March 29, 2025

Bhavana Tv

Its Your Channel

ಮನೆ ಬಾಡಿಗೆ, ಠೇವಣಿ ವಿಷಯಕ್ಕೆ ಸಂಬoಧಿಸಿದoತೆ ವೈದ್ಯರ ಮೇಲೆ ಹಲ್ಲೆ ಆರೋಪ; ಪ್ರಕರಣ ದಾಖಲು

ಭಟ್ಕಳ: ಮನೆ ಬಾಡಿಗೆ, ಠೇವಣಿ ವಿಷಯಕ್ಕೆ ಸಂಬAಧಿಸಿದAತೆ ಖಾಸಗಿ ಆಸ್ಪತ್ರೆಯ ವೈದ್ಯರೋರ್ವರ ಮೇಲೆ ನಾಲ್ವರು ಸೇರಿಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿರುವ ಬಗ್ಗೆ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ದೂರೊಂದು ದಾಖಲಾಗಿದೆ.

ಈ ಸಂಬAಧ ವೈದ್ಯ ಡಾ.ಶೈಲೇಶ ದೂರು ನೀಡಿದ್ದು, ಇಲ್ಲಿನ ಮಣ್ಣುಳಿ ರಾಜ್‌ಕ್ಲಿನಿಕ್ ಸಮೀಪದ ಗಾಂಧಿ ಹೌಸ್ ನಿವಾಸಿಗಳಾದ ದೀಪಕ ಶೆಟ್ಟಿ, ವಿನಾಯಕ ಗಾಂಧಿ, ಶೀತಲಾ ಗಾಂಧಿ ಹಾಗೂ ರೂಪಾ ಗಾಂಧಿ ಆರೋಪಿಗಳು ಎಂದು ಹೆಸರಿಸಲಾಗಿದೆ. ಹಲ್ಲೆಗೊಳಗಾದ ವೈದ್ಯ ಡಾ.ಶೈಲೇಶ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: