
ಭಟ್ಕಳ: ಸಮೂಹ ಸಂಪನ್ಮೂಲ ಕೇಂದ್ರ, ಪುರವರ್ಗದ ಕಲಿಕಾಹಬ್ಬದ ಕಾರ್ಯಕ್ರಮವು ಎರಡು ದಿನ ಭಟ್ಕಳ ಪುರವರ್ಗದ ಕಾಸ್ಮುಡಿ ಹನುಮಂತ ದೇವಾಲಯದ ಸ್ವಯಂವರ ಸಭಾಭವನದಲ್ಲಿ ನಡೆಯಿತು
ಮುಂಡಳ್ಳಿ ಪ್ರೌಢಶಾಲಾ ಮುಖ್ಯಾಧ್ಯಾಪಕರಾದ ಡಿ.ಟಿ.ಗೌಡ ಹಾಗೂ ಸಮೂಹ ಸಂಪನ್ಮೂಲ ವ್ಯಕ್ತಿ ಜಯಶ್ರೀ ಆಚಾರ್ಯ ಇವರ ಉಸ್ತುವಾರಿಯಲ್ಲಿ ವಿಜೃಂಭಣೆಯಿAದ ನಡೆಯಿತು. ಸಮಿತಿಯ ಇತರ ಸದಸ್ಯರು,ಕ್ಲಸ್ಟರ್ ನ 11 ಶಾಲೆಯಿಂದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಂಪನ್ಮೂಲ ವ್ಯಕ್ತಿ ಗಳಾದ ಹೇಮಲತಾ ಎ. ಸೀತಾ ನಾಯ್ಕ, ಪ್ರತಿಭಾ ಕರ್ಕಿಕರ್, ವೆಂಕಟೇಶ್ ಆಚಾರ್ಯ ಹಾಗೂ ವಿಜಯಕುಮಾರ್ ನೇರ್ವೆಕರ್ ಮಕ್ಕಳಿಗೆ ವಿವಿಧ ಚಟುವಟಿಕೆ ಮಾಡಿಸಿದರು.ವಿವಿಧ ಶಾಲೆಗಳ ವಿದ್ಯಾರ್ಥಿಗಳ ವೇಷಭೂಷಣ, ಹುಲಿವೇಷ ಹಾಗೂ ಮುಟ್ಟಳ್ಲಿ ಶಾಲೆ ವಿದ್ಯಾರ್ಥಿಗ ಹರಿ ಕುಣಿತವು ಮೆರವಣಿಗೆಯಲ್ಲಿ ವಿಶೇಷ ಆಕರ್ಷಣೆಯಾಗಿತ್ತು.
ಹಳೆಯ ವಿದ್ಯಾರ್ಥಿಗಳ ನೆರವಿನೊಂದಿಗೆ ಯಶಸ್ವಿಯಾಗಿ 2 ದಿನಗಳ ಕಾಲ ಸಂಪನ್ನಗೊAಡಿತು.
ಈ ಸಂದರ್ಭದಲ್ಲಿ ಯಲ್ವಡಿಕವೂರ ಪಂಚಾಯತ್ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ,ಮುಟ್ಟಳಿ ಪಂಚಾಯತ್ ಅಧ್ಯಕ್ಷ ಶೇಷಗಿರಿ ನಾಯ್ಕ,ಶ್ರೀ ಕಾಸ್ಮುಡಿ ಹನುಮಂತ ದೇವಾಲಯ ಆಡಳಿತ ಕಮಿಟಿ ಮುಖ್ಯಸ್ಥರಾದ ಅಣ್ಣಪ್ಪ ನಾಯ್ಕ,ಸ್ಥಳೀಯ ಸಾರ್ವಜನಿಕರು, ಮುಂತಾದವರು ಉಪಸ್ಥಿತಿ ಇದ್ದರು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ