June 15, 2024

Bhavana Tv

Its Your Channel

ಭಟ್ಕಳ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ ವಾರ್ಷಿಕ ಸಾಮಾನ್ಯ ಸಭೆ

ಭಟ್ಕಳ: ಜಿಲ್ಲೆಯ ಪ್ರತಿಷ್ಠಿತ ಭಟ್ಕಳ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ ವಾರ್ಷಿಕ ಸಾಮಾನ್ಯ ಸಭೆಯು ಕಮಲಾವತಿ ರಾಮನಾಥ ಶ್ಯಾನ ಭಾಗ ಸಭಾಗೃಹದಲ್ಲಿ ಬ್ಯಾಂಕಿನ ಅಧ್ಯಕ್ಷ ಜಾಫರ್ ಸಾದೀಕ್ ಅಧ್ಯಕ್ಷತೆಯಲ್ಲಿ ನಡೆಯಿತು.

ಬ್ಯಾಂಕಿನ ವಾರ್ಷಿಕ ವರದಿಯನ್ನು ಮಂಡಿಸಿದ ಅಧ್ಯಕ್ಷ ಜಾಫರ್ ಸಾದೀಕ್, ಜಗತ್ತಿನಾದ್ಯಂತ ಈ ಕೊರೊನಾ ವೈರಸ್‌ನ ಹರಡುವಿಕೆಯ ಕಾರಣದಿಂದಾಗಿ 2021-22ನೇ ಸಾಲಿನ ಆರ್ಥಿಕ ವರ್ಷದಲ್ಲಿ ಬ್ಯಾಂಕಿನ ಸಾಲಗಾರರು ತಾವು ಪಡೆದಿರುವ ಸಾಲದ ಕಂತುಗಳನ್ನು ವರ್ಷಾಂತ್ಯಕ್ಕೆ ಬಡ್ಡಿ ಸಹಿತ ಮರುಪಾವತಿಸಲು ತುಂಬಾ ಅಸಮರ್ಥರಾಗಿದ್ದು, ಕಳೆದ 2022. ಮಾ.31 ಆರ್ಥಿಕ ವರ್ಷಾಂತ್ಯಕ್ಕೆ ಸಾಲ ಮರುಪಾವತಿಯಾಗದೇ ಇರುವ ಸಾಲ ಖಾತೆಗಳನ್ನು ಅನುತ್ಪಾದಕ ಆಸ್ತಿ ಎಂದ ವರ್ಗೀಕರಿಸಲಾಗಿದೆ.
ಈ ರೀತಿಯ ವರ್ಗೀಕರಣದಿಂದ ಬ್ಯಾಂಕಿನ ಒಟ್ಟೂ ಅನುತ್ಪಾದಕ ಆಸ್ತಿಯ ಪ್ರಮಾಣವು ಶೇ.16.78ಕ್ಕೆ ಇಳಿಕೆಯಾಗಿದ್ದು, ನಿಕ್ಕಿ ಅನುತ್ಪಾದಕ ಆಸ್ತಿಯ ಪ್ರಮಾಣವು ಶೇ.11.96ರಿಂದ ಶೇ.9.64ಕ್ಕೆ ಇಳಿಕೆಯಾಗಿದೆ.
ಈ ಆರ್ಥಿಕ ವರ್ಷದಲ್ಲಿ ಬ್ಯಾಂಕು ರು.7.34ಕೋ, ವ್ಯವಹಾರಿಕ ಲಾಭವನ್ನು ಗಳಿಸಿದ್ದು,ಬ್ಯಾಂಕಿನ ಸಾಲ ವಸೂಲಾತಿಯು ಕಡಿಮೆ ಪ್ರಮಾಣದಲ್ಲಿ ಆಗಿರುವುದರಿಂದ ಈ ಲಾಭ ಗಳಿಕೆಯಲ್ಲಿ ರು.1.84ಕೋ ರಖಂನ್ನು ಕರಡು ಸಾಲದ ನಿಧಿಗೆ ಅನುವು ಮಾಡಲಾಗಿದ್ದು, ಕಾರ್ವಿ ಸ್ಟಾಕ್ ಬ್ರೇಕಿಂಗ್ ಲಿ.ರವರ ಕಮರ್ಷಿಯಲ್ ಪೇಪರ್‌ನಲ್ಲಿ ಇರುವ ಹೂಡಿಕೆಗೆ ಸಂಬAಧಿಸಿದAತೆ ಹೂಡಿಕೆಯಲ್ಲಿ ತೊಡಗಿಸಿರುವ ರಖಂ ಸಹ ಮರುಪಾವತಿಯಾಗದೇ ಇರುವುದರಿಂದ ಬ್ಯಾಂಕು ಗಳಿಸಿದ ಲಾಭದಲ್ಲಿ ರು. 5.46 ಕೋ. ರಖಂನ್ನು ಪ್ರತ್ಯೇಕವಾಗಿ ಅನುವು ಮಾಡಲಾಗಿದೆ.
ಈ ರೀತಿ ಬ್ಯಾಂಕು ಕಡ್ಡಾಯವಾಗಿ ಮಾಡಬೇಕಾಗಿರುವ ಅನುವನ್ನು ಮಾಡಿದ ನಂತರ ವರ್ಷಾಂತ್ಯಕ್ಕೆ ಪಾವತಿಯಾಗಬೇಕಾಗಿರುವ ಆದಾಯ ತೆರಿಗೆ ರಖಂನಲ್ಲಿ ರಿಯಾಯಿತಿಯು ದೊರಕಿರುವುದರಿಂದ ಬ್ಯಾಂಕು ರೂ. 48.47 ಲ. ನಿವ್ವಳ ಲಾಭ ಗಳಿಸಿದೆ ಎಂದು ವಿವರಿಸಿದರು.
ಶೇರುದಾರ ಸದಸ್ಯ ಇನಾಯಿತುಲ್ಲಾ ಶಾಬಂದ್ರಿ ಮಾತನಾಡಿ ಅರ್ಬನ್ ಬ್ಯಾಂಕ್ ದೊಡ್ಡ ಮಟ್ಟದಲ್ಲಿ ಹೆಸರು ಗಳಿಸಿದ್ದರೂ ಕನಿಷ್ಠ 10 ಸಾವಿರ ಸಾಲ ನೀಡಲು ಹಿಂದೇಟು ಹಾಕುತ್ತಿರುವುದು ಬೇಸರ ತರಿಸಿದೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ಶ್ರೀಕಾAತ ನಾಯ್ಕ, ಎ.ಎಮ್.ಮುಲ್ಲಾ, ಶಕೀಲ್ ಮುಲ್ಲಾ ಮತ್ತಿತರರು ಮಾತನಾಡಿದರು. ಬ್ಯಾಂಕಿನ ಉಪಾಧ್ಯಕ್ಷ ಎಮ್.ಆರ್. ನಾಯ್ಕ, ನಿರ್ದೇಶಕರಾದ ಮಾಸ್ತಿ ಮೊಗೇರ, ಇಮ್ಮಿಯಾಜ್, ಮಹ್ಮದ್ ಜುಬೇರ್, ಎಕ್ಟರ್ ಗೋಮ್ಸ್, ಸೈಮನ್ ಡಿಸೋಜಾ, ಸಂತೋಷ ಗೊಂಡ, ತುಳಸಿದಾಸ ಮೊಗೇರ, ಪರ್ವೀನ್‌ಬಾಬಿ ಮುಲ್ಲಾ, ಸಂಧ್ಯಾ ಪ್ರಭು, ಲುಬ್ಬಾ ಎಚ್.ಎಸ್. ಬಾಲಚಂದ ರಾವ್, ಎಸ್.ಎಮ್.ಖಾನ್ ಮತ್ತಿತರರು ಉಪಸ್ಥಿತರಿದ್ದರು. ನಿರ್ದೇಶಕ ಶ್ರೀಧರ ನಾಯ್ಕ ವಂದಿಸಿದರು. ಪ್ರಧಾನ ವ್ಯವಸ್ಥಾಪಕ ವಸಂತ ಶಾಸ್ತ್ರೀ ಕಾರ್ಯಕ್ರಮ ನಿರೂಪಿಸಿದರು.

error: