May 3, 2024

Bhavana Tv

Its Your Channel

ಭಟ್ಕಳಕ್ಕೆ ಎನ್.ಐ,ಎ ಅಧಿಕಾರಿಗಳ ತಂಡ,

ಭಟ್ಕಳ: ಸಾಮಾಜಿಕ ಜಾಲತಾಣದಲ್ಲಿ ಐಸಿಸ್ ಪರ ಒಲವು ತೋರಿ ಕಾಮೆಂಟ್,ಲೈಕ್ ಮಾಡುತ್ತಿದ್ದ ವ್ಯಕ್ತಿಯನ್ನು ಎನ್.ಐ.ಎ. ತಂಡ ತಡರಾತ್ರಿ ವಶಕ್ಕೆ ಪಡೆದುಕೊಂಡಿದೆ ಎಂದು ತಿಳಿದು ಬಂದಿದೆ.
ಬೆAಗಳೂರು ಹಾಗೂ ದೆಹಲಿಯಿಂದ ಬಂದಿದ್ದ ಎನ್.ಐ.ಎ. ಅಧಿಕಾರಿಗಳ ತಂಡ ಎರಡು ದಿನಗಳಿಂದ ಭಟ್ಕಳದಲ್ಲಿದ್ದು ಚಲನವಲಗಳನ್ನು ವೀಕ್ಷಿಸಿ ಭಟ್ಕಳ ಮುಖ್ಯ ರಸ್ತೆಯಲ್ಲಿರುವ ಮನೆಯೊಂದರಿoದ ಅಬ್ದುಲ್ ಮುಕ್ತದಿರ್ ಎನ್ನುವವನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದೆ ಎಂದು ತಿಳಿದು ಬಂದಿದೆ.
ಈ ಹಿಂದೆ 2015 ರಲ್ಲಿ ಸಾಮಾಜಿಕ ಜಾಲ ತಾಣದಲ್ಲಿ ಐಸಿಸ್ ಪರ ಒಲವು ತೋರಿ ಕಾಮೆಂಟ್, ಲೈಕ್ ಮಾಡಿದ್ದ ಆರೋಪದಡಿಯಲ್ಲಿ ದುಬೈ ಪೊಲೀಸರಿಂದ ಬಂಧಿಸಲ್ಪಟ್ಟ ಅದ್ನಾನ್ ಹಸನ್ ದಾಮುದಿ ಪ್ರಕರಣಕ್ಕೂ, ವಶಕ್ಕೆ ಪಡೆದಿರುವಾತನಿಗೂ ಸಂಬoಧ ಇದೆಯೇ ಎನ್ನುವ ಕುರಿತು ತನಿಖಾ ಸಂಸ್ಥೆಗಳು ವಿಚಾರಣೆ ನಡೆಸಲು ಕರೆದುಕೊಂಡು ಹೋಗಿರುವ ಕುರಿತೂ ತಿಳಿದು ಬಂದಿದ್ದು ಸತ್ಯಾಂಶ ಏನು ಎನ್ನುವುದು ಎನ್.ಐ.ಎ. ಅವರಿಂದ ಮಾಹಿತಿ ತಿಳಿದು ಬರಬೇಕಿದೆ.

error: