May 2, 2024

Bhavana Tv

Its Your Channel

ಹಿರೇಗುತ್ತಿ ರಾಷ್ಟ್ರೀಯ ಹೆದ್ದಾರಿ ಎನ್‌ಎಚ್66 ಕಾಮಗಾರಿಯಲ್ಲಿ ಅಧಿಕಾರಿಗಳ ದಿವ್ಯ ನಿರ್ಲಕ್ಷ

ಗೋಕರ್ಣ: ಹಿರೇಗುತ್ತಿಯಲ್ಲಿ ನಡೆಯುತ್ತಿರುವ ಚತುಷ್ಪಥ ಹೆದ್ದಾರಿ ನಿರ್ಮಾಣದಲ್ಲಿ ಅವೈಜ್ಞಾನಿಕ ಕಾಮಗಾರಿ ನಡೆಯುತ್ತಿದ್ದು ಈ ಮೊದಲು ಬ್ರಹ್ಮಜಟಕ ದೇವಾಲಯದ ಕಟ್ಟಡದ ಮೂಲ ಸ್ವರೂಪಕ್ಕೆ ಧಕ್ಕೆ ಬಾರದಂತೆ ರಾಷ್ಟಿçÃಯ ಹೆದ್ದಾರಿ 66 ರಲ್ಲಿ ನುಶಿಕೋಟೆ ಕ್ರಾಸ್‌ನವರೆಗೆ ಎರಡೂ ಬದಿಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರ್ವಿಸ್ ರಸ್ತೆ ನಿರ್ಮಿಸುವ ಜೊತೆಗೆ ಬ್ರಹ್ಮಜಟಗ ದೇವಸ್ಥಾನದ ಹತ್ತಿರದಿಂದ ಹರಿಜನ ಕೇರಿಗೆ ಹೋಗುವ ರಸ್ತೆಗೆ ಸಂಪರ್ಕ ಕಲ್ಪಿಸುವ ವಿಚಾರವಾಗಿ ಹಲವು ಬಾರಿ ಹಿರೇಗುತ್ತಿಯಲ್ಲಿ ಸಭೆ ನಡೆದಿತ್ತು. ಅಲ್ಲದೇ 2018ರಲ್ಲಿ ಜಿಲ್ಲಾಧಿಕಾರಿಗಳು ಕಾರವಾರ ಹಾಗೂ ಶಾಸಕರ ಅಧ್ಯಕ್ಷತೆಯಲ್ಲಿ ಹಿರೇಗುತ್ತಿ ಗ್ರಾಮ ಪಂಚಾಯತ್‌ದಲ್ಲಿ ಸಾರ್ವಜನಿಕರೊಂದಿಗೆ ಚರ್ಚಿಸಿ ಯಾವ ರೀತಿ ರಸ್ತೆ ನಿರ್ಮಾಣವಾಗಬೇಕು ಎಂಬುದರ ಕುರಿತು ಈ ಮೊದಲು ಮಾಡಿದ ನೀಲನಕ್ಷೆಯಂತೆ ರಸ್ತೆ ನಿರ್ಮಿಸಬೇಕು ಎಂಬ ಬಗ್ಗೆ ನಿಯಮಾವಳಿ ಮಾಡಿದ್ದು ಇರುತ್ತದೆ. ಆದರೆ ಈಗ ನಿಯಮಾವಳಿಯನ್ನು ಗಾಳಿಗೆ ತೂರಿ ಐ ಆರ್ ಬಿ ಅಧಿಕಾರಿಗಳು ತಮಗೆ ತೋಚಿದಂತೆ ರಸ್ತೆ ಕಾಮಗಾರಿ ನಡೆಸುತ್ತಿದ್ದಾರೆ. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಐ ಆರ್ ಬಿ ಅಧಿಕಾರಿಗಳನ್ನು ಊರಿನವರು ಸಂಪರ್ಕಿಸಿದರೆ ಸೂಕ್ತ ವಿವರಣೆ ನೀಡದೇ ಹಾರಿಕೆಯ ಉತ್ತರ ನೀಡುತ್ತಿದ್ದಾರೆ. ಕಾರಣ ಈ ಹಿಂದೆ ಜಿಲ್ಲಾಧಿಕಾರಿಗಳ, ಸಾರ್ವಜನಿಕ ಸಭೆಯಲ್ಲಿ ನಡೆದ ನಿಯಮಾವಳಿಯಂತೆ ರಸ್ತೆ ಕಾಮಗಾರಿ ನಡೆಯಬೇಕೆಂದು ಗ್ರ‍್ರಾಮ ಪಂಚಾಯತ ಹಿರೇಗುತ್ತಿ, ಶ್ರೀ ಬ್ರಹ್ಮಜಟಕ ಯುವಕ ಸಂಘ ಹಾಗೂ ಹೈಸ್ಕೂಲ್ ಹಾಗೂ ಕಾಲೇಜು ಆಡಳಿತ ಮಂಡಳಿ, ಶಾಲೆಯ Sಆಒಅ ಅಧ್ಯಕ್ಷರು, ಸದಸ್ಯರು ಹಾಗೂ ಊರ ನಾಗರಿಕರು ಆಗ್ರಹಿಸಿ, ತಪ್ಪಿದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿರುತ್ತಾರೆ.

• ಹಿರೇಗುತ್ತಿರಾಷ್ಟ್ರೀಯ ಹೆದ್ದಾರಿ ಓಊ 66ರಲ್ಲಿ ನುಶಿಕೋಟೆ ಕ್ರಾಸ್‌ನಿಂದ ಬಳಲೆ ಕ್ರಾಸ್‌ನವರೆಗೆ ಎರಡೂ ಬದಿಯಲ್ಲಿ ಸರ್ವಿಸ್ ರಸ್ತೆ ಮಾಡಬೇಕು.
• ಬ್ರಹ್ಮಜಟಗ ದೇವಸ್ಥಾನದ ಸಮೀಪದಿಂದ ಶಾಲಾ, ಕಾಲೇಜಿನವರೆಗೂ ಮಳೆಗಾಲದಲ್ಲಿ ಮಳೆಯ ನೀರು ಹರಿದು ಹೋಗುವಂತೆ ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ವ್ಯವಸ್ಥೆ ಮಾಡಿ ನೀರು ಹಳ್ಳಕ್ಕೆ ಸೇರುವ ವ್ಯವಸ್ಥೆ ಮಾಡಬೇಕು.(ಈ ವರ್ಷದ ಅಂದರೆ 2022 ರ ಮಳೆಯಲ್ಲಿ ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದಿರುವುದರಿಂದ ಸುಮಾರು 25 ಮನೆಗಳು ಜಲಾವೃತಗೊಂಡಿದೆ).
• ಸರ್ವೀಸ್ ರಸ್ತೆ ಇಲ್ಲದೇ ಇರುವುದರಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ಹಿರೇಗುತ್ತಿ, ಅಂಚೆಕಛೇರಿ, ಅರಣ್ಯ ಇಲಾಖೆ ಆಫೀಸ್, ಕತ್ತದ ಫ್ಯಾಕ್ಟರಿ, ಪಶು ಚಿಕಿತ್ಸಾಲಯ, ಹರಿಜನ ಕೇರಿಗೆ ಹೋಗಲು ಸೂಕ್ತ ಸಂಪರ್ಕ ರಸ್ತೆ ನಿರ್ಮಿಸಬೇಕು.
• ಹಿರೇಗುತ್ತಿ ಶಾಲಾ-ಹೈಸ್ಕೂಲ್ ಹಾಗೂ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ದಿನಂಪ್ರತಿ ವಿದ್ಯಾಭ್ಯಾಸಕ್ಕೆ ಬರುತ್ತಿದ್ದು, ವಿದ್ಯಾರ್ಥಿಗಳಿಗೆ ಸರ್ವೀಸ್ ರಸ್ತೆ ಅನುವು ಮಾಡಿ ಕೊಡಬೇಕು. ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಎರಡೂ ಬದಿಯಲ್ಲಿ ಬಸ್ ತಂಗುದಾಣ ನಿರ್ಮಿಸಿ ಗ್ರಾಮೀಣಭಾಗದ ಮಕ್ಕಳಿಗೆ ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ ವ್ಯವಸ್ಥೆ ಮಾಡಿ ರಸ್ತೆ ಯುದ್ದಕ್ಕೂ ದೀಪದ ವ್ಯವಸ್ಥೆ ಮಾಡಬೇಕು.
• ಹಿರೇಗುತ್ತಿಯಿಂದ ಸರ್ವಿಸ್ ರೋಡ್ ಗೋಕರ್ಣ ರೋಡ್ ಬಳಲೆಯವರೆಗೂ ಸಂಪರ್ಕ ಕಲ್ಲಿಸಬೇಕು. ಯಾಕೆಂದರೆ ಗೋಕರ್ಣ ರಸ್ತೆಗೆ ಸರಿಯಾದ ರಸ್ತೆ ಇಲ್ಲದೇ ಇರುವುದರಿಂದ ವಾಹನ ಸವಾರರು ವಿರುದ್ದ ದಿಕ್ಕಿನಲ್ಲಿ ವಾಹನ ಚಲಾಯಿಸಿ ಈಗಾಗಲೇ ಅನೇಕ ಅಪಘಾತಗಳಿಂದ ಜೀವಹಾನಿಯಾಗಿದೆ. ಈ ಸಮಸ್ಯೆಯನ್ನು ಗಂಭೀರವಾಗಿ ಗಮನಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಲಿಸಬೇಕು.
• ಹಿರೇಗುತ್ತಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿರುವ ಈ ಎಲ್ಲಾ ಸಮಸ್ಯೆಗಳನ್ನು ಸಂಬoಧಿಸಿದ ಅಧಿಕಾರಿಗಳು ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಊರಿನ ಎಲ್ಲಾ ಸಂಘಟನೆಗಳು ಆಗ್ರಹಿಸಿವೆ.

error: