May 20, 2024

Bhavana Tv

Its Your Channel

ಹೊನ್ನಾವರ ತಾಲೂಕಿನ ಅಳ್ಳಂಕಿ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ

ಹೊನ್ನಾವರ ತಾಲೂಕಿನ ಅಳ್ಳಂಕಿ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅತಿಥಿ ಗಳಾಗಿ ಮಾತನಾಡಿದ  ಉಪನ್ಯಾಸಕಿ ಪದ್ಮಾವತಿ ನಾಯ್ಕ ಕರ್ನಾಟಕ ಏಕೀಕರಣದ ಕುರಿತು ಮಾತನಾಡಿ" ಕನ್ನಡದ ಅಭಿಮಾನವೆಂದರೆ ಇತರ ಭಾಷೆಗಳ ದ್ವೇಷವಲ್ಲ, ಎಲ್ಲ ಭಾಷೆಗಳನ್ನು ಒಪ್ಪಿಕೊಳ್ಳುತ್ತ , ನಮ್ಮ ಭಾಷೆಯನ್ನು ಅಪ್ಪಿಕೊಳ್ಳುವುದು" ಎಂದು ನುಡಿದರು.   ಇನ್ನೋರ್ವ ಅತಿಥಿ ಸತೀಶ ನಾಯ್ಕ  ಇವರು ಕನ್ನಡದ ಹಿರಿಮೆ ಹಾಗೂ ವರ್ಣಮಾಲೆಯ ವೈಶಿಷ್ಟ್ಯವನ್ನು ಬಣ್ಣಿಸಿದರು. 
  ವಿದ್ಯಾರ್ಥಿಗಳಲ್ಲಿ ಶ್ರೀನಿಧಿ , ನಿಶ್ಚಿತಾ, ಭವ್ಯ  ಕನ್ನಡಾಭಿಮಾನದ ಬಗ್ಗೆ ಮಾತನಾಡಿದರು.
  ಅಧ್ಯಕ್ಷತೆ ವಹಿಸಿದ್ದ  ಪ್ರಾಚಾರ್ಯ ಡಾ. ಜಿಎಸ್. ಹೆಗಡೆ  ಸಾಹಿತ್ಯ, ಸಂಗೀತ, ಚಿತ್ರಕಲೆ ಮೂರನ್ನೂ ಮೇಳೈಸಿದ ಇಂದಿನ ಸಾಂಸ್ಕೃತಿಕ ಸಂಘಟನೆಯೇ ಬಹುಮುಖ್ಯ  ಕನ್ನಡದ ಕೆಲಸವೆಂಬುದಾಗಿ   ನುಡಿದರು.
   ರಾಜ್ಯೋತ್ಸವದ ಅಂಗವಾಗಿ ಮಕ್ಕಳಿಗೆ ನಾಡ ಗೀತೆ ಸ್ಪರ್ಧೆ ನಡೆಸಲಾಯಿತು. ಮಕ್ಕಳ ಚಿತ್ರಕಲಾ ಪ್ರದರ್ಶನದಲ್ಲಿ ಅಚಿಂತ್ಯ ಅವಧಾನಿ, ರವಿರಾಜ ನಾಯ್ಕ, ಲೋಹಿತ ನಾಯ್ಕ,ಸ್ಫೂರ್ತಿ ನಾಯ್ಕ,  ಅನಿಶ, ಮಾನಸಾ, ಪವಿತ್ರಾ, ಲಕ್ಷ್ಮಿ ಮುಂತಾದವರ ಚಿತ್ರಗಳು ಎಲ್ಲರ  ಗಮನ ಸೆಳೆದವು.

ಕಾರ್ಯಕ್ರಮ ವನ್ನು ಪುನೀತ ರಾಜಕುಮಾರ ಅವರ ಕೊಡುಗೆ ಸ್ಮರಿಸಿ ಅವರಿಗೆ ಸಮರ್ಪಿಸಲಾಯಿತು.
ಭಾರ್ಗವ ಭಟ್ ಸ್ವಾಗತಿಸಿದರು. ಜೀವನ ಹಬ್ಬು ವಂದಿಸಿದರು. ಮಹೇಶ ಹೆಗಡೆ ನಿರೂಪಿಸಿದರು.

error: