May 14, 2024

Bhavana Tv

Its Your Channel

”ಭಟ್ಕಳದಲ್ಲಿ ಹಿಂದೂ-ಮುಸ್ಲಿo ಧರ್ಮ ಸಮನ್ವಯತೆ’ ವಿಷಯದಲ್ಲಿ ಪ್ರಬಂಧ ಸ್ಪರ್ಧೆ

ಭಟ್ಕಳ: ಜಮಾಅತುಲ್ ಮುಸ್ಲಿಮೀನ್ ಭಟ್ಕಳ ಇದರ ಸಹಸ್ರಮಾನೋತ್ಸವದ ಸ್ಮರಣಾರ್ಥ”ಭಟ್ಕಳದಲ್ಲಿ ಹಿಂದೂ-ಮುಸ್ಲಿo ಧರ್ಮ ಸಮನ್ವಯತೆ’ ಎಂಬ ವಿಷಯದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿದ್ದು ಪ್ರಥಮ 20,000 ರೂ ನಗದು, ದ್ವಿತೀಯ 15,000 ಹಾಗೂ ತೃತೀಯ 10,000 ರೂ ನಗದು ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಗಳನ್ನು ನೀಡಲಾಗುವುದುಎಂದು ಪ್ರಬಂಧ ಸ್ಪರ್ಧೆಯ ಸಂಚಾಲಕ ಮೌಲಾನ ಮುಹಮ್ಮದ್‌ಇಲಿಯಾಸ್ ನದ್ವಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಒಂದು ಸಾವಿರ ವರ್ಷ ಪೂರೈಸಿ ತನ್ನ ಸಹಸ್ರಮಾನೋತ್ಸವ ಸಮಾರಂಭ ಆಚರಿಸಿಕೊಳ್ಳುತ್ತಿರುವ ಭಟ್ಕಳದ ಪ್ರತಿಷ್ಠಿತ ಧಾರ್ಮಿಕ ಮತ್ತು ಸಾಮುದಾಯಿಕ ಸಂಸ್ಥೆಯಾಗಿರುವ ಜಮಾಅತುಲ್ ಮುಸ್ಲಿಮೀನ್ ಇದರ ಸಹಸ್ರಮಾನದ ಅದ್ದೂರಿ ಸಮಾರಂಭವನ್ನು ಜನವರಿ 4-5 2023 ರಂದುಆಚರಿಸುತ್ತಿದ್ದು, ಕಾರ್ಯಕ್ರಮದಲ್ಲಿ ಶ್ರೀಧರ್ಮಸ್ಥಳ ಮಂಜುನಾಥ ದೇವಸ್ಥಾನದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರು ಭಾಗವಹಿಸಿ ಭಟ್ಕಳದ ಹಿಂದೂ-ಮುಸ್ಲಿಮ್ ಸೌಹಾರ್ದತೆಗೆ ಸಾಕ್ಷಿಯಾಗಲಿದ್ದಾರೆ ೆಎಂದುಅವರು ತಿಳಿಸಿದ್ದಾರೆ.
ಈ ಸಹಸ್ರಮಾನೋತ್ಸವ ಸಮಾರಂಭದ ಪ್ರಯುಕ್ತ ”ಭಟ್ಕಳದಲ್ಲಿ ಹಿಂದೂ-ಮುಸ್ಲಿo ಧರ್ಮ ಸಮನ್ವಯತೆ’ “Hindu -Muslim Interfaith Harmony in Bhatkal.” ಎಂಬ ವಿಷಯದಲ್ಲಿ ಪ್ರಬಂಧ ಸ್ಪರ್ಧೆ ಆಯೋಜಿಸಿದ್ದು ಶಾಲಾ-ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ಉಪನ್ಯಾಸಕರು ಆಸಕ್ತರು ಯಾರೆ ಆಗಲಿ ಇದರಲ್ಲಿ ಭಾಗವಹಿಸಲು ಮುಕ್ತ ಅವಕಾಶ ನೀಡಲಾಗಿದೆ.
ಭಟ್ಕಳವು ಶತಶತಮಾನಗಳಿಂದ ಶಾಂತಿಯುತ ಸರ್ವಧರ್ಮೀಯ ಸಮಾಜಕ್ಕೆ ನೆಲೆಯಾಗಿದೆ. ಸುಮಾರು ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಇಲ್ಲಿನ ಚೆನ್ನಪಟ್ಟಣ ಹನುಮಂತ ದೇವರ ರಥೋತ್ಸವಕ್ಕೆ ಹಿಂದೂಗಳು ಮುಸ್ಲಿಮ ಸಮುದಾಯದವರ ಮನೆಗೆ ತೆರಳಿ ಅವರಿಗೆಅಹ್ವಾನಿಸುವುದು ಈಗಲೂ ನಡೆದುಕೊಂಡು ಬಂದಿದೆ. ಇದು ಹಿಂದೂ-ಮುಸ್ಲಿಮರ ಗೌರವದ ಸಂಕೇತವಾಗಿದೆ.
ಈ ನಿಟ್ಟಿನಲ್ಲಿಇಂತಹ ಹತ್ತು ಹಲವು ನಿದರ್ಶನಗಳು ನಮಗೆ ಕಂಡು ಬರುತ್ತವೆ. ಆದುನಿಕಯುವ ಪೀಳಿಗೆಗೆ ನಮ್ಮ ಭಟ್ಕಳದ ಸತ್ಸಂಪ್ರದಾಯವನ್ನು ನೆನಪಿಸಿಕೊಡುವುದು ಮತ್ತು ಭಟ್ಕಳದಲ್ಲಿ ಯಾವುದೇಕಾರಣಕ್ಕೂ ವಾತವರಣ ಹಾಳಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರಕರ್ತವ್ಯವಾಗಿದೆ. ಈ ಪ್ರಬಂಧ ಸ್ಪರ್ಧೆಯ ಮೂಲಕ ಭಟ್ಕಳದ ಹಿಂದೂ -ಮುಸ್ಲಿಂ ಧರ್ಮ ಸಮನ್ವಯತೆ ಹೇಗೆ ಕಾಪಾಡಿಕೊಂಡು ಹೋಗಬಹುದು ಎಂಬುದರ ಕಡೆಗೆ ಹಿಂದೂ-ಮುಸ್ಲಿಮರಲ್ಲಿ ಚರ್ಚೆಯನ್ನುಂಟು ಮಾಡುವುದು ಆ ಮೂಲಕ ಇಲ್ಲಿ ಶಾಂತಿ, ಸಹಬಾಳ್ವೆ, ಸೌಹಾರ್ದತೆ, ಪರಸ್ಪರ ನಂಬಿಕೆ ವಿಶ್ವಾಸ ಮೂಡಿಸಬಹುದಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಬಂಧ ಸ್ಪರ್ಧೆಯ ನಿಯಮಗಳು:

  1. ಪ್ರಬಂಧವು ಕನ್ನಡ ಮತ್ತುಆಂಗ್ಲ ಭಾಷೆಯಲ್ಲಿರತಕ್ಕದ್ದು.
  2. ಕೈಬರಹದಲ್ಲಿದ್ದು ಕನಿಷ್ಠ ಮೂರು ಪುಟಗಳು ಹೊಂದಿರಬೇಕು.
  3. ಪ್ರಬಂಧ ನಮ್ಮ ಕೈಸೇರಲು 25-12-2022 ಕೊನೆ ದಿನವಾಗಿರುವುದು.
  4. ಪ್ರಬಂಧ ಸ್ಪಧೆಯಲ್ಲಿ ವಿಜೇತರಿಗೆಕ್ರಮವಾಗಿ 20000, 15000 ಮತ್ತು 10000 ರೂ ಬಹುಮಾನ ನಗದು ಪ್ರಶಸ್ತಿ ಹಾಗೂ ಸ್ಮರಣಿಕೆಯನ್ನು ನೀಡಿ ಪುರಸ್ಕರಿಸಲಾಗುವುದು.
  5. ಪ್ರಬಂಧ ಸ್ಪರ್ಧೆಯು ಮುಕ್ತವಾಗಿದ್ದು ವಯಸ್ಸು, ವಿದ್ಯಾರ್ಹತೆಯಯಾವುದೇ ನಿರ್ಬಂಧತೆಇರುವುದಿಲ್ಲ.
  6. ಅತಿ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ ಶಾಲೆಗೆ/ ಸಂಸ್ಥೆಗಳಿಗೆ ವಿಶೇಷ ಬಹುಮಾನ ನೀಡಲಾಗುವುದು.
  7. 05-01-2023 ರಂದು ನಡೆಯುವಧರ್ಮ ಸಮನ್ವಯತೆಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವಿರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಗುವುದು.
    ಹೆಚ್ಚಿನ ಮಾಹಿತಿಗಾಗಿ ಎಂ.ಆರ್.ಮಾನ್ವಿ 9886455416 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಇಲಿಯಾಸ್ ನದ್ವಿ ತಿಳಿಸಿದ್ದಾರೆ
    ”ಭಟ್ಕಳದ ಹಿಂದೂ-ಮುಸ್ಲಿಮರಲ್ಲಿ ಧರ್ಮಸಮನ್ವಯತೆ’ ಪ್ರಬಂಧ ಸ್ಪರ್ಧೆ
    ಜಮಾಅತುಲ್ ಮುಸ್ಲಿಮೀನ್ ಜಮಾಅತ್‌ಆಫಿಸ್,
    ಜಾಮಿಯಾ ಮೊಹಲ್ಲಾ, ಭಟ್ಕಳ-581320
    ಈ ವಿಳಾಸಕ್ಕೆ ಕಳುಹಿಸಿಕೊಡಬೇಕೆಂದು ಕೋರಿದ್ದಾರೆ.
error: