September 16, 2024

Bhavana Tv

Its Your Channel

ಗೊಂಡ ಯುವ ಪ್ರಗತಿ ಸಂಘದಿoದ ಐದನೇ ವರ್ಷದ ವಾರ್ಷಿಕೋತ್ಸವ ಸಮಾರಂಭ

ಭಟ್ಕಳ:- ಗೊಂಡ ಯುವ ಪ್ರಗತಿ ಸಂಘ, ರಿ. ಭಟ್ಕಳ, ಉತ್ತರ ಕನ್ನಡ ಇದರ ಐದನೇ ವರ್ಷದ ವಾರ್ಷಿಕೋತ್ಸವ ಸಮಾರಂಭದ ಪ್ರಯುಕ್ತ ಗೊಂಡ ಸಮಾಜದ ವಿದ್ಯಾರ್ಥಿಗಳು ಹಾಗೂ ಸಮಾಜ ಬಾಂಧವರಿಗಾಗಿ ಪ್ರಪ್ರಥಮವಾಗಿ ಏರ್ಪಡಿಸಿದ ಗೊಂಡ ಸಮಾಜದ ವೈಶಿಷ್ಟ್ಯತೆ ಕುರಿತು ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ ಮತ್ತು ಸಾಂಸ್ಕೃತಿಕ ಕಲರವ ೨೦೨೩

ಉದ್ಘಾಟಕರಾಗಿ ಆಗಮಿಸಿದ ಮಾಜಿ ಶಾಸಕರು ಹಾಗೂ ಶಿಕ್ಷಣ ಪ್ರೇಮಿ ಮಂಕಾಳ್ ವೈದ್ಯ ಅವರನ್ನು ಶ್ರೀ ಸ್ಪಂದನ ಸಾಂಸ್ಕೃತಿಕ ಸಂಘ ಕಿತ್ರೆ ಹಾಗೂ ಶ್ರೀ ದುರ್ಗಾಪರಮೇಶ್ವರಿ ಡಕ್ಕೆ ಕುಣಿತ ತಂಡ ಅಡಿಬಾರ್, ಡಕ್ಕೆ ಕುಣಿತ ಕಲಾವಿದರ ಡಕ್ಕೆ ವಾದ್ಯದೊಂದಿಗೆ ಬರಮಾಡಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೊಂಡ ಯುವ ಪ್ರಗತಿ ಸಂಘದ ಅಧ್ಯಕ್ಷರಾದ ದಿನೇಶ್ ಮಂಜು ಗೊಂಡ ವಹಿಸಿದ್ದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಕೆಟಿ ಬೋರಯ್ಯ, ಮಾನ್ಯ ಸಹಾಯಕ ಅರಣ್ಯ ಸಂರಕ್ಷಕರು,ಭಟ್ಕಳ, ಭಂಡಾರ್ಕರ್ ಪಿ.ಯು. ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ್. ಜಿ.ಎಂ ಗೊಂಡ, ಕ.ರ.ವೇ. ಜಿಲ್ಲಾಧ್ಯಕ್ಷರಾದ ಭಾಸ್ಕರ್ ಪಟಗಾರ, ಗೊಂಡ ಸಮಾಜದ ಅಭಿವೃದ್ಧಿ ಸಂಘದ ಗೌರವಾಧ್ಯಕ್ಷರಾದ ಸೋಮಯ್ಯ ಗೊಂಡರು, ರಾಜ್ಯಮಟ್ಟದ ಆಶುಭಾಷಣಕಾರರಾದ ಚಿದಾನಂದ ಪಟಗಾರ್, ಸಾಹಿತಿ ಉಮೇಶ್ ಮಂಡಳಿ ಭಟ್ಕಳ, ಗ್ರಾಮೀಣ ವ್ಯವಸಾಯ ಸೇವಾ ಸಹಕಾರಿ ಸಂಘ ಬೆಳಕೆ ಹಾಗೂ ಲ್ಯಾಂಪ್ ಸೊಸೈಟಿ ನಿರ್ದೇಶಕರಾದ ರಮೇಶ್ ಗೊಂಡ ಹಾಗೂ ವಕೀಲರಾದ ಪರಮೇಶ್ವರ ಗೊಂಡವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶ್ರೀ ಸ್ಪಂದನ ಸಾಂಸ್ಕೃತಿಕ ಸಂಘ ಕಿತ್ರೆ ಹಾಗೂ ಶ್ರೀ ದುರ್ಗಾಪರಮೇಶ್ವರಿ ಡಕ್ಕೆ ಕುಣಿತ ತಂಡ ಅಡಿಬಾರ್, ಡಕ್ಕೆ ಕುಣಿತ ಕುಂಟವಾಣಿ, ಮಾರುಕೇರಿ ಹಾಗೂ ಕಿತ್ರೆ ಗ್ರಾಮದ ಮಹಿಳೆಯರಿಂದ ಕೋಲಾಟ ಪ್ರದರ್ಶನ, ರಾಷ್ಟ್ರಮಟ್ಟದಲ್ಲಿ ಪ್ರಚಾರ ಗಿಟ್ಟಿಸಿಕೊಂಡ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಕಾನಮದ್ಲು ಹಾಗೂ ಶ್ರೀ ಶ್ರೀ ಲಕ್ಷ್ಮೀನಾರಾಯಣ ಭಜನಾ ಮಂಡಳಿ ಮಾಲಿಕೂಡ್ಲು ಇವರುಗಳು ಭಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದರು. ಹಿರಿಯ ಮಹಿಳಾ ಮತ್ತು ಪುರುಷ ಕಲಾವಿದರಿಂದ ಗೊಂಡ ಸಮಾಜದ ಶೋಭಾನೆ ಹಾಡು ಹಾಗೂ ಗೀಗಿ ಪದ, ಜಾನಪದ ಹಾಡು, ಭತ್ತ ಕುಟ್ಟುವ ಹಾಡು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಂದ ಸಂಗೀತ ಹಾಗೂ ಡಾನ್ಸ್ ಕಾರ್ಯಕ್ರಮ ಮಾಡುವ ಮೂಲಕ ವೇದಿಕೆಯಲ್ಲಿ ಕಲಾ ವೈಭವವನ್ನು ಸೃಷ್ಟಿಸಿದ್ದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಿಂದ ಗೊಂಡ ಸಮಾಜದ ವೈಶಿಷ್ಟ್ಯತೆ ಕುರಿತು ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಸುಮಾರು ೧೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಸಮಾಜ ಬಾಂಧವರುಗಳು ಸನ್ಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ಪಡೆದುಕೊಂಡರು.

ವೇದಿಕೆಯಲ್ಲಿ ಸಂಘದ ಪದಾಧಿಕಾರಿಗಳಾದ ಗೌರವಾಧ್ಯಕ್ಷ ಜಗದೀಶ್ ಗೊಂಡ, ಮಾಜಿ ಅಧ್ಯಕ್ಷರಾದ ಸಂತೋಷ್ ಗೊಂಡ, ಉಪಾಧ್ಯಕ್ಷ ದೇವರಾಜ ಗೊಂಡ, ಕಾರ್ಯದರ್ಶಿ ರಕ್ಷಿತ್ ಗೊಂಡ, ಖಜಾಂಚಿ ಭಾಸ್ಕರ ಗೊಂಡ, ಸಹ ಖಜಾಂಚಿ ಪರಮೇಶ್ವರ್ ಗೊಂಡ, ಹಾಗೂ ಸದಸ್ಯರಾದ ಶ್ರೀಧರ್ ಗೊಂಡ, ಜಯರಾಮ ಗೊಂಡ, ವೆಂಕಟೇಶ ಗೊಂಡ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ನಾಗರಾಜ್ ಗೊಂಡ,ಗದ್ದೆಮನೆ, ಕೊಣಾರ್ ಇವರು ನಿರೂಪಿಸಿ, ಕುಮಾರಿ ನಯನ ಮಾದೇವ ಗೊಂಡ ಪ್ರಾರ್ಥನೆ ಗೀತೆಯನ್ನು ಹಾಡಿದರು. ಶ್ರೀ ಮಂಜುನಾಥ್ ಗೊಂಡ ಜಾಲಿ ಇವರು ವಂದನಾರ್ಪಣೆ ಮಾಡಿದ್ದರು.

error: