
ಭಟ್ಕಳ :- ಮಾರಿ ಜಾತ್ರೆಯ ಮೊದಲ ದಿವಸ ಮಂಗಳವಾರ ದೇವಾಲಯದ ಸಭಾಭವನದ ಎದುರು ನಿರ್ಮಿಸಿರುವ ಭವ್ಯ ಮಂಟಪದಲ್ಲಿ ಮಾತಂಗಿಯ ಜೊತೆಗೂಡಿ ಸಕಲ ಆಭರಣಗಳೊಂದಿಗೆ ಮಾರಿಕಾಂಬೆ ವೀರಾಜಮಾನಳಾಗಿದ್ದಾಳೆ. ಮುಂಜಾನೆಯಿAದಲೇ ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವಿಗೆ ಹಣ್ಣುಕಾಯಿ, ಉಡಿ ಅರ್ಪಿಸಿದರು. ಸಕಲ ರೋಗಗಳನ್ನು ನಿವಾರಿಸುವಂತೆ ಭಕ್ತರು ಬೆಳ್ಳಿ ಕಣ್ಣುಗಳನ್ನು ಅರ್ಪಿಸಿದರು.
ಎರಡು ದಿನಗಳ ಕಾಲ ನಡೆಯುವ ಮಾರಿ ಮಾರಿಜಾತ್ರೆ ಜಾತ್ರಾ ಮಹೋತ್ಸವದಲ್ಲಿ ಜಿಲ್ಲೆ ಮತ್ತು ಹೊರ ಜಿಲ್ಲೆಗಳಿಂದ ಭಕ್ತರ ದಂಡೆ ಇಲ್ಲಿ ಸೇರುತ್ತದೆ. ಅಷ್ಟೊಂದು ಭಕ್ತಾದಿಗಳು ಬಂದರೂ ಯಾವುದೇ ಅಡಚಣೆ ತೊಂದರೆಗಳಿಲ್ಲದೆ ಎಲ್ಲ ಭಕ್ತಾದಿಗಳಿಗೂ ದೇವರ ದರ್ಶನಕ್ಕೆ ಸಕಲ ವ್ಯವಸ್ಥೆ ಮಾಡಲಾಗಿದೆ.

ಜಾತ್ರೆಯಲ್ಲಿ ಊಟೋಪಚಾರ, ಕುಡಿಯುವ ನೀರು, ಪಾರ್ಕಿಂಗ್, ಸ್ವಚ್ಛತೆ, ಜಾತ್ರೆಗೆ ಆಗಮಿಸುವ ಭಕ್ತರಿಗೆ ತ್ವರಿತ ರೀತಿಯಲ್ಲಿ ಪೂಜೆ ಸೇರಿದಂತೆ ಎಲ್ಲವನ್ನು ಶಿಸ್ತುಬದ್ದವಾಗಿ ಮಾಡಲಾಗಿದೆ. ಪ್ರತಿ ವ್ಯವಸ್ಥೆಗೂ ತಂಡ ರಚಿಸಲಾಗಿದೆ ಸರ್ವರ ಕಷ್ಟಗಳನ್ನು ಪರಿಹರಿಸುವ ಶಕ್ತಿ ದೇವತೆಯಾದ ಈಕೆ ಸಕಲರ ಕಷ್ಟಗಳನ್ನು ನಿವಾರಣೆ ಮಾಡುವ ಭಕ್ತರ ಪಾಲಿನ ಆರಾಧ್ಯ ಶಕ್ತಿಯಾಗಿದ್ದಾಳೆ.
ಗ್ರಾಮದ ಮೀನುಗಾರ ಮೊಗೇರ, ದೇವಡಿಗ, ನಾಮಧಾರಿ ಹಾಗೂ ಗೌಡ ಸಾರಸ್ವತ ಸೇರಿದಂತೆ ಸರ್ವ ಜನಾಂಗದ ಆರಾಧ್ಯ ದೇವತೆಯಾದ ಶ್ರಿ? ದುರ್ಗಾಪರಮೇಶ್ವರಿ ಎಲ್ಲರನ್ನೂ ಸಲಹುವ ಮಹಾಮಾತೆ. ಮೊಗೇರ ಸಮುದಾಯದವರು ಮೀನುಗಾರಿಕಾ ಬೋಟ್ ಇಳಿಸುವ ಪೂರ್ವದಲ್ಲಿ ಹಾಗೂ ಎಲ್ಲ ವರ್ಗದ ಜನಾಂಗದವರು ಶುಭ ಕಾರ್ಯ ಆರೋಗ್ಯ, ವಿವಾಹ, ವಿದ್ಯಾಭ್ಯಾಸ ಇತ್ಯಾದಿ ವಿಚಾರವಾಗಿ ದೇವಿಯ ಅಭಯ ಪ್ರಸಾದ ಕೇಳಿಕೊಂಡು ಕಾರ್ಯ ಆರಂಭಿಸುವುದು ಇಲ್ಲಿನ ಜನರ ವಾಡಿಕೆಯಾಗಿದೆ. ೨ ವರ್ಷಕ್ಕೊಮ್ಮೆ ನಡೆಯುವ ಅಳ್ವೆಕೋಡಿ ದುರ್ಗಾಪರಮೇಶ್ವರಿ ಜಾತ್ರೆ ಕರ್ನಾಟಕ ಕರಾವಳಿ ಜಿಲ್ಲೆಯಲ್ಲಿಯೇ ಅತ್ಯಂತ ದೊಡ್ಡ ಜಾತ್ರೆಯಾಗಿ ಜನಮನ ಗೆದ್ದಿದೆ.
More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ