April 28, 2024

Bhavana Tv

Its Your Channel

ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾಗಿ 8 ವರ್ಷ ಪೂರೈಸಿದ ಹಿನ್ನೆಲೆ ಜೂ.1 ರಿಂದ 15ರ ತನಕ ವಿವಿಧ ಕಾರ್ಯಕ್ರಮ

ಭಟ್ಕಳ: ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾಗಿ 8 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪಕ್ಷದಿಂದ ಬಂದ ಸೂಚನೆಯಂತೆ ಭಟ್ಕಳ ಮಂಡಳದ ವತಿಯಿಂದ ಜೂ.1 ರಿಂದ 15ರ ತನಕ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿ.ಜೆ.ಪಿ ಭಟ್ಕಳ ಮಂಡಳ ಅಧ್ಯಕ್ಷ ಸುಬ್ರಾಯ ದೇವಡಿಗ ಹೇಳಿದರು.

ಬಿಜೆಪಿ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ವಿವಿಧ ಮೋರ್ಚಾಗಳ ಸಹಯೋಗದಲ್ಲಿ ಯಶಸ್ವೀ ಕಾರ್ಯಕ್ರಮಗಳ ಮೂಲಕ ಸಂಭ್ರಮಾಚರಣೆಯನ್ನು ಅರ್ಥಪೂರ್ಣವಾಗಿ ನಡೆಸಲು ನಿರ್ಧರಿಸಲಾಗಿದೆ ಎಂದರು.
ಬಿಜೆಪಿ ಕಳೆದ ಎಂಟು ವರ್ಷಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಗಮನಾರ್ಹ ಸಾಧನೆ ಮಾಡಿದೆ. ದೇಶದಲ್ಲಿ ಮಹತ್ವದ ಅಭಿವೃದ್ಧಿ ಕಾರ್ಯಗಳನ್ನು ಮಾಡುವುದರೊಂದಿಗೆ ಅನೇಕ ಜನಪರ ಯೋಜನೆಗಳನ್ನು ಜ್ಯಾರಿಗೆ ತಂದಿದ್ದಾರೆ. ಇವರ ಅಧಿಕಾರದ ಅವಧಿಯಲ್ಲಿ ಇಡೀ ಜಗತ್ತು ಇಂದು ಭಾರತದತ್ತ ತಿರುಗಿ ನೋಡುವಂತಾಗಿದ್ದು ನಮ್ಮ ದೇಶದ ಘನತೆ ಏನೆನ್ನುವದನ್ನು ಜಗತ್ತಿಗೆ ತಿಳಿಯುವಂತೆ ಮಾಡಿದ್ದಾರೆ. ನರೇಂದ್ರ ಮೋದಿಯವರು 8 ವರ್ಷ ಪ್ರಧಾನಿಯಾಗಿ ಯಶಸ್ವಿಯಾಗಿ ಪೂರೈಸಿದ ಹಿನ್ನೆಲೆಯಲ್ಲಿ ಜೂನ್ 1ರಂದು ಪಕ್ಷದ ರೈತ ಮೋರ್ಚಾದಿಂದ ರೈತರ ಕಾರ್ಯಕ್ರಮ, ಜೂನ್ 2ರಂದು ಮಹಿಳಾ ಮೋರ್ಚಾದಿಂದ ಮಹಿಳೆಯರ ಸಮಾವೇಶ, ಜೂನ್ 3 ರಂದು ಪರಿಶಿಷ್ಟ ಜಾತಿ ಮೋರ್ಚಾದ ಕಾರ್ಯಕ್ರಮ, ಜೂನ್ 4 ರಂದು ಪರಿಶಿಷ್ಟ ಪಂಗಡದ ಮೋರ್ಚಾದ ಕಾರ್ಯಕ್ರಮ, ಜೂನ್ 5 ರಂದು ಹಿಂದುಳಿದ ವರ್ಗಗಳ ಮೋರ್ಚಾದ ಕಾರ್ಯಕ್ರಮ ನಡೆದರೆ, ಜೂನ್ 6 ರಂದು ದುರ್ಬಲ ವರ್ಗದವರಿಗಾಗಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಜೂನ್ 13 ರಂದು ಬಿಜೆಪಿ ಯುವ ಮೋರ್ಚಾದಿಂದ ಸೈಕಲ್ ರ‍್ಯಾಲಿ ನಡೆಸಲಾಗುತ್ತದೆ. ಹಿರಿಯ ಸಾಧಕರಿಗೆ ಸನ್ಮಾನ, ಕೋವಿಡ್ ಸಂದರ್ಭದಲ್ಲಿ ಕಾರ್ಯನಿರ್ವಹಿಸಿದವರಿಗೆ ಗೌರವ ಹೀಗೆ ಜೂನ್ 15ರ ವರೆಗೂ ಸರಣಿ ಕಾರ್ಯಕ್ರಮ ನಡೆಯಲಿದೆ ಎಂದರು. ಈ ಎಲ್ಲಾ ಕಾರ್ಯಕ್ರಮಗಳ ಜವಾಬ್ದಾರಿಯನ್ನು ಪಕ್ಷದ ಎಲ್ಲಾ ಮೋರ್ಚಾಗಳಿಗೂ ವಹಿಸಲಾಗಿದ್ದು ಸಂಚಾಲಕರನ್ನು ಪ್ರಮುಖರನ್ನಾಗಿ ಮಾಡಲಾಗಿದೆ ಎಂದರು.
ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಬಸವರಾಜ ಹೊರಟ್ಟಿ ಅವರು ಸ್ಪರ್ಧಿಸಿದ್ದು, ಈಗಾಗಲೇ ಅವರ ಗೆಲುವಿಗೆ ಎಲ್ಲಾ ಸಿದ್ಧತೆ ನಡೆಸಲಾಗಿದೆ. ತಾಲೂಕಿನಲ್ಲಿ 37 ಪ್ರೌಢಶಾಲೆ ಹಾಗೂ 10 ಕಾಲೇಜುಗಳಿದ್ದು, ಶಿಕ್ಷಕ ಮತದಾರರನ್ನು ಸಂಪರ್ಕಿಸುವ ಕೆಲಸ ಮಾಡಲಾಗಿದೆ. 4 ಶಿಕ್ಷಣ ಸಂಸ್ಥೆಗಳಿಗೆ ಒಬ್ಬರಂತೆ ನಾಲ್ಕು ಮಂದಿ ಘಟಕ ಪ್ರಮುಖರನ್ನು ನೇಮಕ ಮಾಡಲಾಗಿದೆ. ಬಸವರಾಜ ಹೊರಟ್ಟಿ ಅವರಿಗೆ ಭಟ್ಕಳದಿಂದ ಅತೀ ಹೆಚ್ಚು ಮತಗಳು ದೊರೆಯುವ ವಿಶ್ವಾಸವಿದೆ ಎಂದರು.
ಮುಂಬರುವ ವಿಧಾನಸಭಾ ಚುನಾವಣೆಗೆ ಸಂಬAಧಿಸಿದAತೆ ಪಕ್ಷದಿಂದ ಆಂತರಿಕ ಸಮೀಕ್ಷೆ ನಡೆಸಲಾಗುತ್ತಿದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು ಈ ಕುರಿತು ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗೋವಿಂದ ನಾಯ್ಕ, ಜಿಲ್ಲಾ ಕಾರ್ಯದರ್ಶಿ ಶಿವಾನಿ ಶಾಂತಾರಾಮ, ಬಿಜೆಪಿ ಮಂಡಲದ ನಿಕಟಪೂರ್ವ ಅಧ್ಯಕ್ಷ ರಾಜೇಶ ನಾಯ್ಕ, ಜಿಲ್ಲಾ ಕಾನೂನು ಪ್ರಕೋಷ್ಟದ ಸುರೇಶ ನಾಯ್ಕ, ಮಂಡಲ ಪ್ರಧಾನ ಕಾರ್ಯದರ್ಶಿ ಭಾಸ್ಕರ ದೈಮನೆ, ಮೋಹನ ನಾಯ್ಕ, ಮುಖಂಡರಾದ ದಿನೇಶ ನಾಯ್ಕ, ಪಾಂಡುರAಗ ನಾಯ್ಕ, ಪುರಸಭಾ ಸದಸ್ಯ ಉದಯ ನಾಯ್ಕ ಮುಂತಾದವರಿದ್ದರು.

error: