May 4, 2024

Bhavana Tv

Its Your Channel

ಡಾ. ವಿ ವಿ ಶೆಟ್ಟಿಯವರ ಶ್ರದ್ದಾಂಜಲಿ ಸಭೆ.

ಹೊನ್ನಾವರ: ಕಳೆದ ನಲವತ್ತಕ್ಕೂ ಹೆಚ್ಚು ವರ್ಷಗಳಿಂದ ವೈದ್ಯಕೀಯ ಸೇವೆ ನೀಡಿ ಇತ್ತೀಚಿಗೆ ನಿಧನರಾದ ಹೊನ್ನಾವರ ತಾಲ್ಲೂಕಿನ ಮಂಕಿಯ ಡಾ.ವಿ.ವಿ ಶೆಟ್ಟಿಯವರ ಶ್ರದ್ಧಾಂಜಲಿ ಸಭೆ ಮಂಕಿಯ ಲಕ್ಷ್ಮಿ ವೆಂಕಟೇಶ ದೇವಸ್ಥಾನದಲ್ಲಿ ನಡೆಯಿತು.

ಸಭೆಯಲ್ಲಿ ಸಂತಾಪ ಸೂಚಿಸಿ ಮಾತನಾಡಿದ ಸೆಂಟ್ ಮಿಲಾಗ್ರೀಸ್ ಸೌಹಾರ್ದ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಜೋರ್ಜ್ ಫರ್ನಾಂಡೀಸ್ ರವರು ಡಾ.ವಿ.ವಿ ಶೆಟ್ಟಿಯವರು ಮಂಕಿ ಗ್ರಾಮಕ್ಕೆ ವೈದ್ಯಕೀಯ ಸೇವೆಯೊಂದಿಗೆ ಸಾಮಾಜಿಕವಾಗಿಯೂ ಸ್ಪಂದಿಸಿದ್ದಾರೆ. ಹಗಲಿರುಳು ನಿರಂತರ ಜನರ ಸೇವೆಯಿಂದ ಜನಮನ ಗೆದಿದ್ದರು ಎಂದರು.
ಪತ್ರಕರ್ತ ಟಿ.ಬಿ ಹರಿಕಾಂತರವರು ಮಾತನಾಡಿ ಡಾ. ಶೆಟ್ಟಿಯವರು ವೈದ್ಯಕೀಯ ಸೇವೆಯೊಂದಿಗೆ ಮೂಢನಂಬಿಕೆ ನಿಮೂರ್ಲನೆಗೂ ಹೆಚ್ಚು ಒತ್ತು ನೀಡಿದ್ದರು. ಮಂಕಿಯಲ್ಲಿ ಹಲವು ಸಂಘಸAಸ್ಥೆಗಳು ಹುಟ್ಟಿಕೊಳ್ಳಲು ಅವರು ಪ್ರೇರಣೆಯಾಗಿದ್ದರು ಎಂದರು. ಮುಖಂಡರಾದ ವಾಮನ ನಾಯ್ಕ, ಸುಬ್ರಾಯ ನಾಯ್ಕ, ವಿನೋದ ಮಹಾಲೆ, ಮಂಕಿ ಮುಸ್ಲಿಂ ಜಮಾಥನ್ ಅಧ್ಯಕ್ಷ ಇರ್ಷಾದ ಖಾಜಿ, ಉಪಾಧ್ಯಕ್ಷ ಹಸನ್ ಬಾಪ್, ರೋಟರಿ ಹಿರಿಯ ಸದಸ್ಯ ಡಾ ರಂಗನಾಥ ಪೂಜಾರಿ, ಶಿಕ್ಷಕರ ಸಂಘದ ಅಧ್ಯಕ್ಷ, ಡಾ.ಸುನೀಲ್ ಮುಂತಾದವರು ನುಡಿನಮನ ಸಲ್ಲಿಸಿದರು.
ಶ್ರದ್ಧಾಂಜಲಿ ಸಭೆಯಲ್ಲಿ ಮುಖಂಡರಾದ ಶಂಭು ಬೈಲಾರ, ಮಾರುತಿ ಮಹಾಲೆ, ಸುರೇಶ ಖಾರ್ವಿ, ಉಲ್ಲಾಸ ನಾಯ್ಕ, ಆನಂದ ನಾಯ್ಕ, ಶಿಕ್ಷಕ ವಿಷ್ಣು ನಾಯ್ಕ, ಎಂ.ಟಿ ಗಣಪತಿ, ಅಣ್ಣಪ್ಪ ನಾಯ್ಕ, ವಿನಾಯಕ ಭಟ್, ಪ್ರಾನ್ಸಿಸ್ ಫರ್ನಾಂಡೀಸ್, ಡಾ.ವಿ.ವಿ.ಶೆಟ್ಟಿಯವರ ಪತ್ನಿ ವನಿತಾ ಶೆಟ್ಟಿ, ಮಗ ಡಾ ಗಣೇಶ ವಿ. ಶೆಟ್ಟಿ ,ಮಗಳು ಡಾ ಪ್ರಿಯದರ್ಶಿನಿ, ಅಳಿಯ,ಡಾ ಮಿಥುನ ಭಂಡಾರಿ, ಡಾ ವರ್ಷಾ ಶೆಟ್ಟಿಯವರು ಪಾಲ್ಗೊಂಡಿದ್ದರು.
ವೆಂಕಟೇಶ ಮೇಸ್ತ. ಕಾರ್ಯಕ್ರಮ ನಿರ್ವಹಿಸಿದರು. ಡಾ ಮಿಥುನ ಭಂಡಾರಿಯವರು ವಂದಿಸಿದರು.

error: