May 19, 2024

Bhavana Tv

Its Your Channel

ಕವಲಕ್ಕಿ ಹತ್ತಿರದ ನಿರ್ವತ್ತಿಕೊಡ್ಲ ಶಾಲೆಯ ಹಿಂದುಗಡೆ ಇರುವ ಗ್ರೌಂಡಿನಲ್ಲಿ ಪ್ರತಿದಿನ ಕುಡುಕರ ಹಾವಳಿ ಹೆಚ್ಚುತ್ತಿದ್ದ ಬಗ್ಗೆ ಸ್ಥಳೀಯರ ಆತಂಕ.

ಹೊನ್ನಾವರ ತಾಲೂಕಿನ ಕವಲಕ್ಕಿ ಹತ್ತಿರದ ನಿರ್ವತ್ತಿಕೊಡ್ಲ ಶಾಲೆಯ ಹಿಂದುಗಡೆ ಇರುವ ಗ್ರೌಂಡಿನಲ್ಲಿ ಪ್ರತಿದಿನ ಕುಡುಕರ ಹಾವಳಿ ಹೆಚ್ಚುತ್ತಿದ್ದ ಬಗ್ಗೆ ಸ್ಥಳೀಯರ ಆತಂಕ ವ್ಯಕ್ತಪಡಿಸಿದ್ದಾರೆ

ಪ್ರತಿ ದಿನ ಹಗಲು ರಾತ್ರಿಯೆನ್ನದೆ ಎಲ್ಲಿಎಲ್ಲಿಂದಲೋ ಬಂದು ಗುಂಪು ಕಟ್ಟಿ ಮದ್ಯ ಸೇವನೆ ಮಾಡುತ್ತಿರುತ್ತಾರೆ. ಗ್ರೌಂಡಿನ ಸುತ್ತ ಇರುವ ಗಿಡಗಳ ಮಧ್ಯ, ಬಂಡೆ ಕಲ್ಲುಗಳ ಮೇಲೆ ಕುಳಿತು ಮೋಜು ಮಸ್ತಿ ಮಾಡಿ ಕಾಲಹರಣ ಮಾಡುತ್ತಿರುತ್ತಾರೆ. ಪ್ರತಿ ದಿನ ಸಂಜೆಯಾದ ಮೇಲ0ತು ಗುಂಪು ಗುಂಪೆ ಸೇರುತ್ತಾರೆ. ಕನಿಷ್ಠ ಅಂದರು ನೂರಾರು ಮಂದಿ ಬಂದು ಮದ್ಯ ಸೇವನೆ ಮಾಡುವುದರಿಂದ ಬಾಟಲಿ ಇನ್ನಿತರ ವೇಸ್ಟ್ ಗಳಿಂದ ಅಲ್ಲಿಯ ಪ್ರದೇಶ ಕಸದ ತೊಟ್ಟಿಯಂತಾಗಿದೆ.

ವೈನ್ ಶಾಪ್ ಗಳಲ್ಲಿ ಕುಳಿತು ಕುಡಿಯುವುದು ಬಿಟ್ಟು ಪಾರ್ಸಲ್ ಪದ್ಧತಿ ಅಳವಡಿಸಿಕೊಂಡು ಗುಡ್ಡ ಬೆಟ್ಟ ಅರಸುವ ಇವರಂತವರಿiದ ಗುಡ್ಡ ಬೆಟ್ಟದ ಕಲುಸಿತಗೊಂಡು ಅದರ ಅಂದವು ಹಾಳು ಗೇಡವುತ್ತಿದೆ. ಅಲ್ಲಿ ತಿರುಗಾಡುವವರು ಭಯ ಪಡುವಂತಾಗುತ್ತಿದೆ.
ಕುಡಿದು ಮಜಾಮಾಡಿ ಖಾಲಿ ಬಾಟಲಿ ಅಲ್ಲೆ ಬಿಸಾಡಿ ಹೋಗುತ್ತಿದ್ದು, ಖಾಲಿ ಬಾಟಲಿಯ ರಾಶಿಯೇ ಬಿದ್ದುಕೊಂಡಿದೆ. ಇನ್ನೂ ಸರಾಯಿ ಜೊತೆಗೆ ಊಟ ತಿಂಡಿಯ ಪ್ಲೇಟ್ ಮತ್ತು ವೇಸ್ಟ್ ಗಳು ನೀರಿನ ಮತ್ತು ಸೋಡಾ ಬಾಟಲಿಯನ್ನು ಅಲ್ಲೆ ಬಿಸಾಕಿ ಹೋಗುತ್ತಿದ್ದಾರೆ.
ನಿರ್ವತ್ತಿಕೊಡ್ಲ ಶಾಲೆ ಹಿಂದುಗಡೆಯ ಮಾರ್ಗದಲ್ಲಿ ಅನೇಕ ಮನೆಗಳಿದ್ದು ಅಲ್ಲಿಯ ಮಹಿಳೆಯರು ಈ ಮಾರ್ಗದಲ್ಲಿ ಬರಲು ಭಯ ಪಡುತ್ತಿದ್ದಾರೆ. ಹತ್ತಿರ ಶಾಲೆಗೆ ತಮ್ಮ ಮಕ್ಕಳನ್ನು ಬಿಡಲು ಮತ್ತು ಕವಲಕ್ಕಿಗೆ ಹೋಗಲು ಈ ಕುಡುಕರ ಉಪಟಳದಿಂದ ಭಯ ಉಂಟಾಗುತ್ತಿದೆ ಎಂದು ಹೇಳುತ್ತಾರೆ. ಕಾಲೇಜಿಗೆ ಹೋದ ವಿದ್ಯಾರ್ಥಿನಿಯರು, ಕೆಲಸಕ್ಕೆ ಹೋಗುವ ಮಹಿಳೆಯರು ಈ ಮಾರ್ಗದಾಟುವಾಗ ಕುಟುಂಬ ಸದಸ್ಯರಿಗೆ ಫೋನ್ ಮಾಡಿ ಕರೆದು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವರು ಒಬ್ಬರೇ ಬರದೇ ಗಂಡನನ್ನು, ತಂದೆಯನ್ನು ಕರೆದು ಮನೆಗೆ ಸೇರುತ್ತಿದ್ದಾರೆ.


ನಿರ್ವತ್ತಿಕೊಡ್ಲ ಶಾಲೆ ಹಿಂದುಗಡೆಯ ಮಾರ್ಗದಲ್ಲಿ ಅನೇಕ ಮನೆಗಳಿದ್ದು ಹಲವು ವರ್ಷಗಳಿಂದ ಯಾವ ಭಯವು ಇಲ್ಲದೇ ಓಡಾಡಿಕೊಂಡಿದ್ದೇವೆ. ಇತ್ತೀಚಿಗೆ ಇಲ್ಲಿರುವ ಗ್ರೌಂಡಿನ ಸುತ್ತ ಮದ್ಯ ಸೇವನೆ ಮಾಡುವವರ ಹಾವಳಿ ಹೆಚ್ಚುತ್ತಿರುವುದರಿಂದ ಮಹಿಳೆಯರು ಓಡಾಡಲು ಭಯ ಪಡುತ್ತಿದ್ದಾರೆ. ಪ್ರತಿ ದಿನ ರಾತ್ರಿ ಹಗಲು ಎನ್ನದೆ ಗುಂಪು ಸೇರಿತ್ತಿರುವುದರಿಂದ ಆತಂಕಕ್ಕೆ ಕಾರಣವಾಗಿದ ಗ್ರಾಮೀಣ ಪ್ರದೇಶದ ಹೆಚ್ಚಿನ ಅಂಗಡಿಗಳಲ್ಲಿ ಅಕ್ರಮ ಸರಾಯಿ ವ್ಯಾಪಾರ ಜೋರಾಗೆ ನಡೆಯುತ್ತಿದೆ. ವೈನ್ ಶಾಪ್ ಗಳಿಂದ ತಂದು ದುಬಾರಿದರಲ್ಲಿ ವ್ಯಾಪಾರ ಮಾಡಿ ದೊಡ್ಡ ಮಟ್ಟದ ಅಕ್ರಮ ಉದ್ಯಮವನ್ನಾಗಿ ಮಾಡಿಕೊಂಡಿದ್ದಾರೆ.

ಹಳ್ಳಿಯ ಅಂಗಡಿಯಲ್ಲಿ ಸರಾಯಿ ವ್ಯಾಪಾರ ಮಾಡುವ ವ್ಯಾಪಾರಸ್ಥರು ವೈನ್ ಶಾಪ್ ಗಿಂತ ಹೆಚ್ಚು ವ್ಯವಹಾರ ನಡೆಸುತ್ತಿದ್ದಾರೆ. ಯಾರ ಭಯವು ಇಲ್ಲದೇ ಬಿಂದಾಸಾಗಿ ದಂಧೆ ನಡೆಸುತ್ತಾರೆ. ಉಳಿದೆಲ್ಲ ವ್ಯಾಪಾರಸ್ಥರ ಅಂಗಡಿಕ್ಕಿAತ ಇವರ ಅಂಗಡಿಯಲ್ಲೇ ಗ್ರಾಹಕರು ತುಂಬಿಕೊAಡಿರುತ್ತಾರೆ.

ಅಕ್ರಮ ಸರಾಯಿ ವ್ಯಾಪಾರದಲ್ಲಿ ಸ್ಥಿತಿವಂತರು ಹೆಚ್ಚಾಗಿದೆ, ಪ್ರಭಾವ ಇದ್ದವರೆ ಈ ದಂಧೆಯಲ್ಲಿ ತೊಡಗಿಕೊಂಡಿದ್ದಾರೆ. ರಸ್ತೆಗೆ ಹೊಂದಿಕೊAಡಿರುವ ಗ್ರಾಮ ಪಂಚಾಯತ ಮಟ್ಟದ ಬಿಳಿ ಅಂಗಿಯ ರಾಜಕೀಯ ಮುಖಂಡರು ಹಗಲು ರಾತ್ರಿ ಬಿಂದಾಸ್ ವ್ಯಾಪಾರ ಮಾಡಿ ತನ್ನ ಕೋಟೆ ಕಟ್ಟುಕೊಳ್ಳುತ್ತಿದ್ದರು ಅಧಿಕಾರಿಗಳು ಕಂಡು ಕಾಣದಂತೆ ಇದ್ದಾರೆ.

ಗೇರು ಹಣ್ಣಿನ ಸರಾಯಿ ಪ್ಯಾಕೆಟ್ ಸುದ್ದಿ ಪ್ರಕಟಗೊಂಡ ನಂತರ ಮತ್ತಿಷ್ಟು ಮಾಹಿತಿ ಮಾದ್ಯಮಕ್ಕೆ ಲಭ್ಯವಾಗಿದ್ದು. ಬೆಲ್ಲದ ಕೊಳೆಯಿಂದ ತೆಗೆದ ಕಳ್ಳಬಟ್ಟಿ ಸರಾಯಿ ವ್ಯಾಪಕವಾಗಿದೆ ಎನ್ನುವ ಆತಂಕಕಾರಿ ವಿಷಯ ತಿಳಿದು ಬಂದಿದೆ.

ಬೆಲ್ಲದ ಕೊಳೆ ಬಳಸಿ ಸರಾಯಿ ತಯಾರಿ ಮಾಡಲಾಗುತ್ತಿರುವ ದಂದೆಯಲ್ಲಿ ಬೆರಳು ಎಣಿಕೆಯಷ್ಟು ಜನರಿದ್ದು ಅವರೇ ಕೆಲವೊಂದು ಕಡೆ ಮಾರುಕಟ್ಟೆ ವಿಸ್ತರಣೆ ಮಾಡಿದ್ದಾರೆ ಎನ್ನುತ್ತಾರೆ. ಕೆಲವರು ಒಂದು ವಾರಕ್ಕೆ 25 ರಿಂದ ಮೊವತ್ತು ಸಾವಿರ ವ್ಯವಹಾರ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
ವರದಿ:-ವೆಂಕಟೇಶ ಮೇಸ್ತ, ಹೊನ್ನಾವರ

error: