May 8, 2024

Bhavana Tv

Its Your Channel

ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ಯ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮ

ಹೊನ್ನಾವರ: ಬಿಜೆಪಿ ಪಕ್ಷದಲ್ಲಿ ಗ್ರಾಮಪಂಚಾಯತ ಮಟ್ಟದಿಂದ ಲೋಕಸಭೆ ತನಕ ಸುಳ್ಳು ಹೇಳುತ್ತಾರೆ. ಇವರ ಮಾತಿಗೆ ಬದ್ಧತೆ ಇಲ್ಲ, ಪ್ರತಿದಿನ ಸಾಮಗ್ರಿಗಳ ದರ ಗಗನಕ್ಕೇರುತ್ತಿದೆ. ಇಂತಹ ಪರಿಸ್ಥಿಯಲ್ಲಿ ಬಡವರು ಎನು ಮಾಡಬೇಕು?, ಬದುಕುವುದು ಹೇಗೆ? ಇಂತ ಕೆಟ್ಟ ಮನಸ್ಥಿತಿಯ ಸರಕಾರವನ್ನು ಕಿತ್ತು ಎಸೆಯಬೇಕಾಗಿದೆ ಎಂದು ಮಾಜಿ ಶಾಸಕ ಮಂಕಾಳ ವೈದ್ಯ ಹೇಳಿದರು.

ಅವರು ಮಂಕಿ ಬ್ಲಾಕ್ ಕಾಂಗ್ರೆಸನ ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ಯ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮದ ಪ್ರಯುಕ್ತ ನಗಬಸ್ತಿಕೇರಿ ಗ್ರಾಮ ಪಂಚಾಯತ ವ್ಯಾಪ್ತಿಯ ಉಪ್ಪಿನಗೋಳಿ ದೇವಸ್ಥಾನ ಸಭಾಭವನದಲ್ಲಿ ಕಾರ್ಯಕ್ರಮ ಉದ್ಘಾಟನೆಮಾಡಿ ಮಾತನಾಡಿದರು.

ಮೂರು ವರ್ಷದಲ್ಲಿ ಗ್ರಾಮ ಪಂಚಾಯತ ಮಟ್ಟದಲ್ಲಿ ಒಂದೇ ಒಂದು ಮನೆಮಂಜೂರಿ ಮಾಡದ ಬಿಜೆಪಿ ಸರಕಾರ ಆಡಳಿತ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಭಟ್ಕಳ ಮಾಜಿ ಶಾಸಕ ದಿ.ಚಿತ್ತರ೦ಜನ, ತಿಮ್ಮಪ್ಪ ನಾಯ್ಕ, ಪರೇಶ ಮೇಸ್ತರ ಸಾವಿನ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ತನಿಖೆ ಪೂರ್ಣಗೊಂಡರೆ ಆರೋಪಿ ಇವರೇ ಆಗುತ್ತಾರೆ. ಗಾಂಧೀಜಿಯಿAದ ಪ್ರಾರಂಭಗೊAಡು ಅಲ್ಲಿಂದ ಇಲ್ಲಿಯ ತನಕ ಸಾವನ್ನೇ ಮುಂದಿಟ್ಟು ರಾಜಕಾರಣ ಮಾಡಿಕೊಂಡು ಬಂದಿದ್ದಾರೆ ಎಂದು ಆರೋಪಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ವೀಕ್ಷಕಿ ಡಾ. ಸುನೀತಾ ಶೆಟ್ಟಿ ಮಾತನಾಡಿ ಮಹಾತ್ಮಾ ಗಾಂಧೀಜಿಯವರ ನಿಜವಾದ ರಾಮ ರಾಜ್ಯದ ಕನಸಾಗಿತ್ತು. ಗ್ರಾಮೀಣ ಭಾಗದ ಸಾಮಾನ್ಯ ಜನರು ಅಭಿವೃದ್ಧಿ ಕಾಣಬೇಕು ಎನ್ನುವುದು ಕನಸಾಗಿತ್ತು. ಇಂದಿನ ಬಿಜೆಪಿಯ ರಾಮ ರಾಜ್ಯಕ್ಕೂ ಗಾಂಧಿ ರಾಮರಾಜ್ಯಕ್ಕೂ ತುಂಬಾ ವ್ಯತ್ಯಾಸವಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯ್ಕ ಮಾತನಾಡಿ ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ಯ ಕಾರ್ಯಕ್ರಮ ೧೯ ಗ್ರಾಮ ಪಂಚಾಯತ ಮುಗಿಸಿ ೨೦ ನೆಯ ಕೊನೆಯ ಕಾರ್ಯಕ್ರಮ ನಗರಬಸ್ತಿಕೇರಿಯಲ್ಲಿ ಸಮಾರೋಪ ಸಮಾರಂಭ ಯಶಸ್ವಿಯಾಗಿ ನಡೆಯಿತು. ಮಾಜಿ ಶಾಸಕ ಮಂಕಾಳ್ ವೈದ್ಯರವರು ತಮ್ಮ ಅಧಿಕಾರ ಅವಧಿಯಲ್ಲಿ ಶರಾವತಿ ನದಿಗೆ ೫ ಸೇತುವೆ ಕೊಡುಗೆ ನೀಡಿದ್ದರು.ಆದರೆ ಬಿಜೆಪಿಯವರು ನಗರಬಸ್ತಿಕೇರಿ ಸೇತುವೆ ತಾವೇ ತಂದಿದ್ದು ಎಂದು ಸುಳ್ಳು ಬರೆದುಕೊಳ್ಳುತ್ತಾರೆ. ನಗರಬಸ್ತಿಕೇರಿ ಸೇತುವೆ ಸಂಬAಧಪಟ್ಟ ಎಲ್ಲಾ ದಾಖಲಾತಿ ನಮ್ಮಲ್ಲಿ ಇದೆ, ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡುತ್ತೇವೆ. ಮತ್ತೊಮ್ಮೆ ಮಂಕಾಳ ವೈದ್ಯರ ಅವಶ್ಯಕತೆ ಭಟ್ಕಳ ಕ್ಷೇತ್ರಕ್ಕೆ ಇದೆ ಎಂದರು.

ವೇದಿಕೆಯಲ್ಲಿ ಪಕ್ಷದ ಮುಖಂಡರಾದ ಮಂಜುನಾಥ ನಾಯ್ಕ, ಕೃಷ್ಣ ಗೌಡ ಮಾವಿನಕುರ್ವಾ, ಪುಷ್ಪ ನಾಯ್ಕ, ಯೋಗೇಶ ರಾಯ್ಕರ, ವಾಮನ ನಾಯ್ಕ ಮಂಕಿ, ರಾಜು ನಾಯ್ಕ ಮಂಕಿ, ಯುವ ಕಾಂಗ್ರೆಸ್ ಅಧ್ಯಕ್ಷ ಹರೀಶ ಗೌಡ, ಲೋಕೇಶ್ ನಾಯ್ಕ, ಉದಯ ನಾಯ್ಕ, ಅಣ್ಣಪ್ಪ ನಾಯ್ಕ ಭಾಸ್ಕರ ನಾಯ್ಕ ಮುಂತಾದವರು ಉಪಸ್ಥಿತರಿದ್ದರು. ಮಂಕಿ ಬ್ಲಾಕ್ ಕಾರ್ಯದರ್ಶಿ ಅಣ್ಣಪ್ಪ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.

ಭಾವನಾ ಟಿವಿಗಾಗಿ ವೆಂಕಟೇಶ ಮೇಸ್ತ ಹೊನ್ನಾವರ

error: