
ಭಟ್ಕಳ: ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಸಂಜೀವ ಕುಮಾರ್ ಅವರು ಭಾನುವಾರ ಭಟ್ಕಳ ಮಾರುಕೇರಿಯ ಹೂತ್ಕಳದ ಶ್ರೀ ಧನ್ವಂತರಿ ವಿಷ್ಣುಮೂರ್ತಿ-ಗಣಪತಿ ದೇವಸ್ಥಾನಕ್ಕೆ ಆಗಮಿಸಿ ಶ್ರೀ ದೇವರ ದರ್ಶನವನ್ನು ಪಡೆದು ನಂತರ ನವಗ್ರಹಪೂರ್ವಕ ಶ್ರೀ ಧನ್ವಂತರಿ ಹೋಮದಲ್ಲಿ ಭಾಗವಹಿಸಿದರು.
ಬೆಳಗ್ಗೆ ಮುರ್ಡೇಶ್ವರದಿಂದ ಕುಟುಂಬ ಸಮೇತ ಆಗಮಿಸಿದ್ದ ನ್ಯಾಯಮೂರ್ತಿಗಳು ದೇವಸ್ಥಾನದಲ್ಲಿ ನಡೆಯುತ್ತಿದ್ದ ಹೋಮ, ಪೂಜೆಯಲ್ಲಿ ಪಾಲ್ಗೊಂಡು ದೇವರ ಪ್ರಸಾದ ಸ್ವೀಕರಿಸಿದರು.
ದೇವಸ್ಥಾನದ ಅರ್ಚಕ ವೇ.ಮೂ. ಶಂಕರ ಭಟ್ಟ ಅವರು ದೇವರಿಗೆ ವಿಶೇಷ ಅಭಿಷೇಕ, ಪೂಜೆ, ಮಂಗಲಾರತಿಯನ್ನು ಮಾಡಿ ಪ್ರಸಾದ ವಿತರಿಸಿದರು.
ದೇವಸ್ಥಾನದಲ್ಲಿ ವ್ಯವಸ್ಥೆಗೊಳಿಸಲಾಗಿದ್ದ ಶ್ರೀ ಧನ್ವಂತರಿ ಹೋಮವನ್ನು ವೈಧಿಕರಾದ ಸುಬ್ರಾಯ ಭಟ್ಟ, ಸತೀಶ ಭಟ್ಟ, ವಿನಾಯಕ ಭಟ್ಟ, ನಾರಾಯಣ ಉಪಾಧ್ಯಾಯ, ಯೋಗೇಶ ಹೆಬ್ಬಾರ, ಶಾಂಭವ ಉಪಾಧ್ಯಾಯ, ಮಹೇಶ ಉಪಾಧ್ಯಾಯ, ನಾಗರಾಜ ಹೆಬ್ಬಾರ ಮುಂತಾದವರು ಉಪಸ್ಥಿತರಿದ್ದರು.
ದೇವಸ್ಥಾನದ ಅರ್ಚಕ ಶಂಕರ ಭಟ್ಟ ಹಾಗೂ ದೇವಸ್ಥಾನದ ಸಮಿತಿಯ ಶ್ರೀಕಂಠ ಹೆಬ್ಬಾರ ಅವರು ನ್ಯಾಯಾಧೀಶರನ್ನು ಗೌರವಿಸಿದರು.
ಈ ಸಂದರ್ಭದಲ್ಲಿ ರಾಜಶೇಖರ ಹೆಬ್ಬಾರ ಉಡುಪಿ, ವಕೀಲರಾದ ನಾಗರಾಜ ಹೆಗಡೆ, ವಾಗೇಶ ಹೆಬ್ಬಾರ, ಕೃಷ್ಣಮೂರ್ತಿ ಹೆಗಡೆ, ನ್ಯಾಯಾಧೀಶರು ಭಾನುವಾರ ಬೆಳಿಗ್ಗೆ ಮುರ್ಡೇಶ್ವರ ದೇವಸ್ಥಾನಕ್ಕೂ ಭೇಟಿ ಶ್ರೀ ಮುರ್ಡೇಶ್ವರ ದೇವರ ದರುಶನ ಪಡೆದರು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ