May 4, 2024

Bhavana Tv

Its Your Channel

ಅನಂತ ಹೆಬ್ಬಾರರ ಸಂಗೀತ ಸಾಧನೆ ಅವಿಸ್ಮರಣೀಯ : ಗೋಪಾಲಕೃಷ್ಣ ಹೆಗಡೆ

????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಭಟ್ಕಳ : ಹಿಂದುಸ್ಥಾನಿ ಸಂಗೀತಗಾರರಾಗಿದ್ದ ಅನಂತ ಹೆಬ್ಬಾರ ಅವರ ಜೀವಿತ ಅವಧಿಯ 30 ವರ್ಷಗಳ ಸಾಧನೆ ಅವಿಸ್ಮರಣೀಯ.ಅನಂತ ಹೆಬ್ಬಾರ ಅವರು ಬಿತ್ತಿದ ಸ್ವರಗಳು ಇಂದು ಹೆಮ್ಮರವಾಗಿದೆ ಎಂದು ಹೊನ್ನಾವರದ ಗೋಪಾಲಕೃಷ್ಣ ಹೆಗಡೆ ಕಲಭಾಗ ಹೇಳಿದರು.
ಕಿತ್ರೆ ದೇವಿಮನೆಯಲ್ಲಿ ಅನಂತ ಹೆಬ್ಬಾರ ಅವರ ಶ್ರದ್ಧಾಂಜಲಿ ಕಾರ್ಯಕ್ರಮವಾದ ಅನಂತ ಗಾನ ನಮನದಲ್ಲಿ ನುಡಿನಮನ ಸಲ್ಲಿಸಿದ ಅವರು, ಅನಂತ ಹೆಬ್ಬಾರ ಅವರು ಭಟ್ಕಳದಲ್ಲಿ ಅನೇಕ ಮಂದಿ ಸಂಗೀತಗಾರರು ತಯಾರಾಗುವಂತೆ ಮಾಡಿದ್ದಾರೆ. ಬಹಳ ಕಷ್ಟಪಟ್ಟು ಸಂಗೀತ ಅಭ್ಯಾಸ ಮಾಡಿದ್ದ ಅನಂತ ಹೆಬ್ಬಾರರು ತಮ್ಮಲ್ಲಿರುವ ಸಂಗೀತ ಜ್ಞಾನವನ್ನು ಎಲ್ಲೆಡೆ ಪಸರಿಸುವಂತೆ ಮಾಡಿದ್ದಾರೆ. ಭಟ್ಕಳ ಮತ್ತೆ ಸಂಗೀತಪುರವಾಗಬೇಕು. ಅನಂತ ಹೆಬ್ಬಾರ ನೆನಪಿನಲ್ಲಿ ಸಂಗೀತ ಎಲ್ಲೆಡೆ ಬೆಳೆಯುವಂತೆ ಮಾಡಬೇಕೆಂದರು. ಕಲಾಸೌರಭದ ಅಧ್ಯಕ್ಷ ಕೇದಾರ ಕೊಲ್ಲೆ ಮಾತನಾಡಿ, ಅನಂತ ಹೆಬ್ಬಾರ ಅವರಂತಹ ಉತ್ತಮ ಸಂಗೀತ ಕಲಾವಿದರನ್ನು ನಾವೆಲ್ಲರೂ ಕಳೆದುಕೊಂಡಿದ್ದೇವೆ. ಇವರು ಭಟ್ಕಳದಲ್ಲಷ್ಟೇ ಅಲ್ಲದೇ ತಾಲ್ಲೂಕಿನ ಹೊರಗೂ ತಮ್ಮ ಸಂಗೀತದ ಜ್ಞಾನವನ್ನು ಪಸರಿಸುವಂತೆ ಮಾಡಿದ್ದಾರೆಂದರು. ದೇವಿಮನೆ ಅರ್ಚಕ ವೆ.ಮೂ. ಬಾಲಚಂದ್ರ ಭಟ್ಟ ಮಾತನಾಡಿ, ಅನಂತ ಹೆಬ್ಬಾರ ಅವರು ಕಷ್ಟಪಟ್ಟು ಸಂಗೀತದಲ್ಲಿ ಸಾಧನೆ ಮಾಡಿದ್ದಾರೆ. ಅವರ ಶಿಷ್ಯರು ಒಗ್ಗಟ್ಟಿನಿಂದ ಸಂಗೀತವನ್ನು ಬೆಳೆಸಿಕೊಂಡು ಹೋಗಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ದೇವಿಮನೆ ಆಡಳಿತ ಮಂಡಳಿ ಅಧ್ಯಕ್ಷ ಶಿವಾನಂದ ಹೆಬ್ಬಾರ, ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣಪತಿ ಭಟ್ಟ ಯಲ್ಲಾಪುರ, ಕುಸುಮಾ ಫೌಂಡೇಶನ್ನಿನ ನಳಿನಕುಮಾರ ಶೆಟ್ಟಿ, ಮಾರುಕೇರಿ ಗ್ರಾ.ಪಂ. ಮಾಜಿ ಅಧ್ಯಕ್ಷ ನಾರಾಯಣ ಹೆಬ್ಬಾರ ಮಾತನಾಡಿದರು. ಅನಂತ ಹೆಬ್ಬಾರರ ಒಡನಾಡಿ ಹಾಗೂ ತಬಲಾ ಶಿಕ್ಷಕ ಬಾಲಚಂದ್ರ ಹೆಬ್ಬಾರ ಸ್ವಾಗತಿಸಿದರೆ, ಶುಭ ದೇಸಾಯಿ ನಿರೂಪಿಸಿದರು. ಶಿಕ್ಷಕ ಎಂ ಜೆ ಹೆಗಡೆ ವಂದಿಸಿದರು. ಅನಂತ ಹೆಬ್ಬಾರರಿಗೆ ಹಲವು ಊರ, ಪರಊರಿನ ಗಾಯಕರು, ಅವರ ಶಿಷ್ಯರು ತಮ್ಮ ಹಾಡಿನ ಮೂಲಕ ನುಡಿನಮನ ಸಲ್ಲಿಸಿದರು.

error: