March 29, 2025

Bhavana Tv

Its Your Channel

ಶಿರಾಲಿಯ ಜೈ ದುರ್ಗಾ ಮಾತಾ ಕ್ರೆಡಿಟ್ ಸೌಹಾರ್ದ ಸೊಸೈಟಿಯ ಶಾಖೆ ಉದ್ಘಾಟಿಸಿದ ಶಾಸಕ ಸುನೀಲ ನಾಯ್ಕ

ಭಟ್ಕಳ ತಾಲ್ಲೂಕಿನ ಶಿರಾಲಿಯಲ್ಲಿ ನೂತನವಾಗಿ ಪ್ರಾರಂಭವಾದ ಜೈ ದುರ್ಗಾ ಮಾತಾ ಕ್ರೆಡಿಟ್ ಸೌಹಾರ್ದ ಸೊಸೈಟಿಯ ಶಾಖೆಯು ಯಶಸ್ಸುಗಳಿಸಿ ಸಾರ್ವಜನಿಕರಿಗೆ ಹಾಗೂ ಸಮಾಜಕ್ಕೆ ಸಹಕಾರಿಯಾಗಲಿ ಎಂದು ಶಾಸಕ ಸುನೀಲ ನಾಯ್ಕ ಹೇಳಿದರು.

ಅವರು ಶಿರಾಲಿಯ ಚಿತ್ತಾಪುರ ರಸ್ತೆಯಲ್ಲಿರುವ ಶಾರದಾ ಸಂಕೀರ್ಣದ ಬಳಿ ಜೈ ದುರ್ಗಾ ಮಾತಾ ಕ್ರೆಡಿಟ್ ಸೌಹಾರ್ದ ಸೊಸೈಟಿಯ 6ನೇ ಶಾಖೆ- ಯಾಗಿ ನೂತನವಾಗಿ ಪ್ರಾರಂಭಿಸುತ್ತಿದ್ದು ಉದ್ಘಾಟನೆ ನೆರವೇರಿಸಿ ಶುಭ ಹಾರೈಸಿದರು. ಸಭಾ ಕಾರ್ಯಕ್ರಮವನ್ನು ಉದ್ಯಮಿ ಡಿ.ಜೆ. ಕಾಮತ್ ದೀಪ ಬೆಳಗಿಸಿ ನಂತರ ಮಾತನಾಡಿ ಸಹಕಾರಿ ಸಂಸ್ಥೆ ಅಂದರೆ ವ್ಯಾಪಾರ ಇದ್ದ ಹಾಗೆ ಕೆಲವರು ಕಿರಾಣಿ ವ್ಯಾಪಾರ, ಬಟ್ಟೆಯ ವ್ಯಾಪಾರ ಇನ್ನಿತರ ವ್ಯಾಪಾರ ಪ್ರೀತಿ ವಿಶ್ವಾಸ ದಿಂದ ವ್ಯಾಪಾರ ಮಾಡುತ್ತಾರೋ ಹಾಗೆ ಬರುವತಂಹ ಗ್ರಾಹಕರಿಗೆ ಪ್ರೀತಿ ವಿಶ್ವಾಸ ದಿಂದ ವ್ಯವಹಾರ ಮಾಡಿದಲ್ಲಿ ಸಂಸ್ಥೆ ಬೆಳೆಯಲು ಸಾದ್ಯ, ಶಿರಾಲಿ ವಿದ್ಯಾವಂತರ ಗ್ರಾಮವಾಗಿದ್ದು, ಹಣಕಾಸಿನ ವ್ಯವಸ್ಥೆಯ ವ್ಯವಹಾರಗಳು ಅಚ್ಚುಕಟ್ಟಾಗಿರಬೇಕೆಂದು ಆರ್ಥಿಕ ಸಲಹೆ-ಸೂಚನೆಗಳನ್ನು ನೀಡಿದರು.

ದುರ್ಗಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ತಿಮ್ಮಪ್ಪ ನಾರಾಯಣ ಮೋಗೇರ ಮೊಬೈಲ್ ಆಪ್ ಬಿಡುಗಡೆ ಬಿಡುಗಡೆ ಗೊಳಿಸಿ ಮಾತನಾಡಿ ಈ ಸಂಸ್ಥೆ ಅತಿ ವೇಗದಲ್ಲಿ ಇಷ್ಟೊಂದು ಶಾಖೆ ಹೊಂದಿರುವುದು ನಿಜಕ್ಕೂ ಶ್ಲಾಘನೀಯ, ನಾವು ಇನ್ನೂ ಒಬ್ಬರಿಗೆ ಸವಲತ್ತನ್ನು ಕೊಡಬೇಕಾದರೆ ನಮ್ಮ ಸಂಘಟನೆ ಸದೃಢವಾಗಿದ್ದರೆ ಮಾತ್ರವೇ ಇನ್ನೊಬ್ಬರಿಗೆ ನೆರವಾಗಿಲಿಕ್ಕೆ ಸಾಧ್ಯ ಎಂದರು.
ತಮ್ಮ ಸಹಕಾರಿಯು ಸಾರ್ವಜನಿಕ ಗ್ರಾಹಕರಿಗೆ ಒದಗಿಸುವ ಸೇವೆಗಳ ಜೊತೆ ಸಹಕಾರಿಯ ಬೆಳವಣಿಗೆಯ ಸಂಕ್ಷಿಪ್ತ ವಿವರವನ್ನು ವ್ಯವಸ್ಥಾಪಕ ನಿರ್ದೇಶಕ ಲಿಂಗರಾಜ ಕಲ್ಗುಟ್ಟರ ವಿವರಿಸಿದರು,
ನಂತರ ಕಾರ್ಯಕ್ರಮದಲ್ಲಿ ಬಂದOತ ಅತಿಥಿಗಳಿಗೆ ಸಂಸ್ಥೆ ವತಿಯಿಂದ ಸನ್ಮಾನಿಸಿ ಗೌರವಿಸಿದರು. ಜಿಲ್ಲೆಯ ಸಹಕಾರಿ ಕ್ಷೇತ್ರ ರಾಜ್ಯದಲ್ಲೇ ಮಾದರಿ ಎನಿಸಿಕೊಂಡು ಪ್ರಥಮ ಸ್ಥಾನದಲ್ಲಿದೆ. ರಾಷ್ಟ್ರೀಕೃತ ಬ್ಯಾಂಕುಗಳಿಗಿAತ ಗ್ರಾಹಕರೊಂದಿಗೆ ಹತ್ತಿರದ ಬಾಂಧವ್ಯ ಹೊಂದಿರುವುದರಿAದ ಜನರ ಒಡನಾಟಕ್ಕೆ ಸಹಕಾರಿ ಬ್ಯಾಂಕುಗಳು ಪ್ರಾಮುಖ್ಯತೆ ಪಡೆದಿವೆ.
ಸ್ಥಳೀಯವಾಗಿ ತೆರೆಯಲ್ಪಡುವ ಶಾಖೆಗಳಲ್ಲಿ ಅಲ್ಲಿನ ಯುವಕ-ಯುವತಿಯರಿಗೆ ಹೆಚ್ಚಿನ ಪ್ರಾಶಸ್ಯ ನೀಡಿ ಉದ್ಯೋಗ ನೀಡುವುದು ಉತ್ತಮ ಬೆಳವಣಿಗೆಯಾಗಲಿದೆ. ಈ ದಿಶೆಯಲ್ಲಿ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದೇ ಉದಾಹರಣೆಯಾಗಿದೆ.
ಕಾರ್ಯಕ್ರಮದಲ್ಲಿ 2023 ನೇ ಇಸವಿ ಹೊಸವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಶಿರಾಲಿ ಗ್ರಾ.ಪಂ, ಅಧ್ಯಕ್ಷೆ ರೇವತಿ ರವಿಶಂಕರ ನಾಯ್ಕ, ವೈದ್ಯ ಹಾಗೂ ಸಾಹಿತಿ ಡಾ. ರಮೇಶ ಸರಾಫ್, ಉದ್ದಿಮೆದಾರ ಮೊಹಮ್ಮದ್ ಇಕ್ವಾಲ್, ಡಿ.ಜೆ. ಕಾಮತ, ಗ್ರಾ.ಪಂ. ಸದಸ್ಯ ಅಂತೋನಿ ಡಿಕೋಸ್ತಾ, ಸಾಮಾಜಿಕ ಕಾರ್ಯಕರ್ತ, ಮೋಹನ ದೇವಾಡಿಗ ಉಪಸ್ಥಿತರಿದ್ದರು. ಕಪಿಲಾಕ್ಷ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಜೊಸ್ ಫಿನ್ ಲುಯಿಸ್ ಸ್ವಾಗತಿಸಿದರು. ರಾಘವೇಂದ್ರ ಕಲಗುಟಕರ ಪ್ರಾಸ್ತಾವಿಕ ಮಾತುಗಳನ್ನಾಡಿದರು.

error: