May 4, 2024

Bhavana Tv

Its Your Channel

ಶ್ರೀ ಲಕ್ಷ್ಮೀ ನರಸಿಂಹ ಆಂಜನೇಯ ದೇವಾಲಯದಲ್ಲಿ ಕಾರ್ತೀಕ ದೀಪೋತ್ಸವ

ಹೊನ್ನಾವರ ತಾಲೂಕಿನ ಹರಡಸೆಯ ಶ್ರೀ ಲಕ್ಷ್ಮೀ ನರಸಿಂಹ ಆಂಜನೇಯ ದೇವಾಲಯದಲ್ಲಿ ಕಾರ್ತೀಕ ದೀಪೋತ್ಸವ ಸಮಾರೋಪವು ೨೪ ಗಂಟೆಗಳ ನಿರಂತರ ಭಜನೆಯೊಂದಿಗೆ ಸಂಪನ್ನಗೊoಡಿತು.
ಹರಡಸೆಯ ಶ್ರೀ ಲಕ್ಷ್ಮೀನರಸಿಂಹ ಆಂಜನೇಯ ದೇವಾಲಯದಲ್ಲಿ, ಕಾರ್ತೀಕ ಮಾಸದ ಒಂದು ತಿಂಗಳುಗಳ ಕಾಲ ಸಂಜೆ ಪ್ರತಿನಿತ್ಯವೂ ಎರಡು ತಾಸಿನ ಅವಧಿಯಲ್ಲಿ ಭಜನಾ ಕಾರ್ಯಕ್ರಮ ಹಾಗೂ ದೀಪೋತ್ಸವ ನಡೆಯಿತು.
ಕೊನೆಯ ದಿನವಾದ ಅಮಾವಾಸ್ಯೆಯಂದು ಪ್ರತಿವರ್ಷದಂತೆ ಈ ವರ್ಷವೂ ಸಹ ಮದ್ಯಾಹ್ನ ಒಂದು ಗಂಟೆಗೆ ಭಜನೆಯನ್ನು ಪ್ರಾರಂಭಿಸಿ, ಮಾರನೇ ದಿನ ಮದ್ಯಾಹ್ನ ಒಂದು ಗಂಟೆಯ ವರೆಗೆ ತಾಳವನ್ನು ನಿಲ್ಲಿಸದಂತೆ ನಿರಂತರವಾಗಿ ೨೪ ಗಂಟೆಗಳ ಕಾಲ ಭಜನೆಯನ್ನು ಮಾಡಲಾಯಿತು.
ಈ ಭಜನಾ ಕಾರ್ಯಕ್ರಮದಲ್ಲಿ ಊರಿನ ಪರಊರಿನ ಭಜಕರು, ಹಾಗೂ ವಿವಿಧ ವೃತ್ತಿಪರ ಭಜನಾ ತಂಡಗಳು, ಮತ್ತು ಜನಪ್ರಿಯ ಗಾಯಕರು ಸಾಥಿ ವಾದಕರೆಲ್ಲ ಪಾಲ್ಗೊಂಡು ಶ್ರೀ ದೇವರ ಸಂಕೀರ್ತನ ಮಾಡಿದರು.
ಶ್ರೀ ದೇವರಿಗೆ, ಗ್ರಾಮಸ್ಥರೆಲ್ಲ ಸೇರಿ ಈ ವರ್ಷ ಪ್ರಥಮವಾಗಿ ಚಂಡೆವಾದನ ಸೇವೆಯನ್ನು ಮಾಡಿಸಿದ್ದು ವಿಶೇಷವಾಗಿತ್ತು. ಶ್ರೀ ಮುಖ್ಯಪ್ರಾಣ ಚಂಡೆ ಬಳಗ ಹೊನ್ನಾವರ ದವರಿಂದ ನಡೆದ ಕೇರಳ ಶೈಲಿಯ ಆಕರ್ಷಕ ಚಂಡೆವಾದನ ಎಲ್ಲರ ಗಮನ ಸೆಳೆಯಿತು.

error: