May 18, 2024

Bhavana Tv

Its Your Channel

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬೀಜ ಬಿತ್ತನೆ ಅಭಿಯಾನ

ಹೊನ್ನಾವರ: ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಅರಣ್ಯ ಇಲಾಖೆ ಹೊನ್ನಾವರ-ಕುಮಟಾ ವಿಭಾಗ, ಕುಮಟಾ ವಲಯ, ಸಾಂತಗಲ್ ವಿಭಾಗದ ಕಡ್ನೀರು ಅರಣ್ಯ ಪ್ರದೇಶದಲ್ಲಿ 2022ನೇ ಮಳೆಗಾಲದ ಬೀಜ ಬಿತ್ತನೆ ಅಭಿಯಾನ ಕಾರ್ಯಕ್ರಮ ಮಂಗಳವಾರ ನಡೆಯಿತು. ಕಡ್ನೀರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಬೀಜ ಬಿತ್ತನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಉಪವಲಯ ಅರಣ್ಯಾಧಿಕಾರಿ ರಾಜೇಶ ಕೊಚರೇಕರ್ ಮಾತನಾಡಿ ನಮ್ಮ ಸುತ್ತಮುತ್ತಲಿನ ಅರಣ್ಯ ಪ್ರದೇಶವನ್ನು ವೃದ್ಧಿಸುವ ಮೂಲಕ ಪರಿಸರ ಸಂರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು.
ಪರಿಸರ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದ್ದು ಭವಿಷ್ಯದ ದೃಷ್ಟಿಯಿಂದ ಅರಣ್ಯ ಸಂರಕ್ಷಣೆಗಾಗಿ ಎಲ್ಲರೂ ಪಣತೊಡಬೇಕು. ಜೀವ ವೈವಿಧ್ಯ, ಜಲಮೂಲಗಳನ್ನು ಸಂರಕ್ಷಿಸುವ ಮೂಲಕ ಸುಂದರ ಪ್ರಕೃತಿ ತಾಣವಾದ ಸಾಂತಗಲ್, ಕಡ್ನೀರು ಭಾಗದಲ್ಲಿನ ಅರಣ್ಯ, ಪರಿಸರ, ಜೀವ ವೈವಿಧ್ಯ ಸಂರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು ಎಂದರು.

ಇದೇ ವೇಳೆ ವಿವಿಧ ಜಾತಿಯ ಬೀಜಗಳನ್ನು ಜನರಿಗೆ ಪರಿಚಯಿಸಿದರು. ಬೀಜಗಳು ನಾಶವಾಗದಂತೆ ಮೊಳಕೆಯೊಡೆಯಲು ಪೂರಕ ವಾತಾವರಣ ಸೃಷ್ಟಿಯಾಗುವ ವರೆಗೆ ಪೋಷಕಾಂಶಯುಕ್ತ ಮಣ್ಣಿನ ಉಂಡೆಗಳ ಮೂಲಕ ರಕ್ಷಿಸಿಡುವ ವಿಧಾನವನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಶಾಲಾ ಮುಖ್ಯಾಧ್ಯಾಪಕಿ ಶಾರದಾ ಶರ್ಮಾ, ಶಿಕ್ಷಕರಾದ ಜ್ಯೋತಿ ಶೇಟ್, ಎಚ್.ಎನ್.ನಾಯ್ಕ, ಭಾರತಿ ನಾಯ್ಕ, ಅರಣ್ಯ ಸಮಿತಿ ಅಧ್ಯಕ್ಷ ಸುರೇಶ ಪ್ರಭು, ಮಾಜಿ ಗ್ರಾಪಂ ಸದಸ್ಯ ತಿಮ್ಮಪ್ಪ ನಾಯ್ಕ, ಗೋದಾವರಿ ನಾಯ್ಕ, ಉಲ್ಲಾಸ ಕಾಮತ್, ಅರಣ್ಯ ರಕ್ಷಕರಾದ ಕನಕಪ್ಪ ತಳವಾರ್, ಮಹೇಶ ಗೌಡ, ಅರಣ್ಯ ವೀಕ್ಷಕರು ಹಾಗೂ ಸಾರ್ವಜನಿಕರು, ಎಸ್.ಡಿ.ಎಂ.ಸಿ ಸದಸ್ಯರು ಪಾಲ್ಗೊಂಡಿದ್ದರು.

error: