May 5, 2024

Bhavana Tv

Its Your Channel

ನವೀಕೃತಗೊಂಡ ಶ್ರೀ ಶ್ರೀಧರ ಸ್ವಾಮಿ ಸಭಾಗೃಹದ ಉದ್ಘಾಟನಾ ಕಾರ್ಯಕ್ರಮ

ಭಟ್ಕಳ: ಭಟ್ಕಳ ಎಜುಕೇಶನ್ ಟ್ರಸ್ಟ’ಗೆ ಶ್ರೀ ನಾಗಯಕ್ಷೇ ಚ್ಯಾರಿಟೇಬಲ್ ಟ್ರಸ್ಟ್ ಭಟ್ಕಳ ಇವರಿಂದ ನವೀಕೃತಗೊಂಡ ಶ್ರೀ ಶ್ರೀಧರ ಸ್ವಾಮಿ ಸಭಾಗೃಹದ ಉದ್ಘಾಟನಾ ಕಾರ್ಯಕ್ರಮ ಜರುಗಿತು.

ಶ್ರೀ ನಾಗಯಕ್ಷೇ ಧರ್ಮದೇವಿ ಸಂಸ್ಥಾನದ ಧರ್ಮದರ್ಶಿಗಳಾದ ರಾಮದಾಸ ಪ್ರಭುರವರು ಸಭಾಗೃಹವನ್ನು ಉದ್ಘಾಟಿಸಿ “ಶ್ರೀದೇವಿಯ ಅನೂಜ್ಞೆಯಂತೆ ಈ ಸಭಾಗೃಹವನ್ನು ನಿರ್ಮಿಸಲಾಗಿದೆ, ವಿದ್ಯಾರ್ಥಿಗಳು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಅಲ್ಲದೇ ಪಾಲಕರಿಗೆ, ಶಿಕ್ಷಕರಿಗೆ ಗೌರವ ತರುವಂತಹ ಕೆಲಸವನ್ನು ಮಾಡಬೇಕು” ಎಂದು ಕಿವಿಮಾತು ನೀಡಿದರು.

ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕುಮಟಾದ ಕೊಂಕಣ ಎಜ್ಯುಕೇಶನ್ ಟ್ರಸ್ಟ್’ನ ಕಾರ್ಯದರ್ಶಿಗಳು ಹಾಗೂ ಉದ್ಯಮಿಗಳಾದ ಮುರಳೀಧರ ಪ್ರಭುರವರು ಮಾತನಾಡಿ “ಈ ಸಂಸ್ಥೆಯು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ದೂರದೃಷ್ಟಿವುಳ್ಳ ಆಡಳಿತ ಮಂಡಳಿಯೊAದಿಗೆ ಪ್ರಾಮಾಣಿಕವಾಗಿ, ಶೃದ್ಧೆಯಿಂದ ದುಡಿಯುವ ಶಿಕ್ಷಕವೃಂದವೇ ಇದರ ಯಶಸ್ಸಿಗೆ ಕಾರಣ, ಇದರ ಅಭಿವೃದ್ಧಿಯ ಪರ್ವ ಹೀಗೆಯೇ ಮುಂದುವರಿಯಲೆAದು ಆಶಿಸುತ್ತೇನೆ” ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಭಟ್ಕಳ ಎಜುಕೇಶನ್ ಟ್ರಸ್ಟ’ನ ಅಧ್ಯಕ್ಷರಾದ ಡಾ. ಸುರೇಶ್ ನಾಯಕ್ ಮಾತನಾಡಿ “ನಮ್ಮ ಹಲವು ದಿನದ ಕನಸು ನನಸಾಗಿಸಿ ಸಭಾಗೃಹವನ್ನು ನಿರ್ಮಿಸುವಲ್ಲಿ ನೆರವಾದ ರಾಮದಾಸ ಪ್ರಭುರವರು ಅಭಿನಂದನಾರ್ಹರು, ಅಲ್ಲದೆ ಅವರ ಸಾಮಾಜಿಕ ಕಳಕಳಿಯನ್ನು ಶ್ಲಾಘಿನೀಯ” ಎಂದು ಹೇಳಿದರು.

ಭಟ್ಕಳ ಎಜುಕೇಶನ್ ಟ್ರಸ್ಟ’ನ ಟ್ರಸ್ಟಿ ಮ್ಯಾನೇಜರ್ ರಾಜೇಶ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ ಭಟ್ಕಳ ಎಜುಕೇಶನ್ ಟ್ರಸ್ಟ್ ಸಾಗಿಬಂದ ಹಾದಿಯನ್ನು ಸ್ಮರಿಸುತ್ತ, ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು.

ನ್ಯೂ ಇಂಗ್ಲೀಷ ಪಿ.ಯು ಕಾಲೇಜಿನ ಪ್ರಾಂಶುಪಾಲ ಡಾ.ವಿರೇಂದ್ರ ಶ್ಯಾನಭಾಗ ಸ್ವಾಗತಿಸಿದರೆ, ಶ್ರೀ ಗುರು ಸುಧೀಂದ್ರ ಕಾಲೇಜಿನ ಪ್ರಾಂಶುಪಾಲ ಶ್ರೀನಾಥ ಪೈ ವಂದಿಸಿದರು. ಉಪನ್ಯಾಸಕರಾದ ದೇವೇಂದ್ರ ಕಿಣಿ ಹಾಗೂ ದೀಪಾ ನಾಯ್ಕ ಕಾರ್ಯಕ್ರಮವನ್ನು ನಿರೂಪಿಸಿದರು.

ಈ ಸಂದರ್ಭದಲ್ಲಿ ಉದ್ಯಮಿಗಳಾದ ದಿಗಂಬರ ಶೇಟ್, ಬೆಂಗಳೂರಿನ ಮಂಜುನಾಥ ಪ್ರಭು, ಊರನಾಗರಿಕರು, ಭಟ್ಕಳ ಎಜುಕೇಶನ್ ಟ್ರಸ್ಟ’ನ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರಲ್ಲದೇ, ಬಿಎ ಜರ್ನಲಿಸಂ ವಿಭಾಗದ ವಿದ್ಯಾರ್ಥಿಗಳು ವರದಿಗಾರರಾಗಿ ಕಾರ್ಯಕ್ರಮವನ್ನು ಸಾಕ್ಷೀಕರಿಸಿದ್ದು ವಿಶೇಷವಾಗಿತ್ತು.

error: