May 6, 2024

Bhavana Tv

Its Your Channel

ಹೊನ್ನಾವರ ತಾಲ್ಲೂಕಿನ ಮಾಗೋಡ ಗ್ರಾಮದ ಅಸಿಕೇರಿ-ಬಜ್ಜಿಕೇರಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ  ನೆರವೇರಿಸಿದ ಸಂಸದ ಅನಂತಕುಮಾರ ಹೆಗಡೆ

ಹೊನ್ನಾವರ ತಾಲ್ಲೂಕಿನ ಮಾಗೋಡ ಗ್ರಾಮದ ಅಸಿಕೇರಿ-ಬಜ್ಜಿಕೇರಿ ಗ್ರಾಮಸ್ಥರ ಬಹು ವರ್ಷದ ಬೇಡಿಕೆಯ ರಸ್ತೆಯ ಭೂಮಿ ಪೂಜೆಯನ್ನು ಸಂಸದ ಅನಂತಕುಮಾರವರು  ನೆರವೇರಿಸಿದರು.

ಭಳ್ಕಳ ಶಾಸಕ ಸುನೀಲ್ ನಾಯ್ಕರವರು  ಗ್ರಾಮ ವಾಸ್ತವ್ಯ ನಡೆಸಿದ ಸಂದರ್ಭದಲ್ಲಿ ಗ್ರಾಮಸ್ತರು ಬೇಡಿಕೆ ಇಟ್ಟಿದ್ದರು, ಅಂದು ಅವರು ಮಂಜೂರು ಮಾಡುವ ಭರವಸೆ ನೀಡಿದ್ದರು.ಅಂದು ನೀಡಿದ ಭರವಸೆಯನ್ನು ರಾಜಕೀಯ ಗುರುಗಳಾದ ಅನಂತಕುಮಾರ ಹೆಗಡೆಯವರ ಮೂಲಕ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ೬ ಕೋಟಿ ೩೫ ಲಕ್ಷದ ಸುಮಾರು ೮ ಕೀಲೋಮೀಟರ ರಸ್ತೆ ಮಂಜೂರಿಮಾಡಿಸಿ ಗ್ರಾಮಸ್ಥರಿಗೆ ಕೊಟ್ಟ ಮಾತನ್ನು ಉಳಿಸಿ ಕೋಂಡು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ,

ಭೂಮಿಪೂಜೆ ಕಾರ್ಯಕ್ರಮಕ್ಕೆ ಮಾಗೋಡ ಗ್ರಾಮಕ್ಕೆ ಆಗಮಿಸಿ ಸಂಸದ ಅನಂತಕುಮಾರ ಹೆಗಡೆಯವರನ್ನು ಮೆರವಣಿಗೆಯ ಮೂಲಕ ಸ್ವಾಗತಿಸಿದರು ನಂತರ ಸಂಸದರು ಭೂಮಿ ಪೂಜೆ ನೆರವೇರಿಸಿದರು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಭಟ್ಕಳ-ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಶಾಸಕ ಸುನೀಲ್ ನಾಯ್ಕ ಮಾತನಾಡಿ ಅಸಿಕೇರಿಯಲ್ಲಿ ಗ್ರಾಮ ವಾಸ್ತವ್ಯಮಾಡಿ ಇಲ್ಲಿನ ಸಮಸ್ಯೆಗಳನ್ನು ಅರಿತಿದ್ದೇನೆ. ಇಂದು ತಾವೆಲ್ಲರು ಸಂತಸ ಪಡುವ ದಿನ. ನಮ್ಮ ಹೆಮ್ಮೆಯ ಸಂಸದರು ನನ್ನ ಮನವಿಗೆ ಸ್ಪಂದಿಸಿ ಕೂಡಲೆ ಈ ಕುಗ್ಗಗ್ರಾಮವನ್ನು ಅಭಿವೃದ್ದಿ ಮಾಡಬೇಕು ಎನ್ನುವ ದೃಷ್ಠಿಯಿಂದ ಇಲ್ಲಿನ ಸಮಸ್ಯೆಗಳನ್ನು ಬಗೆಹರಿಸಿ ಆರುವರೆ ಕೋಟಿ ಅನುದಾನ ನೀಡಿದ್ದಾರೆ. ಈ ಭಾಗದಲ್ಲಿ ಪಂಚಾಯತ ಅನುದಾನ ಬಿಟ್ಟು ಒಂದೆ ಒಂದು ನಯಾ ಪೈಸೆ ಅಭಿವೃದ್ದಿ ಕಂಡಿಲ್ಲವಾಗಿತ್ತು ಈ ರಸ್ತೆ ಮಂಜೂರಿ ಮಾಡಿಸಿಕೊಟ್ಟ ಸಂಸದರಿಗೆ ಗ್ರಾಮಸ್ಥರ ಪರವಾಗಿ ಅಭಿನಂದನೆ ಸಲ್ಲಿಸಿದರು.

ನಂತರ ಮಾತನಾಡಿದ ಸಂಸದ ಅನಂತಕುಮಾರ ಹೆಗಡೆಯವರು ಸಣ್ಣ ಪುಟ್ಟ ಅರಣ್ಯ ಇಲಾಖೆಯ ಸಮಸ್ಯೆಗಳಿದೆ ಅದು ಬಗೆ ಹರಿಸುತ್ತೆನೆ. ಸುಮಾರು ೩೦೦ ಕೋಟಿ ರೂಪಾಯಿಗಳ ಯೋಜನೆ ಗ್ರಾಮೀಣ ಭಾಗದಲ್ಲಿ ನಡೆದಿದೆ, ಈ ಜಿಲ್ಲೆಯಲ್ಲಿ ಒಂದುಕಡೆ ಮೂಲಭೂತ ಸೌಕರ್ಯದ ಅಭಿವೃದ್ದಿ. ಇನ್ನೋಂದು ಕಡೆ ಆರ್ಥಿಕ ಅಭಿವೃದ್ದಿ ಎರಡು ಕೂಡ ಆಗಬೇಕು ಆ ಪ್ರಯತ್ನ ಕೂಡ ಈಗಾಗಲೆ ಪ್ರಾರಂಭವಾಗಿದೆ, ಕರ್ನಾಟಕದ ಅಭಿವೃದ್ದಿಯ ಮತ್ತೋಂದು ಬಾಗಿಲು
ಹೊನ್ನಾವರ ಬಂದರು ಮೂಲಕ ತೆರೆದು ಕೊಳ್ಳುತ್ತಿದೆ. ಬದಲಾವಣೆಯನ್ನು ಜನ ಒಂದೆಸಾರಿ ಒಪ್ಪಿಕೋಳ್ಳುವುದಿಲ್ಲಾ, ಉದ್ಯಮದಿಂದ ಆರ್ಥಿಕ ಅಭಿವೃದ್ದಿ ಬೆಳೆಯಲು ಸಾದ್ಯ, ನಮ್ಮ ದೇಶದಲ್ಲಿ ೧೩೦ ಕೋಟಿ ಜನ, ಇಡಿ ದೇಶ ನಡೆಯುತ್ತಿರುವುದು ಕೇವಲ ಎರಡು ಕೋಟಿ ಜನರಿಂದ ಅವರ ನೀಡುವ ಟ್ಯಾಕ್ಸನಿಂದ ೧೩೦ ಕೋಟಿ ಜನ ಬದುಕುತ್ತಿದ್ದೇವೆ, ಮೊಟ್ಟ ಮೊದಲು ನಾವು ಆರ್ಥಿಕ ಅಭಿವೃದ್ದಿಯ ಕಡೆಗೆ ಹೆಜ್ಜೆ ಇಡುತ್ತಿದ್ದೇವೆ, ಎಲ್ಲಿಯ ವರೆಗೆ ನಾವು ಆರ್ಥಿಕವಾಗಿ ಗಟ್ಟಿಯಾಗುವುದಿಲ್ಲಾ ಅಲ್ಲಿಯ ತನಕ ಸಮಾಜಕ್ಕೆ ಶಕ್ತಿ ಬರುವುದಿಲ್ಲಾ ಎಂದರು. ಹೊನ್ನಾವರದಲ್ಲಿ ಪ್ರಾರಂಭವಾಗುತ್ತಿರುವ ಬಂದರು ಇದು ಪ್ರಾರಂಭ ಅಷ್ಟೆ, ಇನ್ನು ಮುಂದಿನ ದಿನಗಳಲ್ಲಿ ಬೇಲೆಕೇರಿ ತದಡಿ ಕಾರವಾರದಲ್ಲಯು ಆಗುತ್ತೆ ಒಟ್ಟಾರೆ ಇಡಿ ಕರಾವಳಿ ಇದೊಂದು ಅಭಿವೃದ್ದಿಯ ಹೆಬ್ಬಾಗಿಲು ಆಗುತ್ತೆ ಇದು ಇಡಿ ಕರ್ನಾಟಕದ ಅಭಿವೃದ್ದಿಯ ಹೆಬ್ಬಾಗಿಲಾಗುತ್ತೆ, ಇದರ ಲಾಭವನ್ನು ಇಲ್ಲಿರುವವರು ಮಾಡಿಕೋಳ್ಳಬೇಕು ಅದರಲ್ಲಿಯು ಹೊನ್ನಾವರ ತಾಲೂಕಿನ ಜನ ಇದರ ಲಾಭ ಮಾಡಿಕೊಳ್ಳಬೇಕು ಅಲ್ಲಿ ಎನೇಲ್ಲಾ ಅವಕಾಶಗಳಿದೆ ಅದನ್ನು ಬಳಸಿಕೊಳ್ಳಬೇಕು ಅದನ್ನು ಬಳಸಿಕೊಂಡು ಬೆಳಸಿ ನಾವು ಗಟ್ಟಿಯಾಗಬೇಕು,
ನಾವೇನದರೂ ಹಿಂದೆ ಉಳಿದರೆ ಬೇರೆಯ ಪರ ಪಾಲಾಗುತ್ತದೆ, ನೀವು ಯೋಚನೆ ಮಾಡುವ ಮುಂಚೆ ಕೇಲಸ ಮುಗಿದು ಹೋಗಿರುತ್ತೆ, ಅದರ ಲಾಭ ನಮ್ಮ ಜಿಲ್ಲೆಯ ಮಕ್ಕಳು ಮತ್ತು ನಮ್ಮ ಜಿಲ್ಲೆಯ ಜನ ಪಡೆದುಕೋಳ್ಳ ಬೇಕು ಎಂದರು,
ಈ ಸಂದರ್ಭದಲ್ಲಿ ತಹಶಿಲ್ದಾರ ನಾಗರಾಜ ನಾಯ್ಕಡ, ತಾಲೂಕಾ ಪಂಚಾಯತ ಕಾರ್ಯ ನಿರ್ವಣಾಧಿಕಾರಿ ಸುರೇಶ ನಾಯ್ಕ, ಮಾಗೋಡ ಗ್ರಾಮ ಪಂಚಾಯತ ಅಧ್ಯಕ್ಷ ಶಿವರಾಮ ಹೆಗಡೆ, ಬಿಜೆಪಿ ಜಿಲ್ಲಾದ್ಯಕ್ಷ ವೇಂಕಟೇಶ ನಾಯಕ, ತಾಲೂಕಾ ಅಧ್ಯಕ್ಷ ರಾಜೇಶ ಭಂಡಾರಿ, ಮುಖಂಡರುಗಳಾದ ವಿನೋದ ಪ್ರಭು, ಕೃಷ್ಣ ಎಸಳೆ, ಗೋವಿಂದ ನಾಯ್ಕ, ಸುಬ್ರಾಯ ನಾಯ್ಕ, ಸುರೇಶ ಖಾರ್ವಿ, ಸುರೇಶ ಹರಿಕಂತ್ರ, ಅನಂದು ನಾಯ್ಕ, ವಿನೋದ ನಾಯ್ಕ ರಾಯಲಕೇರಿ, ಮಂಜುನಾಥ ನಾಯ್ಕ ಗೇರುಸೋಪ್ಪಾ, ಗಣಪತಿ ನಾಯ್ಕ ಬಿಟಿ, ಪಕ್ಷದ ಮುಕಂಡರು ಕಾರ್ಯಕರ್ತರು, ವಿವಿಧ ಇಲಾಖೆಯ ಅಧಿಕಾರಿಗಳು ಉಪರ್ಸತಿತರಿದ್ದರು.

ವರದಿ: ವೆಂಕಟೇಶ ಮೇಸ್ತ, ಹೊನ್ನಾವರ

error: