May 21, 2024

Bhavana Tv

Its Your Channel

ಅಕ್ರಮ ಸರಾಯಿ ಮಾರಾಟ, ಭಟ್ಕಳ ಗ್ರಾಮೀಣ ಪೋಲಿಸರಿಂದ ದಾಳಿ, ಮದ್ಯದ ಬಾಟಲಿ ಹಾಗೂ ನಗದು ವಶ.

ಭಟ್ಕಳ: ಬೆಳಕೆ ಗ್ರಾಮದ ಪ್ರಭು ಹೋಟೆಲ್ ಹಿಂದುಗಡೆಯಲ್ಲಿನ ಸಾರ್ವಜನಿಕ ಜಾಗಾದಲ್ಲಿ ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಅಕ್ರಮವಾಗಿ ಸುಮಾರು 3,345 ರೂಪಾಯಿ ಮೌಲ್ಯದ ಮದ್ಯದ ಬಾಟಲಿಗಳನ್ನು ಒಂದು ದೊಡ್ಡ ಗೋಣಿ ಚೀಲದಲ್ಲಿ ಮಾರಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ ಅಕ್ರಮ ಮದ್ಯದ ಬಾಟಲಿಗಳ ಸಹಿತ ರೂ.2,000-00 ನಗದನ್ನು ಗ್ರಾಮೀಣ ಠಾಣೆಯ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಸಂಬAಧ ಅಕ್ರಮವಾಗಿ ಮದ್ಯವನ್ನು ಇಟ್ಟುಕೊಂಡಿದ್ದ ಸುಬ್ರಾಯ ಹೊನ್ನಪ್ಪ ನಾಯ್ಕ ಈತನಿಂದ ಬುಲೆಟ್ ಬೀರ್ 15 ಬಾಟಲಿಗಳು, ಯು.ಬಿ. ಎಕ್ಸ್ಪೋರ್ಟ 8 ಬಾಟಲಿಗಳು, ಕಿಂಗ್ ಫಿಶರ್ 4 ಬಾಟಲಿಗಳನ್ನು ವಶಕ್ಕೆ ಪಡೆದುಕೊಂಡ ಸಬ್ ಇನ್ಸ್ಪೆಕ್ಟರ್ ಮಯೂರ ಪಟ್ಟಣಶೆಟ್ಟಿ ಅವರು ನೀಡಿದ ದೂರಿನನ್ವಯ ಬಂಧಿಸಿ ಅಬಕಾರಿ ಕಾಯ್ದೆಯಡಿಯಲ್ಲಿ ಕೇಸು ದಾಖಲಿಸಿಕೊಂಡಿರುವ ಗ್ರಾಮೀಣ ಸಬ್ ಇನ್ಸಪೆಕ್ಟರ್ ಶ್ರೀಧರ ನಾಯ್ಕ ತನಿಖೆ ನಡೆಸಿದ್ದಾರೆ.

error: