

ಭಟ್ಕಳ ತಾಲೂಕಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ಭಟ್ಕಳದ ಹಾಲಿ ಇರುವ ಸರ್ಕಲ್ ನಾಶವಾಗುತ್ತಿದ್ದು ಸದ್ರಿ ಜಾಗದಲ್ಲಿ ಭಟ್ಕಳ ತಾಲೂಕಿನ ಪ್ರತಿಷ್ಠೆ ಮತ್ತು ಗೌರವದ ಸಂಕೇತವಾಗಿ ಪುನಃ ದೊಡ್ಡ ಪ್ರಮಾಣದ ವೃತ್ತವನ್ನು(ಸರ್ಕಲ್) ನಿರ್ಮಿಸಿ ಸದ್ರಿ ಹೊಸದಾಗಿ ನಿರ್ಮಿಸಲು ಸರ್ಕಲ್ ಗೆ ಭಾರತ ದೇಶಕ್ಕೆ ಮತ್ತು ನಮ್ಮ ಧ್ವಜಕ್ಕೆ ಗೌರವ ನೀಡುವ ಉದ್ದೇಶದಿಂದ ತಿರಂಗಾ ಸರ್ಕಲ್ ಎಂದು ನಾಮಕರಣ ಮಾಡಬೇಕೆಂದು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಿರ್ಮಿಸುತ್ತಿರುವ ಐಆರ್‌ಬಿ ಕಂಪನಿಗೆ ಮತ್ತು ಜಿಲ್ಲಾಡಳಿತಕ್ಕೆ ಸೂಕ್ತ ನಿರ್ದೆಶನ ನೀಡಲು ಭಟ್ಕಳದ ಸಮಸ್ತ ನಾಗರೀಕರ ಪರವಾಗಿ ತಮ್ಮಲ್ಲಿ ಕಳಕಳಿಯಿಂದ ವಿನಂತಿಸುತ್ತಿದ್ದೇನೆ ಎಂದು ಅಧ್ಯಕ್ಷರು ಭಾರತೀಯ ಜನತಾ ಪಾರ್ಟಿ ಯುವಮೋರ್ಚಾ ಭಟ್ಕಳ ಮಹೇಂದ್ರ ಎಸ್ ನಾಯ್ಕ ಮನವಿಯಲ್ಲಿ ತಿಳಿಸಿದ್ದಾರೆ
ಮನವಿಯನ್ನು ಸ್ವೀಕರಿಸಿದ ಶಾಸಕ ಸುನೀಲ್ ನಾಯ್ಕ ಭಟ್ಕಳದಲ್ಲಿ ತಿರಂಗ ಸರ್ಕಲ್ ನಿರ್ಮಿಸಲು ಸಂಸದರೊAದಿಗೆ ಮತ್ತು ಸಚಿವರೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದರು.
ಇದಕ್ಕೆ ಪ್ರತ್ಯುತ್ತರವಾಗಿ ಶಾಸಕ ಸುನೀಲ್ ನಾಯ್ಕ ಸಂಸದರಾದ ಅನಂತಕುಮಾರ್ ಹೆಗಡೆ ಹಾಗೂ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿಯನ್ನು ಸಲ್ಲಿಸಿದ್ದಾರೆ..
ಈ ಸಂದರ್ಭದಲ್ಲಿ ಭಟ್ಕಳ ಬಿಜೆಪಿ ಯುವಮೋರ್ಚ ಅಧ್ಯಕ್ಷರಾದ ಮಹೇಂದ್ರ ನಾಯ್ಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಂತೋಷ ನಾಯ್ಕ, ಜಿಲ್ಲಾ ಕಾರ್ಯದರ್ಶಿ ಉದಯ್ ದೇವಾಡಿಗ, ತಾಲೂಕ ಪ್ರಧಾನ ಕಾರ್ಯದರ್ಶಿ ರವೀಶ್ ನಾಯ್ಕ್, ಕಿರಣ್ ನಾಯ್ಕ್, ಉಪಾಧ್ಯಕ್ಷರಾದ ಚಂದ್ರು ನಾಯ್ಕ್, ತಾಲೂಕ ಕಾರ್ಯದರ್ಶಿ ರಾಘವೇಂದ್ರ ನಾಯ್ಕ, ಹೇಮಂತ್ ನಾಯ್ಕ್, ಸದಸ್ಯರಾದ ವೆಂಕಟೇಶ್ ನಾಯ್ಕ್, ಉಮೇಶ್ ನಾಯ್ಕ, ವಿನೋದ್ ದೇವಾಡಿಗ್, ದುರ್ಗೇಶ್ ನಾಯ್ಕ್, ಯಶವಂತ ನಾಯ್ಕ್ ಮುಂತಾದವರು ಉಪಸ್ಥಿತರಿದ್ದರು

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ