May 8, 2024

Bhavana Tv

Its Your Channel

ಅರಣ್ಯ – ಪರಿಸರ ಮಾನವನ ಅವಿಭಾಜ್ಯ ಅಂಗ- ಮಾರುತಿ ಗುರೂಜಿ

ಹೊನ್ನಾವರ: ಅರಣ್ಯ ಮತ್ತು ಪರಿಸರ ಮಾನವನ ಅವಿಭಾಜ್ಯ ಅಂಗ. ಮಾನವನ ಬದುಕು ಪರಿಸರದ ಮೇಲೆ ಅವಲಂಭಿತವಾಗಿದೆ. ಅರಣ್ಯೀಕರಣಕ್ಕೆ ಪೂರಕವಾಗಿ ಮಾನವ ಕಾರ್ಯಪ್ರವರ್ತರಾಗಬೇಕು ಎಂದು ಬಂಗಾರಮಕ್ಕಿ ಮಾರುತಿ ಗುರೂಜಿಯವರು ಹೇಳಿದರು.

ಅವರು ಇಂದು ಬಂಗಾರಮಕ್ಕಿ ಮಠದ ಆವರಣದಲ್ಲಿ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ‘೩೦ ವರ್ಷಹೋರಾಟ- ೩೦ ಸಾವಿರ ಗಿಡ’ ನೆಡುವ ಹೋನ್ನಾವರ ತಾಲೂಕಿನ ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.
ಅರಣ್ಯವಾಸಿ ಹೋರಾಟಗಾರರು ಅರಣ್ಯಭೂಮಿ ಅವಲಂಭಿತ ಕೃಷಿ ಚಟುವಟಿಕೆ ಜೊತೆಯಲ್ಲಿ ಗಿಡ ನೆಡುವ ಕಾರ್ಯ ಯೋಜನೆ ಹಮ್ಮಿಕೊಂಡಿರುವುದು ಅರಣ್ಯವಾಸಿ ಹೋರಾಟಗಾರರ ಪರಿಸರ ಪರ ಸಂದೇಶ ಸಾರುತ್ತದೆ. ಅರಣ್ಯವಾಸಿಗಳಿಂದ ಅರಣ್ಯ
ನಾಶವಾಗಿದ್ದಿರುವುದಿಲ್ಲ. ಸರಕಾರದ ಅಭಿವೃದ್ದಿಯ ಯೋಜನೆಗಳು ಇಂದು ಅರಣ್ಯಕ್ಕೆ ಮಾರಕವಾಗಿರುವುದು ವಿಷಾದಕರ ಎಂದು ಅವರು ಹೇಳುತ್ತಾ ಪ್ರತಿಯೊಂದು ಕುಟುಂಬವು ಕನಿಷ್ಟ ೨ ಗಿಡ ನೆಡುವದೊಂದಿಗೆ ಜಿಲ್ಲೆಯಲ್ಲಿ ‘೩೦ ವರ್ಷ ಹೋರಾಟ – ೩೦ ಸಾವಿರ ಗಿಡ’ ನೆಡುವ ಕಾರ್ಯಕ್ರಮವು ಜನಾಂದೋಲನವಾಗಬೇಕು ಇದಕ್ಕೆ ಒಗಟ್ಟಿನಲ್ಲಿ ಸಹಕರಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೋನ್ನಾವರ ತಾಲೂಕಿನ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ಚಂದ್ರಕಾAತ ಕೋಚರೆಕರ ವಹಿಸಿದ್ದು ಅರಣ್ಯಭೂಮಿ ಸಾಗುವಳಿದಾರರು ಅರಣ್ಯ ಬೆಳೆಸುವುದೊಂದಿಗೆ ಹಸಿರುಕರಣಕ್ಕೆ ಸ್ಫಂದಿಸಬೇಕು. ಅರಣ್ಯ ಅತಿಕ್ರಮಣದಾರರು ಅರಣ್ಯವನ್ನ ಉಳಿಸಿ ಬೆಳೆಸುವ ಮನೋವೃತ್ತಿ ಹೋಂದಿರುವವರಾಗಿರಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದ ನೇತ್ರತ್ವವನ್ನು ವಿನೋದ ನಾಯ್ಕ, ರಾಮ ಮರಾಠಿ,ಲಕ್ಷ್ಮಣ  ಗೌಡ, ಅಣ್ಣಪ್ಪ
ನಾಯ್ಕ, ಶೇಷಗಿರಿ ನಾಯ್ಕ, ಮಂಜುನಾಥ ನಾಯ್ಕ ಮುಂತಾದವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಕೇತ ನಾಯ್ಕ ಸ್ವಾಗತಿಸಿ ವಂದಿಸಿದರು

error: