
ಭಟ್ಕಳ:- ರಾಜ್ಯದಲ್ಲಿ ಸಾಕಷ್ಟು ಮಾಜಿ ಸೈನಿಕರ ಕೆಲಸ ಇಲ್ಲದೆ ಪರದಾಡುತ್ತಿರುವಾಗ ನೆರೆಯ ರಾಜ್ಯದವರನ್ನು ಇಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶ ನೀಡಿದ್ದು ಕನ್ನಡಿಗರಿಗೆ ಮಾಡಿದ್ದ ಅವಮಾನ ಎಂದು ಅಖಿಲ ಕರ್ನಾಟಕ ಮಾಜಿ ಸೈನಿಕ ಸಂಘದ ರಾಜ್ಯಧ್ಯಕ್ಷ ಶಿವಣ್ಣ ಎನ್.ಕೆ. ಅವರು ಕಿಡಿಕಾರಿದರು.
ಅವರು ಭಟ್ಕಳದ ಮೂವರು ಮಾಜಿ ಸೈನಿಕರಿಗೆ ಅದ ಅನ್ಯಾಯದ ವಿರುದ್ಧ ಅಖಿಲ ಕರ್ನಾಟಕ ಮಾಜಿ ಸೈನಿಕ ಸಂಘ, ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಭಟ್ಕಳದ ಲೈಟ್ ಹೌಸ್ ಎದುರು ನಡೆದ ಬ್ರಹತ್ ಪ್ರತಿಭಟನೆಯಲ್ಲಿ ಮಾತನಾಡಿದರು. ಭಟ್ಕಳದ ಲೈಟ್ ಹೌಸ್ ನಲ್ಲಿ ನಮ್ಮ ಸ್ಥಳೀಯ ಮೂವರು ಮಾಜಿ ಸೈನಿಕರನ್ನು ಯಾವುದೇ ನೋಟಿಸ್ ಇಲ್ಲದೇ ಕೆಲಸದಿಂದ ತೆಗೆದಿರುವುದಲ್ಲದೇ, ಪುನಃ ಅವರನ್ನು ಸೇರಿಸಿಕೊಳ್ಳುವ ಬದಲು ಅವರ ಮೇಲೆ ಹಗೆ ಸಾಧಿಸಲು ಹೊರ ರಾಜ್ಯವಾದ ಕೇರಳದಿಂದ ಭದ್ರತಾ ಸಿಬ್ಬಂದಿಗಳನ್ನು ನೇಮಿಸಿಕೊಳ್ಳುವ ಮೂಲಕ ಕರ್ನಾಟಕದ ಸ್ಥಳೀಯ ಮಾಜಿ ಸೈನಿಕರಿಗೆ ಅನ್ಯಾಯವಾಗುವಂತೆ ಮಾಡಲಾಗಿದೆ. ಪ್ರಾಮಾಣಿಕವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸಿಕೊಂಡು ಬಂದಿರುವ ಸ್ಥಳೀಯ ಮಾಜಿ ಸೈನಿಕರನ್ನು ಮರು ನೇಮಕ ಮಾಡಬೇಕು. ಒಂದು ವೇಳೆ 15ದಿನಗಳಲ್ಲಿ ಈ ಸಮಸ್ಯೆಗೆ ಪರಿಹಾರ ಸೀಗಬೇಕು. ನಿಯಮದ ಪ್ರಕಾರ ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ತೆಗೆದುಕೊಳ್ಳುವಾಗ ಸ್ಥಳೀಯರಿಗೆ ಹೆಚ್ಚಿನ ಆಧ್ಯತೆ ನೀಡಬೇಕು. ಪರರಾಜ್ಯದವರಿಗೆ ಮಣೆ ಹಾಕಿದರೆ ಮುಂದಿನ ದಿನಗಳಲ್ಲಿ ಹೋರಾಟದ ಸ್ವರೂಪವನ್ನು ಬದಲಿಸಿ ರಸ್ತೆ ತಡೆ, ರೈಲ ರೋಕೊದಂತಹ ಪ್ರತಿಭಟನೆ ನಡೆಸುವದು ಅನಿವಾರ್ಯ. ರಾಜ್ಯಮಟ್ಟದಲ್ಲೂ ಹೋರಾಟ ನಡೆಸಿ ರಾಷ್ಟರಮಟ್ಟದವರೆಗೂ ಇದರ ಬಿಸಿ ಮುಟ್ಟಿಸಲಾಗುವದು ಎಂದರು.
ಬಳಿಕ ಗೋವಾ ರಾಜ್ಯದ ಕ್ರೂಸ್ ವ್ಯಾಪಾರ ಕೇಂದ್ರ, ಲೈಟ್ ಹೌಸ್ ಮತ್ತು ಲೈಟ್‌ಶಿಪ್‌ಗಳ ನಿರ್ದೇಶನಾಲಯದ ಅಧಿಕಾರಿಗಳ ಕರೆ ಮೂಲಕ ಸಂಪರ್ಕ ಸಾಧಿಸಿದ್ದು ಅವರು 15ದಿನಗಳ ಕಾಲವಕಾಶ ಪಡೆದಿದ್ದಾರೆ ಎನ್ನಲಾಗಿದೆ. 15ದಿನಗಳ ಬಳಿಕ ಸ್ಥಳೀಯ ಸೈನಿಕರ ಮರು ನೇಮಕವಾಗದಿದ್ದಲ್ಲಿ ಮತ್ತೆ ಹೋರಾಟ ನಡೆಸಲಾಗುವದು ಎಂದು ಭಟ್ಕಳ ಮಾಜಿ ಸೈನಿಕ ಸಂಘದ ಅಧ್ಯಕ್ಷ ಎಂ.ಡಿ.ಫಕ್ಕಿ ಹೇಳಿದರು. ಈ ಸಂದರ್ಬದಲ್ಲಿ ಕಾರ್ಯದರ್ಶಿ ಶ್ರೀಕಾಂತ ನಾಯ್ಕ, ಸದಸ್ಯರಾದ ನಾರಾಯಣ ನಾಯ್ಕ, ವಿ.ಆರ್. ಶೆಟ್ಟಿ, ಗಣಪತಿ ಭಟ್ಟ, ರವೀಂದ್ರ ನಾಯ್ಕ, ಹೊನ್ನಾವರ ತಾಲೂಕು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಅಶೋಕ, ಗೌರವಾಧ್ಯಕ್ಷ ವಾಮನ ನಾಯ್ಕ, ತಿಮ್ಮಪ್ಪ ಗೌಡ, ರಾಜೇಶ ನಾಯ್ಕ, ಕುಮಟಾದ ಮಾಜಿ ಸೈನಿಕ ವಿನಾಯಕ ನಾಯ್ಕ, ಬೈಂದೂರು ತಾಲೂಕು ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ಚಂದ್ರ ಮೋಗವೀರ ಹಾಗೂ ಸ್ಥಳೀಯ ಭುವನೇಶ್ವರಿ ಕನ್ನಡ ಸಂಘದ ಅಧ್ಯಕ್ಷ ರಮೇಶ ನಾಯ್ಕ, ಕಾರ್ಯದರ್ಶಿ ಪಾಂಡುರಗ ನಾಯ್ಕ, ಪ್ರಕಾಶ ನಾಯ್ಕ, ಈಶ್ವರ ನಾಯ್ಕ, ಮಾರುತಿ ನಾಯ್ಕ, ಮಂಜುನಾಥ ನಾಯ್ಕ, ವಸಂತ ನಾಯ್ಕ, ಸ್ಥಳೀಯರಾದ ಮಂಜುನಾಥ ಖಾರ್ವಿ, ರಾಮನಾಥ ಬಳೆಗಾರ, ಶ್ರೀನಿವಾಸ ನಾಯ್ಕ, ಮಾರುತಿ ಖಾರ್ವಿ,ದೀಪಕ ನಾಯ್ಕ ಸೇರಿದಂತೆ ನೂರಾರು ಜನರು ಉಪಸ್ಥಿತರಿದ್ದರು.
More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ