
ಭಟ್ಕಳ: ವಿಶ್ವ ವಿಕಲಚೇತನರ ದಿನಾಚರಣೆಯನ್ನು ಇಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊನ್ನೆಮಡಿ ಬೆಳಕೆ ಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಶಾಲೆಯ ವ್ಯಾಪ್ತಿಗೆ ಒಳಪಡುವ 2 ವಿಶೇಷ ಚೇತನ ಮಕ್ಕಳ ಮನೆಗೆ ಶಾಲಾ ಮಕ್ಕಳೆಲ್ಲಾ ಶಿಕ್ಷಕರ ಒಡಗೂಡಿ ಭೇಟಿ ನೀಡಿ ವಿಕಲ ಚೇತನ ಮಕ್ಕಳ ಆರೋಗ್ಯವನ್ನು ವಿಚಾರಿಸಿ ಸದ್ರಿ ಮಕ್ಕಳ ಜೊತೆ ಮಾತುಕತೆ ನಡೆಸಿದರು.
ಈ ವೇಳೆ ಮಕ್ಕಳೆಲ್ಲಾ ವಿಕಲ ಚೇತನ ಮಕ್ಕಳಿಗೆ ಬಿಸ್ಕಿಟ್, ಚಾಕೋಲೇಟ್, ಹಣ್ಣುಗಳನ್ನು ನೀಡಿ ತಮ್ಮ ಉದಾರತೆಯನ್ನು ಮೆರೆದರು.ಶಾಲಾ ವತಿಯಿಂದ ವಿಕಲ ಚೇತನ ಮಕ್ಕಳಿಗೆ ಆಹಾರ ಧಾನ್ಯಗಳು, ಮೊಟ್ಟೆ, ಸಮವಸ್ತ್ರ, ಶೂ ಗಳನ್ನು ಮುಖ್ಯಾಧ್ಯಾಪಕರು ವಿತರಿಸಿದರು. ವಿಕಲ ಚೇತನ ಮಕ್ಕಳೊಂದಿಗೆ ಕೆಲ ಕಾಲ ಬೆರೆತ ಶಾಲಾ ಮಕ್ಕಳು ಇವರು ಕೂಡ ನಮ್ಮಂತೆ ಶಾಲೆಗೆ ಬರುವಂತಾಗಿದ್ದರೆ ಚೆನ್ನಾಗಿರುತ್ತಿತ್ತು ಎಂದು ಮನದಲ್ಲೆ ಅಂದುಕೊAಡರು.
ಶಾಲಾ ಮಕ್ಕಳೆಲ್ಲಾ ತಮ್ಮ ಮನೆಗೆ ಬಂದು ನಮ್ಮೊಂದಿಗೆ ಕೆಲ ಕಾಲ ಬೇರೆತದ್ದರಿಂದ ವಿಕಲ ಚೇತನ ಮಕ್ಕಳು ಕೂಡ ಖುಷಿ ಪಟ್ಟಿರುವುದು ಅವರ ಮುಖದ ಮೇಲೆ ಅರಳಿದ ನಗುವೇ ಸಾಕ್ಷಿಯಾಗಿತ್ತು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ಸಾರಿಂಗ ಮುಕ್ರಿ, ಸಹ ಶಿಕ್ಷಕರಾದ ರಾಘವೇಂದ್ರ ಮಡಿವಾಳ, ಅರುಣ್ ಮೇಸ್ತ, ಸುಮಲತಾ ನಾಯ್ಕ, ಸತ್ಯವತಿ ಶೆಟ್ಟಿ, ಪಲ್ಲವಿ ನಾಯ್ಕ, ಪವಿತ್ರಾ ಮೊಗೇರ ಉಪಸ್ಥಿತರಿದ್ದರು.
ಇಂತ ಮಕ್ಕಳಿಗೆ ಗ್ರಹದಾರಿತ ಶಿಕ್ಷಣ ದೊರಕಿಸಿಕೊಡುವಲ್ಲಿ ಈ ಮೊದಲಿನಂತೆ ಸ್ವಯಂ ಸೇವಕ ಶಿಕ್ಷಕ ರ ನೇಮಕಾತಿ ಆದಷ್ಟು ಬೇಗ ಆಗಲಿ ಎಂಬುದೇ ನಮ್ಮೆಲ್ಲರ ಆಶಯ.
More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ