May 18, 2024

Bhavana Tv

Its Your Channel

ಅಂಬ್ಯುಲೆನ್ಸ್ ಭೀಕರ ಅಪಘಾತ: ಟೋಲ್ ಪ್ಲಾಜಾದವರ ನಿರ್ಲಕ್ಷವೇ ಕಾರಣವೇ?

ಭಟ್ಕಳ: ಹೊನ್ನಾವರ ಕಡೆಯಿಂದ ಅತೀ ವೇಗವಾಗಿ ಬಂದ ಅಂಬ್ಯುಲೆನ್ಸ್ವೊಂದು ಚಾಲಕನ ನಿಯಂತ್ರಣ ತಪ್ಪಿ ಟೋಲ್ ಸಂಗ್ರಹಣಾ ಕೌಂಟರ್ಗೆ ಢಿಕ್ಕಿ ಹೊಡೆದ ಭೀಕರ ಘಟನೆ ಬೈಂದೂರು ತಾಲೂಕಿನ ಶಿರೂರು ಟೋಲ್ಗೇಟ್ನಲ್ಲಿ ನಡೆದಿದೆ. ಘಟನೆಯಲ್ಲಿ 4 ಸಾವನ್ನಪ್ಪಿದ್ದು, ರ‍್ವನ ಸ್ಥಿತಿ ಚಿಂತಾಜನಕವಾಗಿದೆ.

ಘಟನೆಯ ಸಿಸಿ ಟಿವಿ ಪೂಟೇಜ್ ವೀಕ್ಷಿಸಿದಾಗ ಕಂಡು ಬಂದದ್ದು ಟೋಲ್ ನಾಕಾದ ಸ್ಪೀಡ್ ಟ್ರಾಕ್ ಮೇಲೆ ಒಂದು ದನ ಮಲಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ, ಹಾಗಾದರೆ ಟೋಲ್ ನವರು ಸ್ಪೀಡ್ ಟ್ರಾಕ್ ಮೇಲೆ ಮಲಗಿದ ದನವನ್ನು ಹಾಗೂ ಟೋಲ್ ನಾಕಾದಲ್ಲಿ ಒಡಾಡುತ್ತಿರುವ ದನವನ್ನು ಯಾಕೆ ಮೊದಲೆ ಒಡಿಸಲಿಲ್ಲ, ದನ ಅಲ್ಲಿ ಇಲ್ಲವಾಗಿದ್ದಲ್ಲಿ ಆ ಅಪಘಾತ ತಪ್ಪಿಸಬಹುದಾಗಿತ್ತು ಎನ್ನುವುದು ಅನೇಕರ ಅಭಿಪ್ರಾಯವಾಗಿದೆ, .
ಅಂಬುಲೇನ್ಸ ಡ್ರೆವರ್ ವೇಗವಾಗಿ ಬರುತ್ತಿರುವಾಗ ಎದುರಿಗೆ ದನ ಇದ್ದದ್ದನ್ನು ನೋಡಿ ನಿಯಂತ್ರಣಕ್ಕೆ ತರಲು ಹೋಗಿ ಅಪಘಾತ ಸಂಭವಿಸಿರಬಹುದು ಎಂದು ಜನರ ಅಭಿಪ್ರಾಯವಾಗಿದೆ, ಅಲ್ಲದೆ ಆ ರಸ್ತೆಗೆ 3ರಿಂದ ನಾಲ್ಕು ಬ್ಯಾರಿಕೇಟ್ ಹಾಕಿ ಬಂದ ಮಾಡಿರುವುಆದರು ಯಾತಕ್ಕೆ ಎನ್ನುವ ಪ್ರಶ್ನೆ ಮೂಡುತ್ತಿದೆ, ಅದು ಅಲ್ಲದೆ ಎರಡು ದಿಕ್ಕಿನಲ್ಲಿಯು ಬಂದ ಮಾಡಿದ ಉದ್ದೇಶವೇನು ? ಒಂದು ಕಡೆ ಬಂದ ಮಾಡಿದರೆ ಸಾಕಾಗುತ್ತಿಲ್ಲವೆ ಎನ್ನುವ ಅನೇಕ ಪ್ರಶ್ನೇಗಳು ಮೂಡುತ್ತಿದೆ.

ಕುಲಂಕುಶವಾಗಿ ಪರಿಶೀಲಿಸಿದರೆ ಇಲ್ಲಿ ಟೋಲ್ ನವರ ತಪ್ಪು ಸ್ಪಷ್ಟವಾಗಿ ಗೋಚರಿಸುತ್ತಿದೆ, ಅಲ್ಲದೇ ಕುಂದಾಪುರದಿಂದ ಕಾರವಾರ ತನಕ IRB ಯವರ ರಸ್ತೆ ಎಷ್ಟು ಅವ್ಯಜ್ಞಾನಿಕವಾಗಿದೆ ಎಂದರೆ ಮಳೆ ಬಂದರೆ ಸಾಕು ರಸ್ತೆಯ ಮೇಲೆ ನೀರು ನಿಂತು ಸಣ್ಣ ವಾಹನ ಚಲಾಯಿಸುವುದು ಕಷ್ಟಕರವಾಗಿದೆ, ಈ ಅಪಘಾತಕ್ಕೆ ಇದು ಒಂದು ಕಾರಣವಾಗಿಬಹುದು, ಟೋಲ್ ಹತ್ತಿರ್ ನೀರು ತುಂಬಿದ್ದು ಎದ್ದು ಕಾಣುತ್ತಿದೆ, ಇದರಿಂದ ಅನೇಕ ಅಪಘಾತಗಳು ರಸ್ತೆ ಉದ್ದಕ್ಕೂ ನಡೆದಿದೆ,
ಈ ಹಿಂದೆ ಉತ್ತರಕನ್ನಡದ ಅಂಬುಲೆನ್ಸ್ ಚಾಲಕರು ಶಿರೂರ ಟೋಲ್ ನಾಕಾದ ಸಿಬ್ಬಂದಿಗಳು ನೀಡುತ್ತಿದ್ದ ಕಿರುಕುಳದ ಬಗ್ಗೆ ಪ್ರತಿಭಟಣೆ ನಡೆಸಿದ್ದನ್ನು ನಾವು ನೋಡಬಹುದು.
ಆಡಳಿತ ಈ ಬಗ್ಗೆ ಕುಲಂಕುಶವಾಗಿ ಪರೀಶೀಲಿಸಿ ಸರ‍್ವಜನಿಕರ ಪ್ರಾಣ ಕಾಪಾಡಬೇಕಾಗಿದೆ.

error: