October 5, 2024

Bhavana Tv

Its Your Channel

ದಾಂಡೇಲಿಯಲ್ಲಿ ನಡೆದ ಮೊದಲ ಕನ್ನಡ ಸಾಹಿತ್ಯ ಸಮ್ಮೇಳನ

ದಾಂಡೇಲಿ:-

ಸಾಹಿತ್ಯ ಎಂದರೆ ಕೇವಲ ಪ್ರಚಾರ ಮಾಧ್ಯಮವಲ್ಲ .ಅಥವಾ ಕೇವಲ ಪುಸ್ತಕ ಬರೆಯುವುದು ಅಷ್ಟೇ ಅಲ್ಲ. ಬರಹಗಳ ಮೂಲಕ ಸಾಮಾಜಿಕ ಹೊಣೆಗಾರಿಕೆನಿರ್ವಹಿಸುವುದು ಕೂಡ ಸಾಹಿತ್ಯವೇ ಆಗಿದೆ ಎಂದು ಹಿರಿಯ ಸಾಹಿತಿ ಡಾ ಆರ್.ಜಿ. ಹೆಗಡೆ ನುಡಿದರು.

ಅವರು ದಾಂಡೇಲಿಯ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ದಾಂಡೇಲಿ ತಾಲೂಕಾ ಮೊದಲ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಸಾಹಿತಿಗಳಾದವರು ಭ್ರಮಾ ಲೋಕದಲ್ಲಿ ಇರಬಾರದು. ಅವರು ವಾಸ್ತವ ಲೋಕದಲ್ಲಿರಬೇಕು. ಕೆಲವರು ಸಾಹಿತಿ ಎಂದ ಮಾತ್ರಕ್ಕೆ ತಮ್ಮನ್ನ ತಾವೇ ಮರೆತು ವರ್ತಿಸುವುದನ್ನ ಕಾಣುತ್ತಿದ್ದೇವೆ. ಸಾಹಿತ್ಯದ ಮೂಲಕ ಪರಸ್ಪರ ಪ್ರೀತಿಸುವುದನ್ನು ಆ ಮೂಲಕ ಸುಂದರ ಸಮಾಜ ನಿರ್ಮಿಸುವ ಸಂದೇಶವನ್ನು ನೀಡಬೇಕು ಎಂದರು.

ಭಾಷೆ ಕಳೆದು ಹೋದರೆ ಸಮುದಾಯ ತನ್ನ ಶಕ್ತಿ ಕಳೆದುಕೊಳ್ಳುತ್ತದೆ. ಕನ್ನಡ ಭಾಷೆ ಕಲಿಯದಿದ್ದರೆ ನಮ್ಮ ಸಂಸ್ಕೃತಿಯನ್ನು ಕಲಿಯಲು ಸಾದ್ಯವಿಲ್ಲ. ನಮ್ಮ ಒಳ ಭಾಷೆಗಳನ್ನೂ ಉಳಿಸಿಕೊಳ್ಳಬೇಕು

ನಮ್ಮ ಸಾಂಸ್ಕೃತಿಕ ಚಳುವಳಿಯ ಪುನರುತ್ಥಾನದಿಂದಲೇ ಈ ದೇಶದ ಸ್ವಾತಂತ್ರ್ಯ ಚಲಕುವಳಿ ಹಾಗೂ ಎಲ್ಲ ಕ್ರಾಂತಿಗಳು ಆರಂಭವಾಗಿದ್ದು. ಜಗತ್ತಿನ ಹೊಸ ಸತ್ಯವನ್ನು ಒಂದು ಚೌಕಟ್ಟಿನಲ್ಲಿ ಹಾಕಿ ದಾಖಲೆ ಮಾಡುವುದೇ ಸಾಹಿತ್ಯ.
ದಾಂಡೇಲಿ ಇದು ಸುಂದರವಾದ ನಗರ. ಹೊಸ ತಾಲೂಕು ಆಗಿರುವ ದಾಂಡೇಲಿ ತಮ್ಮದು ಎನ್ನುವ ಅಭಿಮಾನ ಎಲ್ಲರಲ್ಲೂ ಬರಬೇಕು. ಈ ಸಮ್ಮೇಳನ ಆ ಮೂಲಕ ಒಂದು ಉಪರಾಷ್ಟ್ರೀಯತೆಯ ಭಾವವನ್ನು ಎಲ್ಲರಲ್ಕಿ ತುಂಬಲಿ. ಸೌಹಾರ್ದತೆಗೆ ಮಾದರಿಯಾಗಿರುವ ದಾಂಡೇಲಿಯಲ್ಲಿ ಈ ದೇಶದ ಎಲ್ಲವನ್ನು ಕಾಣಲು ಸಾಧ್ಯವಿದೆ. ನೂತನ ದಾಂಡೇಲಿ ತಾಲೂಕಿಗೆ ಅವಶ್ಯ ಇರುವ ಕಚೇರಿಗೆ ಬರುವಂತಾಗಬೇಕು. ಇಲ್ಲಿ ಪ್ರಾಣಿ ಶಾಸ್ತ್ರ, ಸಸ್ಯ ಶಾಸ್ತ್ರ ಬುಡಕಟ್ಟು ಅಧ್ಯಯನಗಳ ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರಗಳು ಆರಂಭಿಸುವಂತೆ ಆಗಬೇಕು ಎಂಬ ಒತ್ತಾಯ ಮಾಡಿದರು.

ಸಾಹಿತ್ಯದ ಮೂಲಕ ಸಮಾಜ ಕಟ್ಟುವ ಕೆಲಸವಾಗಲಿ- ದೇಶಪಾಂಡೆ
ಸಾಹಿತ್ಯ ರಚನೆ ಇದು ಎಲ್ಲರಿಂದ ಆಗುವಂತಹ ಕೆಲಸವಲ್ಲ. ಅದು ಕೆಲವರಿಗೆ ಮಾತ್ರ ಸಿದ್ದಿಸುವಂತಹ ಒಂದು ವರ. ನಾವು ನಮ್ಮ ಮನೆಯಲ್ಲಿ ಮಾಡುವ ನಿತ್ಯದ ಕೆಲಸ , ವೃತ್ತಿಗಳ ಜೊತೆಗೆ ಒಂದಿಷ್ಟು ಸಾಹಿತ್ಯ ಮತ್ತು ಸಾಂಸ್ಕೃತಿಕ ಕೆಲಸಗಳಲ್ಲಿ ತೊಡಿಸಿಕೊಳ್ಳಬೇಕು. ಆಗಲೇ ಮನಸ್ಸಿನ ಹಾಗೂ ದೇಹದ ಆಯಾಸ ನಿವಾರಣೆಯಾಗಲು ಸಾಧ್ಯವಾಗುತ್ತದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ನುಡಿದರು.

ಅವರು ಡಾ. ಆರ್.ಜಿ. ಹೆಗಡೆಯವರ ‘ ಬೆಲೆಂಟೈನ ವಿಸ್ಕಿ’ ಎಂಬ ಕಥಾಸಂಕಲನ ಬಿಡುಗಡೆ ಮಾತನಾಡಿದರು. ಬಿ.ಎನ್. ವಾಸರೆ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ನಂತರದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರಂತರ ಸಾಹಿತ್ಯದ ಕಾರ್ಯಕ್ರಮಗಳು ಸಮ್ಮೇಳನಗಳು ನಡೆಯುತ್ತಿದೆ. ಇದು ಬೆಳವಣಿಗೆ. ಅವರ ಸಂಘಟನಾ ಶಕ್ತಿಗೆ ನನ್ನ ಮೆಚ್ಚುಗೆ ಇದೆ. ವಾಸರೆಯವರ ಮನವಿಯಂತೆ ದಾಂಡೇಲಿಯಲ್ಲಿ ಒಂದು ಸಾಹಿತ್ಯ ಭವನ ಆಗಬೇಕು. ಅದಕ್ಕಾಗಿ ಈಗಾಗಲೇ ನಗರಸಭೆಯವರಿಗೆ ಸಾಮಾನ್ಯ ಸಭೆಯಲ್ಲೊಂದು ಠರಾವು ಮಾಡಿ ಪ್ರಸ್ತಾವನೆ ಕಳಿಸಲು ತಿಳಿಸಿದ್ದು, ನಿಮಿಷನ ಮಂಜೂರಿಯಾದ ನಂತರದಲ್ಲಿ ಸಾಹಿತ್ಯ ಪರಿಷತ್ತಿನಿಂದಲೋ ಅಥವಾ ಸರಕಾರದಿಂದಲೋ ನಿರ್ಮಿಸಲು ನನ್ನಿಂದಾದ ಎಲ್ಲಾ ಪ್ರಯತ್ನವನ್ನು ಮಾಡುತ್ತೇನೆ ಎಂದರು.

ನಮ್ಮ ಬದುಕು ಅಪ ಮೌಲ್ಯದ ಕಡೆ ಸಾಗುತ್ತಿದೆ -ಮಟ್ಟಿಹಾಳ
ಇಂದು ಅನೇಕ ಸೂಕ್ಷ್ಮ ವಿಚಾರಗಳು, ಮನುಷ್ಯನ ಸಂಬಂಧವನ್ನು ಕೆಡಿಸುವಂತಹ ಸಂಗತಿಗಳು ನಮ್ಮೊಳಗೆ ಹರಿದಾಡುತ್ತಿವೆ. ಇಂತಹ ವಿಚಾರಗಳ ತಬ್ಬಿಕೊಳ್ಳುವಿಕೆಯಿಂದ ನಮ್ಮ ಬದುಕು ಅಪ ಮೌಲ್ಯದ ಕಡೆಗೆ ಸಾಗುತ್ತಿದೆ ಎಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಡಾ. ಆರ್.ಸಿ. ಹಿರೇಮಠ್ ಅಧ್ಯಯನ ಪೀಠದ ಅಧ್ಯಕ್ಷರಾದ ಡಾ. ನಿಜಲಿಂಗಪ್ಪ ಮಟ್ಟಿಹಾಳ ನುಡಿದರು.

ಅವರು ಸಾಹಿತ್ಯ ಸಮ್ಮೇಳದ ಉದ್ಘಾಟನೆ ನೆರವೇರಿಸಿ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪರಿಸರವನ್ನು ಮಲಿನ ಗೊಳಿಸುತ್ತಿದ್ದಾನೆ. ಹಾಗೆಯೇ ಸಮಾಜವನ್ನು ಕೂಡ ಮಲಿನಗೊಳಿಸುತ್ತಿದ್ದಾನೆ. ಪಠ್ಯ ಶಿಕ್ಷಣಗಳಲ್ಲಿ ಯಾವುದೇ ರೀತಿಯ ಹೇರಿಕೆ ಸರಿಯಾದ ಕ್ರಮವಲ್ಲ. ಬರಹಗಾರನಾದವು ಸತ್ಯ ಬರೆಯಬೇಕು. ಸಮಾಜಕ್ಕೆ ನೈತಿಕ ಎಚ್ಚರವನ್ನು ನೀಡಬೇಕು ಎಂದ ಮಟ್ಟಿಹಾಳವರು ಉತ್ತರ ಕನ್ನಡ ಇದು ಸುಂದರವಾದ ಜಿಲ್ಲೆ . ಪ್ರಾಕೃತಿಕ ಸಂಪತ್ತಿನ ಜಿಲ್ಲೆ, ಈ ಜಿಲ್ಲೆಗೆ ಮುಕುಟ ಪ್ರಾಯವಾಗಿರುವಂಥದ್ದು ದಾಂಡೇಲಿ ಎಂಬ ಸುಂದರ ಪರಿಸರ ನಗರ. ಇದು ಪಂಪನ ಜಿಲ್ಲೆ, ಪಂಪನ ಆಶಯಗಳನ್ನ ಹೊತ್ತುಕೊಂಡಿರುವ ಜಿಲ್ಲೆ. ನಾಡಿನ ಎಲ್ಲ ಸಾಹಿತಿಗಳನ್ನ ಆಕರ್ಷಿಸುವಂತಹ ಜಿಲ್ಲೆ ಉತ್ತರ ಕನ್ನಡ. ಸಾಹಿತಿಕವಾದ ಸಾಂಸ್ಕೃತಿಕವಾದ ಬುಡಕಟ್ಟು ಹಾಗೂ ಇತರೆ ಜನಪದ ಸಂಸ್ಕೃತಿಯನ್ನು ಹೊಂದಿರುವಂತಹ ಸೀಮಂತವಾದ ಜಿಲ್ಲೆ. ಆದರೆ ಈ ಜಿಲ್ಲೆ ಮೂಲಭೂತವಾಗಿ ಮೂಲಸೌಕರ್ಯದ ವಿಚಾರದಲ್ಲಿ ಇನ್ನು ಅಭಿವೃದ್ಧಿಯಾಗಬೇಕಿದೆ ಎಂದರು.

ಜಿಲ್ಲೆಯಲ್ಲಿ ಎಲ್ಲರನ್ನ ಒಳಗೊಂಡು ಪರಿಷತ್ತಿನ ಮುನ್ನಡೆಸುತ್ತಿದ್ದೇವೆ- ವಾಸರೆ

ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕಳೆದೊಂದು ವರ್ಷದಿಂದ ರಚನಾತ್ಮಕ ಕಾರ್ಯಕ್ರಮಗಳು ನಡೆಯುತ್ತಿವೆ. ಪರಿಷತ್ತಿನಲ್ಲಿ ಅವರಿವರನ್ನದೆ ಎಲ್ಲರನ್ನ ಒಳಗೊಂಡು ಸಂಘಟಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದೇವೆ. ಆದಾಗ್ಯೂ ಕೆಲವರು ಪರಿಷತ್ತಿಗೆ ಅವಮಾನವಾಗುವ ರೀತಿಯಲ್ಲಿ ಮಾತನಾಡುತ್ತಿರುವುದು ಸಮಂಜಸವಲ್ಲ ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ನುಡಿದರು.

ಸಾಹಿತಿಯಾದವ ಒಬ್ಬರ ನಡುವೆ ಮತ್ತೊಬ್ಬರಿಗೆ ಸೇತುವಾಗಬೇಕೆ ಹೊರತು ಒಡೆಯುವ ಕೆಲಸವನ್ನು ಮಾಡಬಾರದು. ದಾಂಡೇಲಿಯಲ್ಲಿ ಕೂಡ ನಾವು ಎಲ್ಲರನ್ನೂ ಆಹ್ವಾನಿಸಿದ್ದೇವೆ, ಆದರೆ ಕೆಲವರು ಮಾತ್ರ ಕಾರ್ಯಕ್ರಮಕ್ಕೆ ಬರಲೊಪ್ಪದ ಹಿನ್ನೆಲೆಯಲ್ಲಿ ಅವರನ್ನ ಕೈ ಬಿಡಲಾಗಿದೆ. ಎಂದ ವಾಸರೆಯವರು ದಾಂಡೇಲಿ ತಾಲೂಕ ಆದ ನಂತರದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಈ ಸಾಹಿತ್ಯ ಸಮ್ಮೇಳನ ಸಂಘಟಿಸುವಲ್ಲಿ ಸಹಕರಿಸಿದ ಪ್ರತಿಯೊಬ್ಬರನ್ನ ಅಭಿನಂದಿಸಿದರು.

ದ್ವಾರಗಳನ್ನ ಉದ್ಘಾಟಿಸಿದ ನಗರಸಭಾ ಅಧ್ಯಕ್ಷ ಸರಸ್ವತಿ ರಾಜಪೂತ, ಪುಸ್ತಕ ಮಳಿಗೆ ಉದ್ಘಾಟಿಸಿದ ಉಪಾಧ್ಯಕ್ಷ ಸಂಜಯ್ ನಂದ್ಯಾಳಕರ, ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದ ಸಮ್ಮೇಳನ ಸಂಯೋಜನ ಸಮಿತಿಯ ಅಧ್ಯಕ್ಷ ಟಿ. ಆರ್. ಚಂದ್ರಶೇಖರ್ ಶುಭಾಶಯ ಕೋರಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಗೌರವ ಕಾರ್ಯದರ್ಶಿ ಪಿ.ಆರ್. ನಾಯ್ಕ, ತಾಲೂಕ ಹಿಂದಿನ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾದ ಮುರ್ತುಜಾ ಹುಸೇನ್, ಆನೆಹೊಸೂರ, ಮನೋಹರ್ ಜನ್ನು ಸಾಂದರ್ಭಿಕವಾಗಿ ಮಾತನಾಡಿದರು. ತಹಶೀಲ್ದಾರ್ ಅಶೋಕ್ ಶಿಗ್ಗಾವಿ, ಪೌರಾಯುಕ್ತ ರಾಜಾರಾಮ್ ಪವಾರ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾ ಅಧಿಕಾರಿ ಪ್ರಕಾಶ ಹಾಲಮ್ಮನವರ್, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದ್ ಮಹಾಲೆ , ವೆಸ್ಟ್ ಕೋಸ್ಟ್ ಪೇಪರ್ ಮಿಲ್ ನ ಸಾರ್ವಜನಿಕ ಸಂಪರ್ಕ ಅಧಿಕಾರಿ ಕೆ.ಜಿ. ಗಿರಿರಾಜ ಸಾಹಿತಿ ದುಂಡಪ್ಪ ಗೂಳೂರು, ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುರೇಶ್ ನಾಯ್ಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ ನಾಯಕ, ಬಾವಿಕೇರಿ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಾಕಿರ್ ಜಂಗುಬಾಯಿ, ಜೋಯಿಡಾ ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಯಶವಂತ ನಾಯ್ಕ, ಕನ್ನಡ ಸಾಹಿತ್ಯ ಪರಿಷತ್ತಿನ ಜೋಯಿಡಾ ತಾಲೂಕ ಅಧ್ಯಕ್ಷ ಪಾಂಡುರಂಗ ಪಟಗಾರ, ಯಲ್ಲಾಪುರ ತಾಲೂಕ ಘಟಕದ ಅಧ್ಯಕ್ಷ ಸುಬ್ರಮಣ್ಯ ಭಟ್, ಮುಂತಾದವರು ಉಪಸ್ಥಿತರಿದ್ದರು.

ಸಹ್ಯಾದ್ರಿ ಲಲಿತಕಲಾ ಕೇಂದ್ರದ ತಂಡದವರು ನಾಡಗೀತೆ ಪ್ರಸ್ತಾಪ ಪ್ರಸ್ತುತಪಡಿಸಿದರು. ಕಸಾಪ ದಾಂಡೇಲಿ ತಾಲೂಕು ಘಟಕದ ಅಧ್ಯಕ್ಷ ನಾರಾಯಣ ನಾಯ್ಕ, ಸ್ವಾಗತಿಸಿದರು. ಕಾರ್ಯದರ್ಶಿ ಗುರುಶಾಂತ್ ಜಡೆ ಹಿರೇಮಠ ಸಂದೇಶವಾಚನ ಮಾಡಿದರೆ. ಬಿಡುಗಡೆಗೊಂಡ ಡಾ. ಆರ್. ಜಿ.ಹೆಗಡೆ ಅವರ ‘ಬ್ಯಾಲೆಂಟೆನ್ ವಿಸ್ಕಿ’ ಕಥಾಸಂಕಲನವನ್ನು ಉಪನ್ಯಾಸಕಿ ತೃಪ್ತಿ ನಾಯಕ ಪುಸ್ತಕ ಪರಿಚಯಿಸಿದರು. ಎನ್.ಆರ್. ನಾಯ್ಕ ದ್ವಾರಗಳನ್ನ ಪರಿಚಯಿಸಿದರು. ಕಸಾಪ ದಾಂಡೇಲಿ ಘಟಕದ ಕಾರ್ಯದರ್ಶಿ ಪ್ರವೀಣ್ ಎಸ್. ನಾಯ್ಕ ವಂದಿಸಿದರು ಉಪನ್ಯಾಸಕಿ ನಿರೂಪಮಾ ನಾಯ್ಕ ನಿರೂಪಿಸಿದರು. ಅನಿಲ್ ದಂಡಗಲ್, ಮುಸ್ತಾಕ ಶೇಖ್ ಸಮನ್ವಯದ ಜವಾಬ್ದಾರಿ ನಿರ್ವಹಿಸಿದರು.

ಧ್ವಜಾರೋಹಣ
ಮುಂಜಾನೆ ತಹಶೀಲ್ದಾರ್ ಅಶೋಕ್ ಶಿಗ್ಗಾವಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದರೆ, ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಪರಿಷತ್ತಿನ ಧ್ವಜಾರೋಹಣ ನೆರವೇರಿಸಿದರು. ದಾಂಡೇಲಿ ತಾಲೂಕು ಘಟಕದ ಅಧ್ಯಕ್ಷ ನಾರಾಯಣ ನಾಯ್ಕ ನಾಡ ಧ್ವಜಾರೋಹಣ ಮಾಡಿದರು.

ಆಕರ್ಷಕ ಮೆರವಣಿಗೆ
ಕಿತ್ತೂರು ಚೆನ್ನಮ್ಮ ವೃತ್ತದಿಂದ ಜೇ.ಎನ್. ರಸ್ತೆಯ ಮೂಲಕ ಸಭಾಂಗಣದವರೆಗೆ ಆಕರ್ಷಕ ಕಲಾತಂಡಗಳ ಮೆರವಣಿಗೆ ನಡೆಯಿತು. ಮೆರವಣಿಗೆಗೆ ಪೌರಾಯುಕ್ತ ರಾಜಾರಾಮ ಪವಾರ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಉಳಿವಿ ಶಾಲಾ ವಿದ್ಯಾರ್ಥಿಗಳ ಸುಂದರ ನೃತ್ಯ, ಸಿದ್ದಿ ಬೊಂಬೆ ಕುಣಿತ, ಡಮಾಮಿ ನೃತ್ಯ ಹಾಗೂ ದಾಂಡೇಲಿಯ ವಿವಿಧ ತಾಲೂಕುಗಳ ಹಲವು ಸಾಂಸ್ಕೃತಿಕ ನೃತ್ಯಗಳು ಇತಿಹಾಸ ಪುರುಷರ ಹಾಗೂ ನಾಡ ಮಹನೀಯರ ವೇಷಭೂಷಣಗಳು ಉಡುಗೆ ತೊಡುಗೆಗಳು ಗಮನ ಸೆಳೆದವು

error: