May 21, 2024

Bhavana Tv

Its Your Channel

ಕೆರೆಮನೆ ಶಂಭು ಹೆಗಡೆ ಯಕ್ಷಗಾನ ತರಬೇತಿ ಕೇಂದ್ರದ ಆವರಣದಲ್ಲಿ ಸಂಜೀವಿನಿ ಮಾಸಿಕ ಸಂತೆ

ಹೊನ್ನಾವರ ; ತಾಲೂಕಿನ ಗುಣವಂತೆಯ ಕೆರೆಮನೆ ಶಂಭು ಹೆಗಡೆ ಯಕ್ಷಗಾನ ತರಬೇತಿ ಕೇಂದ್ರದ ಆವರಣದಲ್ಲಿ ಸಂಜೀವಿನಿ ಮಾಸಿಕ ಸಂತೆ ನಡೆಯಿತು.

ಕಾರ್ಯಕ್ರಮವನ್ನು ಕೆರೆಮನೆ ಶಿವಾನಂದ ಹೆಗಡೆ ಉದ್ಘಾಟಿಸಿ ಮಾತನಾಡಿ ಗ್ರಾಮೀಣ ಮಹಿಳೆಯರಿಗೆ ವ್ಯಾಪಾರಕ್ಕೆ ಒಂದು ಸುಸಜ್ಜಿತ ಸೂರು ನಿರ್ಮಿಸಿ ಕೊಡಬೇಕು. ಇಂತಹ ಕಾರ್ಯಕ್ರಮಕ್ಕೆ ಶಕ್ತಿ ತುಂಬಬೇಕು. ಮಹಿಳೆಯರು ರಸ್ತೆಯ ಬದಿಯಲ್ಲಿ ಕುಳಿತು ವ್ಯಾಪಾರ ಮಾಡಿ ತನ್ನ ಜೀವನ ನಡೆಸಿಕೊಂಡು ಹೋಗುತ್ತಿದ್ದಾರೆ. ಬಹಳ ಕಷ್ಟಪಟ್ಟು ಬೆಳಿಗ್ಗೆಯಿಂದ ಸಂಜೆ ತನಕ ಬಿಸಿಲಿನಲ್ಲಿ ಕುಳಿತು ಸ್ಥಳೀಯ ತರಕಾರಿ ಜನರಿಗೆ ನೀಡುತ್ತಿದ್ದಾರೆ. ಅನೇಕ ಸಂಸಾರಗಳು ಮಹಿಳೆಯರ ಪರಿಶ್ರದಲ್ಲೆ ನಡೆಯುತ್ತಿದೆ. ತನ್ನ ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸ ಹೀಗೆ ಅನೇಕ ಜವಾಬ್ದಾರಿ ಹೊತ್ತು, ಕಷ್ಟಪಟ್ಟು ಜೀವನ ಸಾಗಿಸುತ್ತಾರೆ. ಜನರು ದೊಡ್ಡ ಅಂಗಡಿಯಲ್ಲಿ ಚೌಕಾಸಿ ಮಾಡೋದಿಲ್ಲ ಇಂತಹ ವ್ಯಾಪಾರಸ್ಥರಲ್ಲಿ ಚೌಕಾಸಿ ಮಾಡುತ್ತಾರೆ. ಇಂತಹ ಶ್ರಮ ಜೀವಿಗಳಿಗೆ ನಾವು ಸಹಕಾರ ನೀಡಬೇಕು, ಸರಕಾರ ಇಂತಹ ಕಾರ್ಯಕ್ರಮ ಆಯೋಜನೆ ಮಾಡಿ ಉತ್ತಮ ಕೆಲಸ ಮಾಡಿದೆ ಎಂದರು.

ತಾ. ಪಂ. ಇಒ ಸುರೇಶ ನಾಯ್ಕ ಮಾತನಾಡಿ ತಾಲೂಕಿನಲ್ಲಿ ಹಲವು ಮಹಿಳಾ ಒಕ್ಕೂಟಗಳಿದ್ದು, ಸಂಜೀವಿನಿ ಮಾಸಿಕ ಸಂತೆ ಎರಡನೇ ಕಾರ್ಯಕ್ರಮ ಇದಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಪ್ರಥಮವಾಗಿ ಕೆಳಗಿನೂರು ಗ್ರಾಮ ಪಂಚಾಯತದ ಗುಣವಂತೆಯಲ್ಲಿ ಆಯೋಜನೆಗೊಂಡಿದೆ. ಇದು ಇಷ್ಟಕ್ಕೆ ನಿಲ್ಲುವುದಿಲ್ಲ ಇನ್ನೂ ಕೂಡ ಉಳಿದ ಗ್ರಾಮ ಪಂಚಾಯತದಲ್ಲಿ ಇಂತಹ ಸಂತೆ ಕಾರ್ಯಕ್ರಮ ಮಾಡುವ ಪ್ರಯತ್ನ ಮಾಡುತ್ತೇವೆ ಎಂದರು.

ತಾಲೂಕಿನ ವಿವಿಧ ಕಡೆಯಿಂದ ಬಂದ ಮಹಿಳಾ ಸ್ವಸಾಯ ಸಂಘದ ಸದಸ್ಯರು ತಾವು ತಯಾರಿಸಿದ ಅನೇಕ ವಸ್ತುಗಳನ್ನು ವ್ಯಾಪಾರಕ್ಕೆ ತಂದಿದ್ದರು. ಸ್ಥಳೀಯ ಸಾರ್ವಜನಿಕರು, ಮಹಿಳೆಯರು ವಸ್ತುಗಳನ್ನು ಖರೀದಿಸಿದರು.

ಮಹಿಳಾ ಪ್ರತಿನಿಧಿ ತನ್ನ ಅನಿಸಿಕೆ ಹಂಚಿಕೊoಡರು.ಈ ಸಂದರ್ಭದಲ್ಲಿ ಶಾಕ್ಷರತ ಸಂಯೋಜಕಿ ಸಾಧನಾ ಬರ್ಗಿ, ಗ್ರಾಮ ಪಂಚಾಯತ ಅಧ್ಯಕ್ಷ ಗಂಗಾಧರ ಗೌಡ ಗ್ರಾಮ ಪಂಚಾಯತ ಸದಸ್ಯ ಅಣ್ಣಪ್ಪ ಗೌಡ, ಪಿಡಿಒ ಅಣ್ಣಪ್ಪ ಮುಕ್ರಿ, ತಾ. ಪಂ. ನ ಬಾಲಚಂದ್ರ, ವಿಶಾಲ್, ಮಹಿಳಾ ಒಕ್ಕೂಟದ ಅನಿತಾ ಹೆಗಡೆ ಸಾಲ್ಕೋಡ, ಅಶ್ವಿನಿ ಹರಿಕಾಂತ್ ಮಂಕಿ ಉಪಸ್ಥಿತರಿದ್ದರು.

error: