May 17, 2024

Bhavana Tv

Its Your Channel

ಬಾಚೆ ಆ್ಯಂಡ್ ಮರಡೋನಾ ಫ್ಯಾನ್ಸ್ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಮಾದಕ ವಸ್ತು ವಿರೋಧಿ ಅಭಿಯಾನ ಜಾಥಾ

ಭಟ್ಕಳ: ಬಾಚೆ (ಡಾ, ಬಾಬಿ ಜೆಮ್ಮನ್ನೂರ್) ಆ್ಯಂಡ್ ಮರಡೋನಾ ಫ್ಯಾನ್ಸ್ ಚಾರಿಟೇಬಲ್ ಟ್ರಸ್ಟ್ ಇದರ ಆಶ್ರಯದಲ್ಲಿ ನವೆಂಬರ್ 21ರಂದು ಆರಂಭಿಸಲಾದ ಮಾದಕ ವಸ್ತು ವಿರೋಧಿ ಅಭಿಯಾನ ಜಾಥಾ ಭಟ್ಕಳವನ್ನು ತಲುಪಿತು.

ಭಟ್ಕಳ ಅಂಜುಮನ್ ಇಂಜಿನೀಯರಿAಗ್ ಕಾಲೇಜಿನ ಪ್ರಾಚಾರ್ಯ ಡಾ. ಫಜ್ಜುರೆಹಮಾನ್ ಜಾಥಾ ಅನ್ನು ಸ್ವಾಗತಿಸಿದರು. ಕಾಲೇಜು ವಿದ್ಯಾರ್ಥಿಗಳು, ಉಪನ್ಯಾಸಕರು, ಸಾರ್ವಜನಿಕರು ಅಭಿಯಾನದಲ್ಲಿ ಪಾಲ್ಗೊಂಡರು. ಜಗತ್ತಿನ ಪ್ರಸಿದ್ದ ಫುಟಬಾಲ್ ತಾರೆ ಮರಡೋನಾರ ಮಾದಕ ವಸ್ತು ವಿರುದ್ಧ ಫುಟಬಾಲ್ ವ್ಯಸನ ಎನ್ನುವ ಸಂದೇಶವನ್ನು ಬಿತ್ತರಿಸುತ್ತ ಈ ಜಾಥಾವು ಚಿನ್ನದ ವರ್ಣದ ತೆರೆದ ಕಾರಿನ ಮೂಲಕ ಗೋವಾ ಮಾರ್ಗವಾಗಿ ಮಹಾರಾಷ್ಟ್ರವನ್ನು ತಲುಪಿ ಅಲ್ಲಿಂದ ವಿಮಾನದಲ್ಲಿ ವಿಶ್ವ ಘುಟಬಾಲ್ ಪಂದ್ಯಾವಳಿ ನಡೆಯುತ್ತಿರುವ ಕತ್ತಾರ್ ಅನ್ನು ತಲುಪಲಿದೆ. ನಂತರ ಅಲ್ಲಿನ ಸ್ಟೇಡಿಯಮ್‌ನಲ್ಲಿ ಹ್ಯಾಂಡ್ ಆಫ್ ಗಾಡ್ ಮರಡೋನಾ ಹಾಗೂ ಬೋಚೆ ಚಿನ್ನದ ಪುತ್ಥಳಿಯನ್ನು ಅನಾವರಣಗೊಳಿಸಿ ಅಲ್ಲಿನ ಮ್ಯೂಸಿಯುವಗೆ ಹಸ್ತಾಂತರಿಸಲಾಗುತ್ತದೆ. ಮಾರ್ಗದುದ್ದಕ್ಕೂ ಪ್ರಮುಖ ಕಾಲೇಜು, ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಿ ಮಾದಕವಸ್ತುಗಳ ವಿರುದ್ಧ ಜನಜಾಗೃತಿ ಮಾಡಲಾಗುತ್ತಿದ್ದು, ಈ ಬಗ್ಗೆ ಇನ್‌ಸ್ಟಾಗ್ರಾಮ್ ಮೂಲಕ ನಿತ್ಯದ ಘಟನೆಗಳನ್ನು ಬಾಚಿ ತಂಡ ಬಿತ್ತರಿಸುತ್ತ. ಮುಂದೆ ಸಾಗಲಿದೆ. ಆಸಕ್ತರು ಇದನ್ನು ಹಿಂಬಾಲಿಸಿ ಮರಡೋನಾ ಚಿನ್ನದ ಮತ್ಥಳಿಯೊಂದಿಗೆ ಸೆಲ್ಪಿ ತೆಗೆದು ಕಳುಹಿಸುವ ಮೂಲಕ ತ0ಡವನ್ನು ಸೇರಿಕೊಳ್ಳ ಬಹುದಾಗಿದೆ. ಅದೃಷ್ಟವಂತ ಓರ್ವರನ್ನು ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತಿದ್ದು, ವಿಜೇತರಿಗೆ ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿಯನ್ನು ವೀಕ್ಷಿಸಲು ಕತ್ತಾರ್’ ವಿಮಾನ ಯಾನದ ಟಿಕೆಟ್ ಹಾಗೂ ಫುಟ್‌ಬಾಲ್ ಪಂದ್ಯ ವೀಕ್ಷಣೆ ಪಾಸ್‌ಅನ್ನು ಉಚಿತವಾಗಿ ನೀಡಲಾಗುತ್ತದೆ.

error: