May 18, 2024

Bhavana Tv

Its Your Channel

ನೀಲಗೋಡ ಯಕ್ಷಿ ಚೌಡೇಶ್ವರಿ ದೇವಸ್ಥಾನದಲ್ಲಿ ೨೪ ಕಾಯಿ ಗಣಹೋಮ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ

ವರದಿ:ವೆಂಕಟೇಶ ಮೇಸ್ತ ಹೊನ್ನಾವರ
ಹೊನ್ನಾವರ: ತನ್ನ ಮಹಿಮೆಯಿಂದ ಅಪಾರ ಪ್ರಸಿದ್ದಿ ಪಡೆದಿರುವ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಬಳ್ಕೂರಿನ ನೀಲಗೋಡ ಯಕ್ಷಿ ಚೌಡೇಶ್ವರಿ ದೇವಸ್ಥಾನದಲ್ಲಿ ಭಕ್ತರೊಬ್ಬರು ಹರಕೆಯ ಪ್ರಯುಕ್ತ ೨೪ ಕಾಯಿ ಗಣಹೋಮ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೇರವೇರಿಸಿದರು.


ಶಕ್ತಿ ಜಾಗ್ರತಿಕ್ಷೇತ್ರ ಎಂದು ಪ್ರಸಿದ್ದಿಹೊಂದಿರುವ ಶ್ರೀ ನೀಲಗೋಡ ಕ್ಷೇತ್ರದಲ್ಲಿ ಪ್ರತಿ ನಿತ್ಯವು ಸಾವಿರಾರು ಭಕ್ತರು ದೇವಿಯ ದರ್ಶನಕ್ಕೆ ಆಗಮಿಸುತ್ತಾರೆ. ದೇವಿಯ ದರ್ಶನದ ಅನುಗ್ರಹದಿಂದ ಸಾವಿರಾರು ಭಕ್ತರು ಅನುಗ್ರಹವನ್ನು ಪವಾಡದ ರೀತಿಯಲ್ಲಿ ಅನುಭವಿಸುತ್ತಾರೆ. ಪ್ರತಿ ಅಮವಾಸ್ಯೆಯೆಂದು ಸಾವಿರಾರು ಭಕ್ತರು ಆಗಮಿಸುತ್ತಿದ್ದು ಭಕ್ತ ಸಾಗರವೇ ನೇರದಿರುತ್ತದೆ. ಅನಾರೋಗ್ಯ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಪರಿಹಾರ ಪಡೆಯುತ್ತಾರೆ.

ಪುತ್ರ ಸಂತಾನಕ್ಕಾಗಿ ಕೂಡ ವಿಶೇಷ ಅನುಗ್ರಹಗಳು ನಡೆಯುತ್ತವೆ. ಅದರಂತೆ ಕುಮಟಾ ತಾಲ್ಲೂಕಿನ ಮಿರ್ಜಾನ ಮೂಲದ ಜ್ಯೋತಿ ಮತ್ತು ಶೇಖರ ಅಂಬಿಗರವರು ತಮ್ಮ ಬಾವ ಬಳ್ಕೂರಿನ ಧರ್ಮ ಅಂಬಿಗರವರ ಸಲಹೆಯಂತೆ ನೀಲಗೋಡ ಕ್ಷೇತ್ರಕ್ಕೆ ಬಂದು ದೇವಿಯ ದರ್ಶನ ಪಡೆದರು. ಅವರಿಗೆ ಮದುವೆಯಾಗಿ ಎರಡು ಹೆಣ್ಣು ಮಕ್ಕಳ ಸಂತತಿ ಹೊಂದಿದ್ದರು. ಅವರಿಗೆ ಒಂದು ಗಂಡು ಮಗು ಬೇಕು ಎಂಬ ತೀವ್ರ ಆಸೆಯನ್ನು ಹೊಂದಿದ್ದರು. ಇನ್ನೊಂದೊ ಮಗು ಹೆಣ್ನೂ ಮಗುವೇ ಹುಟ್ಟಬಹುದೆಂಬ ಆತಂಕವು ಇತ್ತು. ಆದ್ದರಿಂದ ಅವರು ದೇವಿ ನೀಲಗೋಡೆಶ್ವರಿಯ ಮೊರೆ ಹೋದರು. ತಾಯಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ದೇವಿಯು ಗಂಡು ಮಗು ಹುಟ್ಟುವ ಭರವಸೆ ನೀಡಿತ್ತು. ಆಪ್ರಕರವಾಗಿ ಶೇಖರ ದಂಪತಿಗಳಿಗೆ ಗಂಡು ಮಗು ಹುಟ್ಟಿದ್ದು ಬುಧವಾರ ನೀಲಗೋಡ ದೇವಸ್ಥಾನದಲ್ಲಿ ೨೪ ಕಾಯಿಗಳ ವಿಶೇಷ ಗಣಹೋಮ ನಡೆಯಿತು.

ಶ್ರೀನೀಲಗೋಡ ಕ್ಷೇತ್ರದಲ್ಲಿ ನಿತ್ಯವು ಸಾವಿರಾರು ಭಕ್ತರು ಆಗಮಿಸುತ್ತಿದ್ದು, ಪ್ರತಿ ಮಂಗಳವಾರ,ಶುಕ್ರವಾರ ಹಾಗೂ ರವಿವಾರ ದೇವಿಯ ಹೇಳಿಕೆಯ ದರ್ಶನ ಇರುತ್ತದೆ. ಪ್ರತಿ ಅಮವಾಸ್ಯೆಯಂದು ಪವಿತ್ರ ತೀರ್ಥ ಸ್ನಾನ್ ನಡೆಯುತ್ತಿದ್ದು ಸಾವಿರಾರು ಭಕ್ತರು ದೇವಿಯ ಅನುಗ್ರಹಕ್ಕೆ ಪಾತ್ರರಾಗುತ್ತಾರೆ.

error: