ಗೋಕರ್ಣ ಸಮೀಪದ ಮೊಡರ್ನ ಎಜುಕೇಶನ್ ಟ್ರಸ್ಟ್ ನ ಮೊಡರ್ನ ಎಜುಕೇಶನ್ ಶಾಲೆಯಲ್ಲಿ 67ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿAದ ಆಚರಿಸಲಾಯಿತು.
ಶಾಲೆಯ ಶೈಕ್ಷಣಿಕ ಮಾರ್ಗದರ್ಶಕರಾದ ಮಂಜು ಹಿತ್ತಲಮಕ್ಕಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಕನ್ನಡ ರಾಜ್ಯೋತ್ಸವದ ಶುಭದಿನದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಕನ್ನಡವನ್ನು ರಕ್ಷಿಸುವ ಕೆಲಸ ನಮ್ಮಿಂದಾಗಬೇಕು, ಹಾಗೂ ಕನ್ನಡ ಏಕೀಕರಣದ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು. ಮುಖ್ಯೋಧ್ಯಾಪಕರಾದ ರಾಜೇಶ ಗೊನ್ಸಾಲ್ವಿಸ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಎಲ್ಲರನ್ನು ಸ್ವಾಗತಿಸಿ ಕನ್ನಡ ರಾಜ್ಯೋತ್ಸವದ ಕುರಿತು ಹಿತನುಡಿಯಾಡಿದರು. ಲಹರಿ ನಾಯಕ್ ರಾಜ್ಯೋತ್ಸವದ ಕುರಿತು ಮಾತನಾಡಿದ ರೀತಿ ಸಾಹಿತ್ಯದ ಶ್ರೀಮಂತಿಕೆಯನ್ನು ಹೆಚ್ಚಿಸುವಂತಿತ್ತು. ಈ ಸಂದರ್ಭದಲ್ಲಿ ಚಿನ್ನರು ರಾಣಿ ಚೆನ್ನಮ್ಮ ಒನಕೆ ಓಬವ್ವ ಮುಂತಾದ ವೀರ ವನಿತೆಯರ ವೇಷ ಧರಿಸಿ ನೋಡುಗರನ್ನು ಆಕರ್ಷಿಸುತ್ತಿದ್ದರು. ಹೈ ಸ್ಕೂಲ್ ವಿದ್ಯಾರ್ಥಿಗಳ ಸಮೂಹ ನೃತ್ಯ, ಕನ್ನಡ ,ಕನ್ನಡ ಎಂಬ ಗಾಯನಗಳು ವಿದ್ಯಾರ್ಥಿಗಳನ್ನು ಹಾಗೂ ಪಾಲಕರನ್ನು ರಂಜಿಸುತ್ತಿತ್ತು. ಸ್ಕೌಟ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳು ಶಿಸ್ತಿನ ಸಿಪಾಯಿಗಳಂತೆ ಶಾಲಾ ಆವರಣದಲ್ಲಿ ಸಂಚರಿಸಿ ವಿದ್ಯಾರ್ಥಿಗಳನ್ನು ಶಿಸ್ತಿನಿಂದರುವAತೆ ನೋಡಿಕೊಂಡರು. ಸಂಸ್ಥೆಯ ಅಧ್ಯಕ್ಷರಾದ ಸಂತೋಷ್ ನಾಯಕ ತೊರ್ಕೆ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಎಲ್ಲರಿಗೂ ಶುಭ ಹಾರೈಸಿದರು
More Stories
ಪಾದಾಚಾರಿಗೆ ಬಡಿದ ಕಾರು: ಸ್ಥಳದಲ್ಲೇ ಸಾವು
ಹಿರೇಗುತ್ತಿ ಹೈಸ್ಕೂಲ್ ರಾಷ್ಟçಮಟ್ಟದಲ್ಲಿ ಮಿಂಚುತಿದೆ – ಸತೀಶ ಸೈಲ್
ಕಡಿಮೆ ಶಾಲೆಯಲ್ಲಿ ಸಂಭ್ರಮದ ಗಣರಾಜ್ಯೋತ್ಸವ ಆಚರಣೆ