May 3, 2024

Bhavana Tv

Its Your Channel

ಭಟ್ಕಳ: ನ್ಯೂ ಶಮ್ಸ್ ಸ್ಕೂಲ್ ಸ್ಟೂಡೆಂಟ್ ಕೌನ್ಸಿಲ್ ಚುನಾವಣೆ

ಅಕ್ರಮ, ಭ್ರಷ್ಟಚಾರ ರಹಿತ ಚುನಾವಣೆ ನಡೆಸುವುದು ಹೇಗೆಂದು ಕಲಿಸಿಕೊಟ್ಟ ವಿದ್ಯಾರ್ಥಿಗಳು

ಭಟ್ಕಳ: ಇಲ್ಲಿನ ಪ್ರತಿಷ್ಟಿತ ತರಬಿಯತ್ ಎಜ್ಯುಕೇಶನ್ ಸೂಸಟಿಯ ಐ.ಸಿ.ಎಸ್.ಇ ಪಠ್ಯ ಕ್ರಮದ ನ್ಯೂ ಶಮ್ಸ್ ಸ್ಕೂಲ್ ಶಾಲೆಯಲ್ಲಿ ಸ್ಟೂಡೆಂಟ್ಸ್ ಕೌನ್ಸಿಲ್ ಗಾಗಿ ಮಂಗಳವಾರ ಚುನಾವಣೆ ನಡೆಯಿತು.
ಆಧುನಿಕ ತಂತ್ರಜ್ಞಾನ ಬಳಸಿಕೊಂಡು ನಡೆದ ಚುನಾವಣೆಯಲ್ಲಿ ಅಕ್ರಮ ಹಾಗೂ ಭ್ರಷ್ಟಚಾರ ರಹಿತ ಚುನಾವಣೆ ಹೇಗೆ ನಡೆಸಬಹುದು ಎಂಬುದರ ಕುರಿತು ಮಾದರಿ ಚುನಾವಣೆ ನಡೆಸಿಕೊಟ್ಟ ವಿದ್ಯಾರ್ಥಿಗಳು ಇಂದಿನ ಭ್ರಷ್ಟ ಮತ್ತು ಅಕ್ರಮ ಚುನಾವಣಾ ವ್ಯವಸ್ಥೆಗೆ ತಕ್ಕ ಪಾಠ ಕಲಿಸುವಂತಿತ್ತು.
ನಾಮಪತ್ರ ಸಲ್ಲಿಸುವುದರಿಂದ ಹಿಡಿದು ಚುನಾವಣೆ ನಡೆದು ಫಲಿತಾಂಶ ಘೋಷಣೆಯಾಗುವವರೆಗೆ ಯಾವ ರೀತಿ ಕ್ರಮ ಕೈಗೊಳ್ಳಲಾಗುತ್ತದೆ ಎನ್ನುವುದರ ಕುರಿತಂತೆ ಪ್ರಯೋಗಿಕವಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವುದರ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳ ಪಾತ್ರವೇನು? ಹಾಗೂ ಒಂದು ಮಾದರಿ ಚುನಾವಣೆಯನ್ನು ಹೇಗೆ ನಡೆಸಲು ಸಾಧ್ಯ ಎಂಬುದರ ಕುರಿತಂತೆ ಶಾಲಾ ಆಡಳಿತ ಮತ್ತು ಶಿಕ್ಷಕ ವರ್ಗ ವಿದ್ಯಾರ್ಥಿಗಳಿಗೆ ಕಲಿಸಿಕೊಟ್ಟರು.
ಸ್ಕೂಲ್ ಲೀಡರ್, ಸ್ಪೋರ್ಟ್ಸ್ ಲೀಡರ್, ಕಲ್ಚರಲ್ ಲೀಡರ್, ಡಿಸಿಪ್ಲೀನ್ ಲೀಡರ್ ಹಾಗೂ ಇದರ ಸಹಾಯಕ ಹುದ್ದೆಗಳಿಗಾಗಿ ನಡೆದ ಚುನಾವಣೆಯಲ್ಲಿ ಕ್ರಮವಾಗಿ ಮುಹಮ್ಮದ್ ನುಬೈದ್, ಸೈಯ್ಯದ್ ವಸಾಫ್, ತಾಹೀರ್‌ಆಹ್ಮದ್, ಬಾಸಿಕ್ ಶೇಖ್, ಅಬ್ಬಾದ್, ಅಬ್ದುಲ್ಲಾರುಕ್ನುದ್ದೀನ್, ಅಬ್ದುಲ್ ಸಮೀ, ಮುಹಮ್ಮದ್ ಫೈಹಾನ್, (ಬಾಲಕರ ವಿಭಾಗ) ಹಾಗೂ ಬಾಲಕೀಯರ ವಿಭಾಗದಲ್ಲಿ ರುಖಯ್ಯ ಇಫ್ಲಾಹ್, ರಬಿಯಾದಾಮ್ದಾ,, ಅರ್ವಾ ಮೊಮಿನ್, ಫೈಹಾ, ಅತ್ಫಾಹ್, ಫಾತಿಮಾಅನುಮ್, ರಬಿಯಾ ನಹ್ರೀನ್, ಶಮಯಿಮ್ ವಿದ್ಯಾರ್ಥಿಕೌನ್ಸಿಲ್ ಗೆ ಆಯ್ಕೆಗೊಂಡಿದ್ದಾರೆ.
ಈ ಸಂದರ್ಭದಲ್ಲಿ ಪ್ರಾಂಶುಪಾಲ ಲಿಯಾಖತ್ ಅಲಿ, ಆಡಳಿತ ಮಂಡಳಿ ಉಪಾಧ್ಯಕ್ಷ ಸೈಯ್ಯದ್‌ಖುತುಬ್ ಬರ್ಮಾವರ್, ಕಾರ್ಯದರ್ಶಿ ಅನಂ ಆಲಾ ಎಂ.ಟಿ., ಹಾಗೂ ಶಿಕ್ಷಕರು ಹಾಜರಿದ್ದರು.
ಹೊಸದಾಗಿ ಚುನಾಯಿತರಾದ ವಿದ್ಯಾರ್ಥಿ ಪರಿಷತ್ತಿನ ಸದಸ್ಯರುತಮ್ಮ ಸಹವಿದ್ಯಾರ್ಥಿಗಳ ಪ್ರತಿನಿಧಿಗಳಾಗಿ ಸೇವೆ ಸಲ್ಲಿಸುವ ಸಮರ್ಪಣೆ ಮತ್ತು ಜವಾಬ್ದಾರಿಯೊಂದಿಗೆ ತಮ್ಮ ಪಾತ್ರಗಳನ್ನು ನಿರ್ವಹಿಸಲು ಸಿದ್ಧರಾಗಿದ್ದಾರೆ. ಅವರ ಚುನಾವಣೆಯು ಇತರರಿಗೆ ಸ್ಫೂರ್ತಿಯಾಗಿದೆ, ನ್ಯಾಯಯುತ ಮತ್ತು ಪಾರದರ್ಶಕ ರೀತಿಯಲ್ಲಿ ಚುನಾವಣೆಗಳನ್ನು ನಡೆಸುವ ಮಹತ್ವವನ್ನು ಇಂದು ನಡೆದ ಶಮ್ಸ್ ಸ್ಟೂಡೆಂಟ್ಸ್ಕೌನ್ಸಿಲ್ ಚುನಾವಣೆ ಎತ್ತಿ ತೋರಿಸಿದೆ.
ಪ್ರಜಾಸತ್ತಾತ್ಮಕ ಪ್ರಕ್ರಿಯೆಯ ಬಗ್ಗೆ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಮತ್ತು ಚುನಾವಣಾ ಸಮಯದಲ್ಲಿ ನೈತಿಕ ನಡವಳಿಕೆಯನ್ನು ಉತ್ತೇಜಿಸಲು ನ್ಯೂ ಶಮ್ಸ್ ಶಾಲೆಯ ಉಪಕ್ರಮವು ಪ್ರದೇಶದಾದ್ಯಂತ ಶಿಕ್ಷಣ ಸಂಸ್ಥೆಗಳಿಗೆ ಶ್ಲಾಘನೀಯ ಉದಾಹರಣೆಯಾಗಿದೆ. ಚಿಕ್ಕ ವಯಸ್ಸಿನಿಂದಲೇ ಸಮಗ್ರತೆ ಮತ್ತು ನ್ಯಾಯದ ಮೌಲ್ಯಗಳನ್ನು ತುಂಬುವ ಮೂಲಕ, ಸಮಾಜಕ್ಕೆ ಧನಾತ್ಮಕವಾಗಿ ಕೊಡುಗೆ ನೀಡುವ ಜವಾಬ್ದಾರಿಯುತ ನಾಗರಿಕರನ್ನು ರೂಪಿಸುವ ಗುರಿಯನ್ನು ಶಾಲೆ ಹೊಂದಿದೆ.

error: