

ಕಾಂಗ್ರೆಸ್‌ನಲ್ಲಿನ ಬದಲಾವಣೆ, ನೂತನ ಆಯ್ಕೆಯೆಲ್ಲವೂ ಹೈಕಮಾಂಡ ಮಾಡುತ್ತದೆ ಹೊರತು ಮಂಕಾಳ ವೈದ್ಯ ಅಲ್ಲ – ಮಂಕಾಳ ವೈದ್ಯ ಸ್ಪಷ್ಟನೆ.
ಭಟ್ಕಳ: ಕಾಂಗ್ರೆಸ್ ಪಕ್ಷ ಸಮುದ್ರವಿದ್ದಂತೆ ಇಲ್ಲಿ ಎಲ್ಲ ಬದಲಾವಣೆಯನ್ನ ಹೈಕಮಾಂಡ ಮಾಡುತ್ತದೆ ವಿನ: ಮಂಕಾಳ್ ವೈದ್ಯ ಮಾಡೋದಲ್ಲ ಎನ್ನುವ ಸಂದೇಶವನ್ನ ಮಾಜಿ ಶಾಸಕರ ಕಾಂಗ್ರೆಸ್ಸಿನ ಪ್ರಭಾವಿ ನಾಯಕರಾದ ಸನ್ಮಾನ್ಯ ಮಂಕಾಳ್ ವೈದ್ಯ ಅವರು ನೀಡಿದರು.
ಅವರು ಗುರುವಾರದಂದು ಇಲ್ಲಿನ ಶಿರಾಲಿಯ ಹಳೆಕೋಟೆ ಹನುಮಂತ ದೇವಸ್ಥಾನದ ಸಭಾಂಗಣದಲ್ಲಿ ಜರುಗಿದ ಭಟ್ಕಳ ಬ್ಲಾಕ್ ಕಾಂಗ್ರೆಸ್ಸಿನ ನೂತನ ಅಧ್ಯಕ್ಷರ ಪದಗ್ರಹಣದ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಹಿಂದಿನ ಅಧ್ಯಕ್ಷರಾಗಿದ್ದ ಸಂತೋಷ ನಾಯ್ಕರು ಉತ್ತಮ ಕೆಲಸ ಮಾಡಿದ್ದಾರೆ ಹೀಗಾಗಿ ನಾನು ಅವರನ್ನ ಅಭಿನಂದಿಸುತ್ತೇನೆ ಮತ್ತು ನೂತನ ಅಧ್ಯಕ್ಷರನ್ನ ಸ್ವಾಗತಿಸುತ್ತೇನೆಂದರು. ಹಾಲಿ ಅಧ್ಯಕ್ಷರಾದ ವೆಂಕಟೇಶ ನಾಯ್ಕರ ತಂದೆ ನಾರಾಯಣ ನಾಯ್ಕರು 25 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿ ದುಡಿದಿದ್ದಾರೆ ಅವರ ಅಣ್ಣ ಕೆ.ಎನ್.ನಾಯ್ಕ ಪಕ್ಷದ ಅಧ್ಯಕ್ಷರಾಗಿ ದುಡಿದಿದ್ದಾರೆ. ದಿ.ಕಿಶೋರ ನಾಯ್ಕರ ಕೊಡುಗೆ ಪಕ್ಷಕ್ಕಿದೆ ಅಂತಹ ಕಾಂಗ್ರೆಸ್ಸಿನ ಇತಿಹಾಸವಿರುವ ಕುಟುಂಬದ ಸದಸ್ಯನನ್ನ ಕಾಂಗ್ರೆಸ್ಸಿನ ಕಾರ್ಯಕರ್ತರೇ ಆಯ್ಕೆ ಮಾಡಿದ್ದಾರೆಂದು ಹರ್ಷ ವ್ಯಕ್ತಪಡಿಸಿದರು. ಇದೆ ಸಂದರ್ಭದಲ್ಲಿ ಸಂತೋಷ ನಾಯ್ಕರ ಕುಟುಂಬವೆ ಬೇರೆ ವೆಂಕಟೇಶ ನಾಯ್ಕರ ಕುಟುಂಬವೇ ಬೇರೆ ಬೇರೆ ಎನ್ನುವ ಸ್ಪಷ್ಟನೆಯನ್ನ ನೀಡಿದರು.
ನನಗೆ ಸರಕಾರ 50 ಸಾವಿರ ರೂ. ನೀಡುತ್ತಿದೆ ಕಾರಣ ಶಾಸಕನಾಗಿ ಸೇವೆ ಮಾಡಿದ್ದಕ್ಕೆ ಅದು ಸಹ ನಿಮ್ಮೆಲರ ತೆರಿಗೆ ಹಣವಾಗಿದೆ. ನಾನು ಅದನ್ನು ನಮ್ಮ ಪಕ್ಷಕ್ಕೆ ಖರ್ಚು ಮಾಡುತ್ತಿದ್ದೇನೆ. ಈ ಹಿಂದಿನ ನನ್ನ ಅವದಿಯಲ್ಲಿನ ಬ್ಲಾಕ ಅಧ್ಯಕ್ಷರಿಂದ ಖರ್ಚು ಮಾಡಿಸಿಲ್ಲ. ಈಗ ಶಾಸಕನಿಲ್ಲದ ವೇಳೆಯಲ್ಲು ಸಹ ಖರ್ಚು ಮಾಡಿಸಲು ಅವಕಾಶ ಕೊಟ್ಟಿಲ್ಲ. ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ಮಾತ್ರ ಅವರ ಸ್ವಂತ ಹಣದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದ ಅವರು ಪಕ್ಷಕ್ಕೆ ಮುಖಂಡರ ಅವಶ್ಯಕತೆ ಇಲ್ಲದೇ ಇರಬಹುದು ಆದರೆ ಕಾರ್ಯಕರ್ತರಿಗೆ ಮುಖಂಡರ ಅವಶ್ಯಕತೆ ಇದೆ. ಸಭೆ ಸಮಾರಂಭಗಳನ್ನು ನನ್ನ ಮನೆಯಲ್ಲಿಯೇ ಮಾಡಬೇಕೆಂಬ ಆಸೆ ನನ್ನಲ್ಲಿಲ್ಲ ಕಾರಣ ನನ್ನ ಮನೆ ಕಾರ್ಯಕರ್ತರ ಮನೆಯಂತೆಯೇ ಆಗಿದೆ. ನೂತನ ಬ್ಲಾಕದ ಅಧ್ಯಕ್ಷರ ಆಯ್ಕೆಯು ಕಾರ್ಯಕರ್ತರದ್ದಾಗಿದೆ ಹೊರತು ಮಂಕಾಳ ವೈದ್ಯರ ಆಯ್ಕೆಯಲ್ಲ.
ನಾನು ಓರ್ವ ಮಾಜಿ ಶಾಸಕನಾಗಿ ಪಕ್ಷಕ್ಕೆ ಹಾಗೂ ಕಾರ್ಯಕರ್ತರ ಸಂಘಟನೆಗೆ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದೇನೆ. ಈ ಹಿಂದಿನ ಮಾಜಿ ಶಾಸಕರು ಸಚಿವರು ಸಹ ಕ್ರಿಯಾಶೀಲರಾಗಿ ಕೆಲಸ ಮಾಡಲಿ ಅದನ್ನು ಬಿಟ್ಟು ಇರುವ ಎಲ್ಲಾ ಪಕ್ಷಕ್ಕೆ ಸೇರಿ ವಾಪಸ್ಸು ನಮ್ಮ ಪಕ್ಷಕ್ಕೆ ಬರುವ ಮಾಜಿ ಶಾಸಕ ನಾನಲ್ಲ. ಅಧ್ಯಕ್ಷರ ಬದಲಾವಣೆಯ ವಿಚಾರದಲ್ಲಿ ನೇರವಾಗಿ ನನ್ನನ್ನು ಸಂಪರ್ಕಿಸಿರಿ ಅದನ್ನು ಹೊರತುಪಡಿಸಿ ಎಲ್ಲೋ ಕುಳಿತು ಕಾಂಗ್ರೆಸ್ ಪಕ್ಷದ ಕೆಲಸ ಮಾಡದೇ ಹೇಳಿಕೆ ಕೊಡುವುದಲ್ಲ ಎಂದು ಗುಡುಗಿದರು.
ಸಮಾರಂಭವನ್ನು ಉದ್ಘಾಟಿಸಿದ ಜಿಲ್ಲಾ ಕಾಂಗ್ರೆಸ್ಸಿನ ಅಧ್ಯಕ್ಷ ಭೀಮಣ್ಣ ನಾಯ್ಕ ಅವರು ಮಾತನಾಡಿ ‘ಭಟ್ಕಳ ಕಾಂಗ್ರೆಸ್ ಪಕ್ಷಕ್ಕೆ ಇನ್ನೂ ಶಕ್ತಿ ನೀಡುವ ಉದ್ದೇಶದಿಂದ ಹೊಸ ಅಧ್ಯಕ್ಷರನ್ನ ನೇಮಕ ಮಾಡಲಾಗಿದೆ. ಹುದ್ದೆ ಸೀಮಿತವಲ್ಲ. ವರಿಷ್ಠರ ಆದೇಶದಂತೆ ಹುದ್ದೆ, ಸ್ಥಾನ ಮಾನ ಬದಲಾಗಲಿದೆ. ಇವೆಲ್ಲದರ ಮಧ್ಯೆ ಪಕ್ಷ ಸಂಘಟನೆಯ ಜವಾಬ್ದಾರಿಯುತ ಕೆಲಸ ನಿರಂತರವಾಗಿರಬೇಕು. ಹಿಂದಿನ ಅಧ್ಯಕ್ಷರು ಕೂಡ ಉತ್ತಮ ಕೆಲಸ ಮಾಡಿದ್ದಾರೆ. ಆದರೆ ಪಕ್ಷ ಸಂಘಟಿಸುವ ಅವಕಾಶವನ್ನು ಉಳಿದ ನಿಷ್ಠಾವಂತ ಕಾರ್ಯಕರ್ತರಿಗೂ ನೀಡಬೇಕಾಗುತ್ತದೆ.
ಈ ಹಿಂದೆ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಓರ್ವ ಶಾಸಕರು ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಸಾವಿರ ಕ್ಕೂ ಅಧಿಕ ಕೋಟಿ ರೂ.ಗಳನ್ನು ಅನುದಾನದಲ್ಲಿ ತಂದು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಈಗ ಎಷ್ಟು ಅಭಿವೃದ್ಧಿ ಆಗಿದೆ ಎಷ್ಟು ಅಭಿವೃದ್ಧಿ ಕೆಲಸ ಆಗಿದೆ ಎಂಬುದು ಬಿಜೆಪಿ ಸರಕಾರ ಹಾಗೂ ಶಾಸಕರು ಜನರ ಮುಂದೆ ಇಡಲಿ ಎಂದು ಸವಾಲು ಹಾಕಿದರು.
ರಾಜ್ಯದಲ್ಲಿ ಸದ್ಯ ವೋಟರ್ ಲಿಸ್ಟರ ಹಗರಣ ಬೆಳಕಿಗೆ ಬಂದಿದ್ದು, ಅದರಂತೆ ಭಟ್ಕಳ ಹೊನ್ನಾವರ ಕ್ಷೇತ್ರದಲ್ಲಿ ಒಟ್ಟು 18250ಕ್ಕೂ ಅಧಿಕ ವೋಟರ್ಸಗಳ ಹೆಸರನ್ನು ಡೀಲಿಟ್ ಮಾಡಲಾಗಿರುವ ಬಗ್ಗೆ ನಮ್ಮಲ್ಲಿ ದಾಖಲೆ ಸಹಿತ ಮಾಹಿತಿಯಿದ್ದು, ಈ ರೀತಿಯ ನಡೆಯು ಬಿಜೆಪಿಯ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಕಗ್ಗೋಲೆ ಮಾಡಿದಂತಾಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ದಾಖಲೆಯನ್ನು ವೇದಿಕೆಯಲ್ಲಿ ಪ್ರದರ್ಶನ ಮಾಡಿದರು.
ಮಾಜಿ ಸಚಿವ ಆರ್.ಎನ್.ನಾಯ್ಕ ಮಾತನಾಡಿ ‘ಈ ಹಿಂದಿನ ಬ್ಲಾಕ ಅಧ್ಯಕ್ಷರಿಂದ ಜಿಲ್ಲಾ ಸಮಿತಿಯು ರಾಜೀನಾಮೆ ಪಡೆದುಕೊಂಡು ಪಕ್ಷ ಸಂಘಟನೆಯ ಉತ್ತಮ ಹುದ್ದೆ ನೀಡಬೇಕಾಗಿತ್ತು. ಪಕ್ಷ ಸಂಘಟನೆಯ ಜೊತೆಗೆ ಸ್ವಂತ ಖರ್ಚಿನಲ್ಲಿ ಕೆಲಸ ಮಾಡಿರುವ ಸಂತೋಷ ನಾಯ್ಕ ಅವರನ್ನು ಗುರುತಿಸಲು ಕೆಲಸ ಜಿಲ್ಲಾ ಸಮಿತಿಯಿಂದ ಆಗಬೇಕಾಗಿತ್ತು. ಇದು ಪಕ್ಷಕ್ಕೆ ಪೆಟ್ಟು ಬೀಳಲಿದೆ. ಜಿಲ್ಲೆಯ ಯಾವೊಬ್ಬ ಬ್ಲಾಕ್ ಅಧ್ಯಕ್ಷರು ಸಹ ಕ್ರಿಯಾಶೀಲರಾಗಿಲ್ಲ ಎಂದು ಭೀಮಣ್ಣ ನಾಯ್ಕ ಅವರಲ್ಲಿ ಪ್ರಶ್ನಿಸಿದ ಅವರು ಈ ಬಾರಿ ಕಾಂಗ್ರೆಸ್ ಭಟ್ಕಳ ಗೆಲ್ಲಬೇಕಾದರೆ ತಂಜೀA ಜೊತೆ ಸೇರಿ ಮುಸ್ಲಿಂ ಮತಗಳನ್ನು ಪಡೆಯುವ ಕೆಲಸ ಕಾಂಗ್ರೆಸಿAದ ಆದಲ್ಲಿ ಮಾತ್ರ ಗೆಲ್ಲಲಿದೆ ಎಂದು ಸ್ವಪಕ್ಷದ ಸಭೆಯಲ್ಲಿಯೇ ಕಿವಿಮಾತು ಹೇಳಿದರು.
ನಂತರ ಭಟ್ಕಳ ಬ್ಲಾಕ್ ಕಾಂಗ್ರೆಸ್ಸಿನ ನೂತನ ಅಧ್ಯಕ್ಷ ವೆಂಕಟೇಶ ನಾಯ್ಕ ಅವರು ಮಾತನಾಡಿ ನಮ್ಮ ಕುಟುಂಬವು ಕಾಂಗ್ರೆಸಗೆ ಮಾಡಿದ ಸೇವೆ ಸ್ಮರಿಸಿ ನನಗೆ ಈ ಅವಕಾಶ ಸಿಕ್ಕಿದೆ. ಇದು ಅವಿಸ್ಮರಣೀಯ ದಿನ ನನಗೆ ಎಂದ ಅವರು ಮುಂದಿನ ಚುನಾವಣೆಗೆ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಿ ನಮ್ಮ ಅಭ್ಯರ್ಥಿ ಗೆಲ್ಲಿಸುವ ಕೆಲಸ ಮಾಡಲಿದ್ದೇನೆ. ಬಿಜೆಪಿಯು ತನ್ನ ದಲ್ಲಾಳಿಗಳನ್ನು ಇರಿಸಿಕೊಂಡು ದೇಶವನ್ನು ಲೂಟಿ ಹೊಡೆಯುತ್ತಿದೆ ಎಂದು ಕಿಡಿಕಾರಿದರು.
ಇದಕ್ಕೂ ಪೂರ್ವದಲ್ಲಿ ನೂತನ ಅಧ್ಯಕ್ಷ ವೆಂಕಟೇಶ ನಾಯ್ಕ ಅವರಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಹಾಗೂ ಮಾಜಿ ಶಾಸಕ ಮಂಕಾಳ ವೈದ್ಯ ಅವರು ಕಾಂಗ್ರೆಸ್ ಬಾವುಟ ನೀಡಿ ಅಧಿಕಾರ ಹಸ್ತಾಂತರಿಸಲಾಯಿತು.
ವೇದಿಕೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರ.ಕಾ.ಎಸ್.ಕೆ.ಭಾಗವತ, ಅಲ್ಪ.ಸಂ. ಜಿಲ್ಲಾ ಅಧ್ಯಕ್ಷ ಅಬ್ದುಲ್ ಮಜೀದ, ಜಿಲ್ಲಾ ಪಂ. ಮಾಜಿ ಅಧ್ಯಕ್ಷೆ ಜಯಶ್ರೀ ಮೊಗೇರ, ತಾ.ಪಂ.ಮಾಜಿ ಅಧ್ಯಕ್ಷ ಈಶ್ವರ ನಾಯ್ಕ, ಮಂಕಿಯ ಚಂದ್ರುಗೌಡ, ನಾಮಧಾರಿ ಮುಖಂಡ ವಾಮನ ನಾಯ್ಕ, ಶಿರಾಲಿ ಗ್ರಾಮ ಪಂ ಅಧ್ಯಕ್ಷೆ ರೇವತಿ ನಾಯ್ಕ, ಬೆಂಗ್ರೆ ಗ್ರಾಮ ಪಂ.ಅಧ್ಯಕ್ಷೆ ಬೇಬಿ ನಾಯ್ಕ, ಹಿರಿಯ ಕಾಂಗ್ರೆಸ್ ಮುಖಂಡ ವೆಂಕ್ಟಯ್ಯ ಭೈರುಮನೆ,ಸೋಮಯ್ಯ ಗೊಂಡ,ಫರ್ಜಾನ ಸೌದಾಗರ,ಅಲ್ಬರ್ಟ ಡಿಕೋಸ್ತ, ಸಿಂಧು ನಾಯ್ಕ, ವಿಠ್ಠಲ ನಾಯ್ಕ ಉಪಸ್ಥಿತರಿದ್ದರು.
ಆರಂಭದಲ್ಲಿ ಸೇವಾದಳದ ಅಧ್ಯಕ್ಷರಾದ ರಾಜೇಶ ನಾಯ್ಕ ಅತಿಥಿಗಳನ್ನ ಸ್ವಾಗತಿಸಿದರೆ ಕೊನೆಯಲ್ಲಿ ಹಿ.ವರ್ಗದ ಅಧ್ಯಕ್ಷ ವಿಷ್ಣು ದೇವಡಿಗ ವಂದಿಸಿದರು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ