May 4, 2024

Bhavana Tv

Its Your Channel

ಬಂಗಾರಮಕ್ಕಿ ಶ್ರೀ ಮಾರುತಿ ವಸತಿ ಶಾಲೆಗೆ ಸಿ.ಬಿ.ಎಸ್.ಇ. ಯಿಂದ ಸೀನಿಯರ್ ಸೆಕೆಂಡರಿ ಲೆವೆಲ್‌ಗೆ ಮಾನ್ಯತೆ.

ಹೊನ್ನಾವರ ; ಶ್ರೀ ಮಾರುತಿ ವಸತಿ ಶಾಲೆಗೆ ಸಿ.ಬಿ.ಎಸ್.ಇ. ಯಿಂದ ಸೀನಿಯರ್ ಸೆಕೆಂಡರಿ ಲೆವೆಲ್‌ಗೆ ಮಾನ್ಯತೆ ದೊರಕಿದ್ದು ೨೦೨೩-೨೪ ನೇ ಶೈಕ್ಷಣಿಕ ವರ್ಷದಿಂದ ನೂತನ ಶಿಕ್ಷಣ ನೀತಿಯ ಅನುಸಾರ ವಿಜ್ಞಾನ, ಕಲಾ ಹಾಗೂ ಕಾಮರ್ಸ್ ಈ ಮೂರೂ ವಿಭಾಗಗಳಿಗೆ ೧೦ನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿಗಳು ಪ್ರವೇಶವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶ್ರೀಕ್ಷೇತ್ರ ಬಂಗಾರಮಕ್ಕಿಯ ವತಿಯಿಂದ ಶ್ರೀ ಮಾರುತಿ ವಸತಿ ಶಾಲೆಯನ್ನು ಸಿ.ಬಿ.ಎಸ್.ಇ. ಮಾದರಿ, 1ನೇ ತರಗತಿಯಿಂದ 10ನೇ ತರಗತಿಯವರೆಗೆ ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರಲಾಗುತ್ತಿದೆ. ಯಾವುದೇ ರೀತಿಯ ಡೊನೇಶನ್ ಇಲ್ಲದೇ ಕಳೆದ ಹತ್ತು ವರ್ಷಗಳಿಂದ ಕಾರ್ಯನಿರ್ವಹಿಸುತ್ತಾ ಇದ್ದು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬಂದಿದೆ. ಕೇವಲ ಹೊನ್ನಾವರ ತಾಲೂಕಿನ ವಿದ್ಯಾರ್ಥಿಗಳು ಮಾತ್ರವಲ್ಲದೆ, ಜಿಲ್ಲೆಯ ಹಾಗೂ ರಾಜ್ಯದ ಬೇರೆ ಬೇರೆ ಭಾಗಗಳ ವಿದ್ಯಾರ್ಥಿಗಳು ಇಲ್ಲಿ ಅಭ್ಯಸಿಸುತ್ತಿದ್ದಾರೆ.

ಇದೀಗ ಈ ಶಾಲೆಗೆ ಸಿ.ಬಿ.ಎಸ್.ಇ. ಯಿಂದ ಸೀನಿಯರ್ ಸೆಕೆಂಡರಿ ಲೆವೆಲ್‌ಗೆ 11 ಮತ್ತು 12ನೇ ತರಗತಿ ಮಾನ್ಯತೆ ದೊರಕಿದ್ದು 2023-24 ನೇ ಶೈಕ್ಷಣಿಕ ವರ್ಷದಿಂದ ನೂತನ ಶಿಕ್ಷಣ ನೀತಿಯ ಅನುಸಾರ ವಿಜ್ಞಾನ, ಕಲಾ ಹಾಗೂ ಕಾಮರ್ಸ್ ಈ ಮೂರೂ ವಿಭಾಗಗಳಿಗೆ 10ನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿಗಳು ಪ್ರವೇಶವನ್ನು ಪಡೆದುಕೊಳ್ಳಬಹುದಾಗಿದೆ.
ಇದೇ ಮೊದಲ ಬಾರಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಸಂಸ್ಥೆಯೊAದಕ್ಕೆ ಸಿ.ಬಿ.ಎಸ್.ಇ. ಮಾದರಿಯಲ್ಲಿ 11 ಮತ್ತು 12ನೇ ತರಗತಿಗಳನ್ನು ನಡೆಸಲು ಮಾನ್ಯತೆ ದೊರಕಿರುವುದು ಇಡೀ ಜಿಲ್ಲೆಗೆ ಅತ್ಯಂತ ಹೆಮ್ಮೆಯ ಹಾಗೂ ಅಭಿಮಾನದ ಸಂಗತಿಯಾಗಿದೆ. ಜಿಲ್ಲೆಯ ವಿದ್ಯಾರ್ಥಿಗಳಿಗೆ ತಮ್ಮದೇ ಜಿಲ್ಲೆಯಲ್ಲಿ ಸಿ.ಬಿ.ಎಸ್.ಇ. ಮಾದರಿಯಲ್ಲಿ 11 ಮತ್ತು 12ನೇ ತರಗತಿಗಳನ್ನು ಕಲಿಯಲು ಸದಾವಕಾಶ ದೊರೆತಂತಾಗಿದ್ದು ಪಾಲಕರು ಹಾಗೂ ವಿದ್ಯಾರ್ಥಿಗಳು ಹೆಚ್ಚನ ಸಂಖ್ಯೆಯಲ್ಲಿ ಸದುಪಯೋಗ ಪಡೆದುಕೊಳ್ಳಬೇಕೆಂದು ಶಾಲಾ ಆಡಳಿತ ಮಂಡಳಿ ಪ್ರಕಟಿಸಿದೆ. ಬಾಲಕ ಹಾಗೂ ಬಾಲಕಿಯರಿಗಾಗಿ ಪ್ರತ್ಯೇಕ ಹಾಸ್ಟೆಲ್ ಸೌಲಭ್ಯ ಕೂಡ ಲಭ್ಯವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ: 6361019456.

error: