May 19, 2024

Bhavana Tv

Its Your Channel

ನ್ಯೂ ಇಂಗ್ಲೀಷ ಸ್ಕೂಲ್ ಪೂರ್ವ ವಿದ್ಯಾರ್ಥಿಗಳಿಂದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಹೊನ್ನಾವರದ ನ್ಯೂ ಎಜುಕೇಶನ್ ಸೊಸೈಟಿ ಮತ್ತು ನ್ಯೂ ಇಂಗ್ಲೀಷ ಸ್ಕೂಲ್ ಪೂರ್ವ ವಿದ್ಯಾಥಿ೯ಗಳ ಸಂಘ ಇದರ ಸಂಯುಕ್ತ ಆಶ್ರಯದಲ್ಲಿ ಶಾಲಾ ಸಂಸ್ಥಾಪನಾ ದಿನಾಚರಣೆ ಹಾಗೂ ೨೦೨೧-೨೨ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭ ಶಾಲೆಯ ಸಭಾಭವನದಲ್ಲಿ ನಡೆಯಿತು.

 ರಾಜ್ಯಮಟ್ಟದಲ್ಲಿ ನಾಲ್ಕು  ರ‍್ಯಾಂಕ್ ಗಳಿಸಿದ  ಹಾಗೂ ಉತ್ತಮ ಫಲಿತಾಂಶ ಪಡೆದ ಕನ್ನಡ ಹಾಗೂ ಇಂಗ್ಲೀಷ ಮಾದ್ಯಮದ ಟಾಪ್ ಟೆನ್ ವಿದ್ಯಾಥಿ೯ಗಳನ್ನು  ಅಭಿನಂದಿಸಿ ಮಾತನಾಡಿದ ಖ್ಯಾತ ವೈದ್ಯ ಶಿಕ್ಷಣ ಪ್ರೇಮಿ ಡಾ,ಜಿ,ಜಿ ಹೆಗಡೆ ಕುಮಟಾ ಇವರು  ಶಾಲಾಭಿವೃದ್ದಿ ಸಮಿತಿ,ವಿದ್ಯಾಥಿ೯ಗಳು ಹಾಗೂ ಪಾಲಕರು ಉತ್ತಮ ಭಾಂದವ್ಯ ಹೊಂದಿದರೆ ಮಾತ್ರ ಇಂತಹ ಉತ್ತಮ ಫಲಿತಾಂಶವನ್ನು ನೀರೀಕ್ಷಿಸಬಹುದು, ನ್ಯೂ ಇಂಗ್ಲೀಷ  ಶಾಲೆಯ ಆಡಳಿತ ಮಂಡಳಿ  ವಿದ್ಯಾರ್ಥಿಗಳ  ಅಭ್ಯುದಯಕ್ಕಾಗಿ ಉತ್ತಮವಾದ ಕೆಲಸ ಮಾಡುತ್ತಿದೆ ಎಂದು ಅಭಿನಂದನೆ ವ್ಯಕ್ತ ಪಡಿಸಿದರು.
       ಮುಖ್ಯ ಅತಿಥಿಯಾಗಿ ಆಗಮಿಸಿದ   ಕ್ಷೇತ್ರ ಶಿಕ್ಷಣಾಧಿಕಾರಿ  ಎಸ್ ಎಂ ಹೆಗಡೆಯವರು  ಮಾತನಾಡಿ  ಕಳೆದ ೧೫ ವಷ೯ಗಳಿಂದ  ನ್ಯೂ ಇಂಗ್ಲೀಷ  ಶಾಲೆ  ಎಸ್ ಎಸ್ ಎಲ್ ಸಿಯಲ್ಲಿ ಉತ್ತಮ ಸಾಧನೆ ಮಾಡುತ್ತಿದೆ. ಇಲ್ಲಿ ವಿದ್ಯಾಭ್ಯಾಸ  ಮಾಡಿದ ವಿದ್ಯಾಥಿ೯ಗಳು  ದೇಶ ವಿದೇಶಗಳಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ ಎಂದು ಅಭಿನಂದನೆ ವ್ಯಕ್ತ ಪಡಿಸಿದರು.
ನ್ಯೂ ಎಜುಕೇಶನ್ ಸೊಸೈಟಿಯ ಅಧ್ಯಕ್ಷ  ರಘುನಾಥ ಪೈ,  ಖ್ಯಾತ ವೈದ್ಯರಾದ  ಡಾ  ಪ್ರಮೋದ ಪಾಯ್ದೆ ಈ ಸಂದಭ೯ದಲ್ಲಿ ಮಾತನಾಡಿದರು. 

ವೇದಿಕೆಯಲ್ಲಿ ಪೂರ್ವ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ನಾಗರಾಜ ಕಾಮತ, ಕನ್ನಡ ಹಾಗೂ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕರಾದ ಕಮಲಾ ನಾಯ್ಕ, ಜಯಂತ ನಾಯ್ಕ ಮುಂತಾದವರು ಉಪಸ್ಥಿತರಿದರು.
ಕಾರ್ಯಕ್ರಮಕ್ಕೆ ಶಾಲೆಯ ನಿಕಟಪೂವ೯ ಅಧ್ಯಕ್ಷ ಜೆ ಟಿ ಪೈ, ಪಟ್ಟಣ ಪಂಚಾಯತ ಸದಸ್ಯರಾದ ಉದಯ ಪ್ರಭು ಮುಂತಾದವರು ಉಪಸ್ಥಿತರಿದ್ದರು…
ವಿವಿಧ ಸಾಧನೆಗಳನ್ನು ಮಾಡಿದ ಶಾಲಾ ವಿದ್ಯಾರ್ಥಿಗಳನ್ನು ಈ ಸಂದಭ೯ದಲ್ಲಿ ಸನ್ಮಾನಿಸಲಾಯಿತು.

ವರದಿ:ವೆಂಕಟೇಶ ಮೆಸ್ತ ಹೊನ್ನಾವರ

error: