March 19, 2025

Bhavana Tv

Its Your Channel

ನಾಗಯಕ್ಷೆ ದೇವಿಗೆ ನವರಾತ್ರಿ ವೇಳೆ ದಿನಕ್ಕೊಂದು ಅಲಂಕಾರ ಮಾಡಿ ಪೂಜೆ

ಭಟ್ಕಳ ಪಟ್ಟಣದ ಶ್ರೀ ನಾಗಯಕ್ಷೇ ಧರ್ಮದೇವಿ ಸಂಸ್ಥಾನದಲ್ಲಿ ನವರಾತ್ರಿ ಉತ್ಸವ ಸೋಮವಾರ ದಿಂದ ಆರಂಭವಾಗಿದ್ದು ಅ 5ರವರೆಗೆ ಕಾರ್ಯಕ್ರಮ ಜರುಗಲಿದೆ. ನಿತ್ಯ ಮಧ್ಯಾಹ್ನ ಹಾಗೂ ರಾತ್ರಿ ಅನ್ನ ಸಂತರ್ಪಣೆ ನಡೆಯುತ್ತಿದ್ದು ನಾಗಯಕ್ಷೆ ದೇವಿಗೆ ನವರಾತ್ರಿ ವೇಳೆ ದಿನಕ್ಕೊಂದು ಅಲಂಕಾರ ಮಾಡಿ ಪೂಜಿಸಲಾಗುತ್ತದೆ.

ಅಪಾರ ಭಕ್ತಗಣ ಹೊಂದಿರುವ ಕ್ಷೇತ್ರಕ್ಕೆ ರಾಜ್ಯದಿಂದ ಮಾತ್ರವಲ್ಲದೆ, ಹೋರ ದೇಶ ಅಮೆರಿಕ, ಕೆನಡಾ, ಕ್ಯಾಲಿಪೊರ್ನಿಯಾ ದೇಶಗಳಿಂದ ಭಕ್ತರು ಆಗಮಿಸಿ ಸೇವೆ ಸಲ್ಲಿಸುತ್ತಾರೆ. ನವರಾತ್ರಿ ಪರ್ವಕಾಲದಲ್ಲಿ ಇಲ್ಲಿ ಪ್ರತಿನಿತ್ಯ ಸಾವಿರಾರು ಭಕ್ತರು ಭೇಟಿ ನೀಡಿ ದೇವಿಯ ದರ್ಶನ ಪಡೆಯುತ್ತಾರೆ. ನಾಗಯಕ್ಷೆ ಕ್ಷೇತ್ರಕ್ಕೆ ಹೆಚ್ಚು ಭಕ್ತರು ಬರಲು ಮುಖ್ಯ ಕಾರಣ ದೇವಿಯ ಶಕ್ತಿ. ಕಷ್ಟಗಳ ಪರಿಹಾರ ದೇವಿಯಲ್ಲಿ ಮೊರೆ ಸಲ್ಲಿಸಿದರೆ ಶೀಘ್ರ ಒಲಿಯುತ್ತಾಳೆ ಎಂಬ ನಂಬಿಕೆ ಭಕ್ತರದ್ದು. ದೇವಸ್ಥಾನದ ಧರ್ಮದರ್ಶಿ ರಾಮದಾಸ ಪ್ರಭು ಅವರ ಮೈಮೇಲೆ ಪ್ರತಿ ಮಂಗಳವಾರ, ಶುಕ್ರವಾರ ಹಾಗೂ ನವರಾತ್ರಿಯಲ್ಲಿ 10 ದಿನ ದೇವಿಯ ಆಹ್ವಾನವಾಗುತ್ತದೆ. ಈ ವೇಳೆ ಕಷ್ಟಗಳ ಪರಿಹಾರಕ್ಕೆ ಸಾವಿರಾರು ಜನರು ದೇವಿಯಲ್ಲಿ ಪ್ರಶ್ನೆಯಿಟ್ಟು ಪರಿಹಾರ ಕಂಡುಕೊಳ್ಳುತ್ತಾರೆ. ಸಂತತಿ, ಆರೋಗ್ಯ, ಉದ್ಯೋಗ, ವ್ಯಾಜ್ಯ ಸೇರಿ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಾರೆ.

ಸಾಮಾಜಿಕ ಕಾರ್ಯ: ಪಟ್ಟಣದ ವಿವಿ ರಸ್ತೆಯಲ್ಲಿರುವ ನಾಗಮಾಸ್ತಿ ದೇವಸ್ಥಾನ ಕೇವಲ ಧಾರ್ಮಿಕ ಮಾತ್ರವಲ್ಲದೆ ಸಾಮಾಜಿಕ ಕ್ಷೇತ್ರದಲ್ಲೂ ಮುಂದಿದೆ. ಶಿಕ್ಷಣ, ಉದ್ಯೋಗ, ಬಡಹೆಣ್ಣುಮಕ್ಕಳ ಮದುವೆ ಹೀಗೆ ಕಷ್ಟ ಎಂದು ಬಂದವರಿಗೆ ಎಂದೂ ಈ ಸಂಸ್ಥಾನ ವಾಪಸ್ ಕಳುಹಿಸಿಲ್ಲ. ದೇವಿಯ ಅಪ್ಪಣೆಯಂತೆ 6 ಕೋಟಿ ರೂ. ವೆಚ್ಚದಲ್ಲಿ ನಾಗಯಕ್ಷೆ
ಧಮಾರ್ಥ ಸಭಾಭವನ ನಿರ್ಮಿಸಿ ಉಚಿತವಾಗಿ ಮದುವೆ ಸಮಾರಂಭಗಳಿಗೆ ನೀಡಲಾಗುತ್ತಿದೆ. ಸಭಾಭವನದ ಪಕ್ಕ ಗೋಶಾಲೆ ನಿರ್ಮಿಸಿ 50 ಗೋವು ಪೋಷಿಸಿಲಾಗುತ್ತಿದೆ. ನಾಗಯಕ್ಷೆ ಬಾಲವಿಹಾರ ತರೆದಿದ್ದು 52 ಮಕ್ಕಳು ಉಚಿತ ಶಿಕ್ಷಣ ಪಡೆಯುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗೆ ಪ್ರತಿವರ್ಷ ಉಚಿತ ಔಷಧ ನೀಡಲಾಗುತ್ತದೆ.
ಅ.1ಕ್ಕೆ ಶ್ರೀ ಶ್ರೀಧರ ಸ್ವಾಮಿ ಸಭಾಗೃಹ ಉದ್ಘಾಟನೆ
ಶ್ರೀ ನಾಗಯಕ್ಷೆ ಧರ್ಮ ಸಂಸ್ಥಾನದ ಸೇವೆ ಮುಂದುವರೆದುಕೊAಡೇ ಇದ್ದು, ಭಟ್ಕಳ ಶ್ರೀ ಗುರುಸುಧೀಂದ್ರ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ‘ಶ್ರೀ ಶ್ರೀಧರ ಸ್ವಾಮಿ ಹೆಸರಿನಲ್ಲಿ ನಿರ್ಮಿಸಲಾದ ಸದ್ಗುರು ಶ್ರೀಧರ ಸಭಾಭವನವನ್ನು ಅಕ್ಟೋಬರ್ 1ರಂದು ಉದ್ಘಾಟಿಸಲು ತೀರ್ಮಾನಿಸಲಾಗಿದೆ.ಎಲ್ಲವನ್ನೂ ಶ್ರೀ ದೇವಿಯೇ ನಡೆಸಿಕೊಂಡು ಹೋಗುತ್ತಾಳೆ. ದೇವಿಯ ಅಣತಿಯಂತೆ ನವರಾತ್ರಿಯ ಪರ್ವಕಾಲದಲ್ಲಿ ಲೋಕಾರ್ಪಣೆಯಾಗುತ್ತಿದೆ ಎನ್ನುತ್ತಾರೆ ದೇವಸ್ಥಾನದ ಧರ್ಮದರ್ಶಿ ರಾಮದಾಸ ಪ್ರಭು,
ಗಣ್ಯರ ಭೇಟಿ: ಶಿಕ್ಷಣ ಸಚಿವ ಬಿ.ಸಿ. ನಾಗೇಶ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಶಾಸಕರು, ನ್ಯಾಯಾಧೀಶರು ಸೇರಿ ಅನೇಕ ಗಣ್ಯರು ದೇವಿಯ ದರ್ಶನ ಪಡೆದಿದ್ದಾರೆ. ಹುಬ್ಬಳ್ಳಿ ಕಿರಾಣಿ ವರ್ತಕರೊಬ್ಬರು ನವರಾತ್ರಿ ಲಕ್ಷ ರೂ. ಮೌಲ್ಯದ ಆಹಾರ ಧಾನ್ಯ ದೇಣಿಗೆ ನೀಡಿದ್ದಾರೆ.

error: