ಭಟ್ಕಳ : ಇಲ್ಲಿನ ಕಿತ್ರೆ ಶ್ರೀ ಕ್ಷೇತ್ರ ದೇವಿಮನೆಯಲ್ಲಿ ಶ್ರೀ ರಾಮಚಂದ್ರಾಪುರ ಮಠದ ಸೇವಾಖಂಡದ ಯೋಗಕ್ಷೇಮ ವಿಭಾಗ, ಮಹಾಮಂಡಲದ ಸಹಾಯ ವಿಭಾಗ, ಭವತಾರಿಣಿ ವಲಯ ಹಾಗೂ ಶ್ರೀ ಕ್ಷೇತ್ರ ದೇವಿಮನೆ ಆಡಳಿತ ಮಂಡಳಿ ಇವರ ಸಂಯುಕ್ತ ಆಶ್ರಯದಲ್ಲಿ ಆ. 23 ರಂದು ಮಂಗಳವಾರ ಮಂಗಳೂರಿನ ಕೆ ಎಸ್ ಹೆಗ್ಡೆ ಆಸ್ಪತ್ರೆಯ ಕ್ಷೇಮ ಹೆಲ್ತ್ ಕಾರ್ಡ್ ನೋಂದಣಿ ಶಿಬಿರ ನಡೆಯಲಿದೆ.
ಅಂದು ಬೆಳಿಗ್ಗೆ 9.30ರಿಂದ 1 ಗಂಟೆಯವರೆಗೆ ಹೆಲ್ತಕಾರ್ಡ ನೋಂದಣಿ ನಡೆಯಲಿದ್ದು,ವಯಕ್ತಿಕ ಮತ್ತು ಕುಟುಂಬದವರಿಗಾಗಿ ವೈದ್ಯಕೀಯ ಸೌಲಭ್ಯದ ವಿಮಾ ಯೋಜನೆಗಳಿದ್ದು, ವಯಕ್ತಿಕ ವಿಮಾ 30 ಸಾವಿರಕ್ಕೆ 200 ರೂ, 50 ಸಾವಿರಕ್ಕೆ 400 ರೂ. ಹಾಗೂ ಐದು ಜನ ಸದಸ್ಯರಿಗೆ 30 ಸಾವಿರಕ್ಕೆ 400, 50 ಸಾವಿರಕ್ಕೆ 700, ಏಳು ಜನ ಸದಸ್ಯರಿಗೆ 30 ಸಾವಿರಕ್ಕೆ 700ರೂ ಹಾಗೂ 50 ಸಾವಿರದ ವಿಮಾ ಯೋಜನೆಗೆ 1050 ರೂ ನಿಗದಿಪಡಿಸಲಾಗಿದ್ದು, ನೋಂದಣಿಗೆ ಪಡಿತರ ಚೀಟಿ ಹಾಗೂ ಆಧಾರ ಕಾರ್ಡ ಝೆರಾಕ್ಸ ದಾಖಲೆ ತರಬೇಕಿದೆ. ಕ್ಷೇಮ ಹೆಲ್ತ ಕಾರ್ಡ ನೋಂದಣಿ ಯಶಸ್ವಿಗೊಳಿಸುವಂತೆ ಭವತಾರಿಣಿ ಸೀಮಾ ಪರಿಷತ್ತಿನ ಅಧ್ಯಕ್ಷ ವಿನಾಯಕ ಭಟ್ಟ, ದೇವಿಮನೆ ಆಡಳಿತ ಮಂಡಳಿ ಅಧ್ಯಕ್ಷ ಶಿವಾನಂದ ಹೆಬ್ಬಾರ ಹಾಗೂ ಯೋಗಕ್ಷೇಮ ವಿಭಾಗದ ಸತೀಶ ಭಟ್ಟ ಹೊನ್ನಾವರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ