ದಾಂಡೇಲಿ :- ಉತ್ತರ ಕನ್ನಡ ಜಿಲ್ಲಾ ಕಾಂಗ್ರೇಸ ಸಮಿತಿ ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾ ಪದಾಧಿಕಾರಿಗಳ ಪಟ್ಟಿಯನ್ನು ಜಿಲ್ಲಾ ಅಧ್ಯಕ್ಷರಾದ ನಾಗರಾಜ ನಾರ್ವೇಕರ ರಾಜ್ಯ ಅಧ್ಯಕ್ಷರಾದ ಎಮ್.ಡಿ.ಲಕ್ಷ್ಮಿನಾರಾಯಣರ ಆದೇಶ ಮೇರೆಗೆ ಮತ್ತು ಮಾಜಿ ಜಿಲ್ಲಾ ಉಸ್ತುವಾರಿ ಸಚಿವರು,ಹಾಲಿ ಶಾಸಕರಾದ ಆರ್. ವಿ. ದೇಶಪಾಂಡೆಯವರ ನಿರ್ದೇಶನದಂತೆ ತಾಲೂಕ ಸಮಿತಿಯ ಅಧ್ಯಕ್ಷರ ಅಭಿಪ್ರಾಯ ಸಂಗ್ರಹಿಸಿ ಪಧಾದಿಕಾರಿಗಳ ಪಟ್ಟಿಯಲ್ಲಿ ಬಿಡುಗಡೆ ಗೊಳಿಸಿದ್ದಾರೆ. ಈ ಸಂದರ್ಭದಲ್ಲಿ ದಾಂಡೇಲಿ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾದ ವಿನಾಯಕ ಎಂ ಬಾರಕೇರು ಮಾತನಾಡಿ ನನಗೆ ಅಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಿರುವ ನಮ್ಮ ಪಕ್ಷದ ರಾಜ್ಯದ ಮುಖಂಡರು ನನಗೆ ನೀಡಿರುವ ಜವಾಬ್ದಾರಿಯನ್ನು ಪಕ್ಷದ ತತ್ವ ಸಿದ್ಧಾಂತ ಹಾಗೂ ಮುಖಂಡರಗಳ ಆದೇಶವನ್ನು ಪಾಲಿಸುವ ಜೊತೆಗೆ ಬಡವರು,ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಶ್ರಮಿಸುವದಾಗಿ ಹೇಳಿದರು. ನನ್ನನ್ನು ಆಯ್ಕೆ ಮಾಡಲು ಸಹಕರಿಸಿದ ರಾಜ್ಯ ಅಧ್ಯಕ್ಷರಾದ ಎಂ ಡಿ ಲಕ್ಷ್ಮಿನಾರಾಯಣ ಜಿಲ್ಲಾ ಅಧ್ಯಕ್ಷರಾದ ನಾಗರಾಜ ನಾರ್ವೇಕರ ಹಾಗೂ ಪಕ್ಷದ ಎಲ್ಲಾ ಮುಖಂಡರುಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ
More Stories
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಸಾಹಿತಿ ಆರ್.ಡಿ. ಹೆಗಡೆ, ಆಲ್ಮನೆ ಆಯ್ಕೆ
ದಾಂಡೇಲಿಯಲ್ಲಿ ನಡೆದ ಮೊದಲ ಕನ್ನಡ ಸಾಹಿತ್ಯ ಸಮ್ಮೇಳನ
ಹಣತೆಯಿಂದ ಸಾರಾ ಅಬೂಬಕ್ಕರ್ಗೆ ಅರ್ಥಪೂರ್ಣ ಗೌರವ : ಡಾ: ತೃಪ್ತಿ ನಾಯಕ