಸ್ಥಾನ ಸುಮಂತ್ ಕಟಾ ವಿಭಾಗದಲ್ಲಿ ದ್ವೀತಿಯ ಮತ್ತು ಕುಮಿತೆ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಈ ಎಲ್ಲಾ ಕರಾಟೆಯ ವಿದ್ಯಾರ್ಥಿಗಳಿಗೆ ಶೋಟೊಕಾನ್ ಕರಾಟೆ ಸಂಸ್ಥೆಯ ಅಧ್ಯಕ್ಷ ಈಶ್ವರ ಎನ್ ನಾಯ್ಕ, ಕಾನೂನು ಸಲಹೆಗಾರ ಮನೋಜ ನಾಯ್ಕ ಮತ್ತು ತರಬೇತುದಾರರಾದ ಸುರೇಶ ಮೊಗೇರ, ನಾಗರಾಜ ದೇವಾಡಿಗ, ಉಮೇಶ ಮೊಗೇರ, ಮಹೇಶ ನಾಯ್ಕ, ಆರ್ಯನ್ ವಿ ನಾಯ್ಕ ರಾಜಶೇಖರ ಗೌಡ, ಗೋಪಾಲ ನಾಯ್ಕ ಹಾಗೂ ಮಹಿಳಾ ಕರಾಟೆ ತರಬೇತುದಾರರಾದ ನಾಗಶ್ರೀ ವಿ ನಾಯ್ಕ ಹರ್ಷ ವ್ಯಕ್ತಪಡಿಸಿದ್ದಾರೆ.

error: