
ಭಟ್ಕಳ: ಪ್ರವಾಸಕ್ಕಾಗಿ ಮುರುಡೇಶ್ವರಕ್ಕೆ ಬಂದು ಸಮುದ್ರ ತೀರದಲ್ಲಿ ತಮ್ಮ ೨ ಉಂಗುರ, ಬಂಗಾರದ ಸರ. ೧ ಮೊಬೈಲ್ ಫೋನ್ ಮತ್ತು ಸಾವಿರ ರುಪಾಯಿಯನ್ನು ಕಳೆದುಕೊಂಡು ಪರಿತಪಿಸುತ್ತಿದ್ದ ಪ್ರವಾಸಿಗರೋರ್ವರಿಗೆ ಎಲ್ಲ ಸ್ವತ್ತುಗಳನ್ನು ಹಿಂದಿರುಗಿಸಿ ಮುರುಡೇಶ್ವರ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.

ಹೊನ್ನಾವರ ಮೂಲದ ಪ್ರಮೋದ ರಾಮಚಂದ್ರ ಜಾಧವ ಎನ್ನುವವರು ಮುರುಡೇಶ್ವರ ಸಮುದ್ರ ದಡದಲ್ಲಿ ಓಡಾಡಿಕೊಂಡಿದ್ದ ಸಂದರ್ಭದಲ್ಲಿ ತಮ್ಮ ಸ್ವತ್ತುಗಳನ್ನು ಕಳೆದುಕೊಂಡಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಮೊಬೈಲ್ ಫೋನ್ ಲೊಕೇಶನ್ ಆಧಾರದಲ್ಲಿ ಎಲ್ಲ ಸ್ವತ್ತುಗಳನ್ನು ಪತ್ತೆ ಹಚ್ಚಿ ಹಿಂದಿರುಗಿಸಿದ್ದಾರೆ. ಮುರುಡೇಶ್ವರ ಪಿಎಸ್‌ಐ ದೇವರಾಜ್ ಬಿರಾದಾರ. ಸಿಬ್ಬಂದಿಗಳಾದ ಮುರುಳಿ ಮತ್ತು ಬಿಲಾಲ್ ಪತ್ತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ