May 3, 2024

Bhavana Tv

Its Your Channel

ನಾದಸೌರಭ ಶಾಸ್ತ್ರಿಯ, ಸುಗಮ ಸಂಗೀತ ಕಾರ್ಯಕ್ರಮ

ಭಟ್ಕಳ : ಶಿರಾಲಿಯ ಎಸ್‌ಡಿಪಿ ಸೂಪರ್ ಮಾರ್ಕೆಟ್ ಕಟ್ಟಡದಲ್ಲಿ ಹುರುಳಿಸಾಲಿನ ನಾದಭಾರತಿ ಸಂಗೀತ ಅನುಸಂಧಾನ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರವಾರ ಇವರ ಸಹಯೋಗದಲ್ಲಿ ಏರ್ಪಡಿಸಲಾದ ನಾದಸೌರಭ ಶಾಸ್ತಿçÃಯ, ಸುಗಮ ಸಂಗೀತ ಕಾರ್ಯಕ್ರಮವನ್ನು ಎಸ್‌ಡಿಪಿ ಸೂಪರ್ ಮಾರ್ಕೆಟ್‌ನ ಮಾಲಿಕ ಶ್ರೀನಿವಾಸ ಹೆಗಡೆ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಸಂಗೀತಕ್ಕೆ ತನ್ನದೇ ಶಕ್ತಿ ಇದೆ. ಸಂಗೀತ ಮನಸ್ಸಿಗೆ ಆನಂದವನ್ನುAಟು ಮಾಡುತ್ತದೆ. ವೇದ ಮತ್ತು ಸಂಗೀತಕ್ಕೆ ಸಾಮ್ಯವಿದೆ. ಸಂಗೀತವನ್ನು ಅಭ್ಯಾಸ ಮಾಡುವುದರಿಂದ ಹೆಚ್ಚು ಸದುಪಯೋಗವಿದೆ ಎಂದರು. ಮುಖ್ಯ ಅತಿಥಿಯಾಗಿದ್ದ ಉದ್ಯಮಿ ಡಿ ಜೆ ಕಾಮತ್ ಮಾತನಾಡಿ, ಸಂಗೀತ ಕಲಿಯುವುದು ಅಷ್ಟು ಸುಲಭವಲ್ಲ. ಒಮ್ಮೆ ಸಂಗೀತದ ಬಗ್ಗೆ ಆಸಕ್ತಿ ಮೂಡಿದರೆ ಅದರಿಂದ ದೂರ ಸರಿಯಲು ಸಾಧ್ಯವಿಲ್ಲ. ಸಂಗೀತ ಕಾರ್ಯಕ್ರಮಕ್ಕೆ ತಮ್ಮಿಂದ ಎಲ್ಲಾ ರೀತಿಯ ಸಹಾಯ ಸಹಕಾರ ಇದೆ ಎಂದರು. ಇನ್ನೊಬ್ಬ ಮುಖ್ಯ ಅತಿಥಿ ರಾಘವೇಂದ್ರ ಹೆಬ್ಬಾರ ಮಾತನಾಡಿ,ಭಟ್ಕಳದಲ್ಲಿ ಸಾಕಷ್ಟು ಜನರು ಶಾಸ್ತಿçÃಯ ಮತ್ತು ಸುಗಮ ಸಂಗೀತವನ್ನು ಅಭ್ಯಾಸ ಮಾಡಿದ್ದಾರೆ. ಅಂತವರಿಗೆ ಇದೊಂದು ಉತ್ತಮ ವೇದಿಕೆಯಾಗಿದೆ. ಯಾವುದೇ ಕಾರ್ಯಕ್ರಮವಿರಲಿ ಎಲ್ಲರೂ ಒಗ್ಗಟ್ಟಾಗಿ ತೊಡಗಿಸಿಕೊಂಡರೆ ಖಂಡಿತ ಯಶಸ್ವಿ ಆಗುತ್ತದೆ. ಜನಾರ್ಧನ ಹೆಗಡೆಯವರು ಬಹುಮುಖ ಕಲಾವಿದರಾಗಿದ್ದು, ಅವರಿಂದ ತಿಳಿದುಕೊಳ್ಳಬೇಕಾಗಿರುವುದು ಬಹಳಷ್ಟು ಇದೆ ಎಂದರು. ಅಧ್ಯಕ್ಷತೆ ವಹಿಸಿದ್ದ ನಾದಭಾರತಿ ಸಂಗೀತ ಅನುಸಂಧಾನ ಪ್ರತಿಷ್ಠಾನದ ಅಧ್ಯಕ್ಷ ಜನಾರ್ಧನ ಹೆಗಡೆ ಮಾತನಾಡಿ, ಎಲ್ಲರ ಸಹಕಾರದಿಂದ ನಾದಸೌರಭ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಾರ್ಯಕ್ರಮ ನಡೆಸಲು ಎಲ್ಲರ ಪಾಲ್ಗೊಳ್ಳುವಿಕೆ ಮತ್ತು ಸಹಕಾರ ಅಗತ್ಯವೆಂದರು. ನಾದಭಾರತಿ ಸಂಗೀತ ಪ್ರತಿಷ್ಠಾನದ ಕಾರ್ಯದರ್ಶಿ ಪರಮೇಶ್ವರ ಭಟ್ಟ ಸ್ವಾಗತಿಸಿದರು. ಅನಿತಾ ಭಟ್ಟ ನಿರೂಪಿಸಿದರು. ಗಜಾನನ ಹೆಬ್ಬಾರ ವಂದಿಸಿದರು. ಸಭಾ ಕಾರ್ಯಕ್ರಮದ ನಂತರದಲ್ಲಿ ನಡೆದ ಸಂಗೀತ ಕಾರ್ಯಕ್ರಮ ಪ್ರೇಕ್ಷಕರ ಮನರಂಜಿಸಿತು.

error: