May 4, 2024

Bhavana Tv

Its Your Channel

ವಿಶ್ವ ಕ್ಯಾನ್ಸರ್ ದಿನಾಚರಣೆ ಪ್ರಯುಕ್ತ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ

ಹೊನ್ನಾವರ: ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ ಹೊನ್ನಾವರ ಶಾಖೆಯ ಮಹಿಳಾ ಘಟಕದ ವತಿಯಿಂದ ಫೆಬ್ರವರಿ 4 ರಂದು ವಿಶ್ವ ಕ್ಯಾನ್ಸರ್ ದಿನಾಚರಣೆ ಪ್ರಯುಕ್ತ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮವನ್ನು ಹಳದೀಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಲಾಯಿತು.

ಈ ಕಾರ್ಯಕ್ರಮದ ಪ್ರಯೋಜನವನ್ನು ಆಶಾ ಕಾರ್ಯಕರ್ತೆಯರು, ಸಹಾಯಕ ನರ್ಸ್ಗಳು, ಅಂಗನವಾಡಿ ಕಾರ್ಯಕರ್ತೆಯರು, ವಿದ್ಯಾರ್ಥಿನೀಯರು ಹಾಗೂ ಅನೇಕ ಗ್ರಾಮೀಣ ಮಹಿಳೆಯರು ಪಡೆದರು. ಹಿರಿಯ ಸ್ತ್ರೀ ರೋಗತಜ್ಞ ಡಾಕ್ಟರ್ ಕೃಷ್ಣ ಜಿ. ಅವರು ಗರ್ಭಕೋಶ ಕ್ಯಾನ್ಸರ್ ಕುರಿತು ವಿವರಿಸಿದರು. ಡಾಕ್ಟರ್ ವೈಶಾಲಿ ನಾಯ್ಕ ಅವರು ತಂಬಾಕಿನಿAದಾಗುವ ದುಷ್ಟಪರಿಣಾಮಗಳ ಕುರಿತು ಜನಜಾಗೃತಿ ಮೂಡಿಸಿದರು. ಡಾಕ್ಟರ್ ಮಂಜುಳಾ ಯುವರಾಜ್ ಅವರು ಕ್ಯಾನ್ಸರ್ ರೋಗ ಕುರಿತು ಎಚ್ಚರ ವಹಿಸುವ ವಿಧಾನಗಳ ಬಗ್ಗೆ ಉಪನ್ಯಾಸ ನೀಡಿದರು. ಈ ವೇಳೆ ಅಧ್ಯಕ್ಷರಾದ ಡಾಕ್ಟರ್ ವಿಶಾಲ್ ವಿ. ಹಾಗೂ ಡಾಕ್ಟರ್ ಯುವರಾಜ್ ಅವರು ಉಪಸ್ಥಿತರಿದ್ದರು.
ಕಳೆದವಾರ ಸ್ತನ ಕ್ಯಾನ್ಸರ್ ದ ಬಗ್ಗೆ ಅರಿವು ಮೂಡಿಸಲು ಕ್ಯಾನ್ಸರ್ ತಜ್ಞರಾದ ಡಾ. ವಿಶ್ವಾಸ್ ಪೈ ಅವರು ಆರೋಗ್ಯ ಕಾರ್ಯಕರ್ತೆಯವರಿಗೆ ಹಾಗೂ ಹಳ್ಳಿಯ ಜನರಿಗೆ ವ್ಯಾಖ್ಯಾನ ನೀಡಿದರು. ನೂರು ಜನರು ಅದರ ಲಾಭ ಪಡೆದರು. 3 ಮಹಿಳೆಯರ ಎಫ್‌ಎನ್‌ಎಸಿ ಮತ್ತು ಸ್ಕ್ಯಾನಿಂಗ್ ನಲ್ಲಿ ಕ್ಯಾನ್ಸರ್ ಪತ್ತೆ ಆಯಿತು.

error: