May 19, 2024

Bhavana Tv

Its Your Channel

ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಧನ ಸಹಾಯ

ಹೊನ್ನಾವರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ಪೂಜ್ಯಶ್ರೀ ಡಾ. ವೀರೇಂದ್ರ ಹೆಗ್ಗಡೆಯವರು ಹಾಗೂ ಡಾಕ್ಟರ್ ಹೇಮಾವತಿ ವಿ ಹೆಗಡೆಯವರ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ
ಧನ ಸಹಾಯ

ಡಾ. ವೀರೇಂದ್ರ ಹೆಗ್ಗಡೆಯವರು ಹಾಗೂ ಡಾಕ್ಟರ್ ಹೇಮಾವತಿ ವಿ ಹೆಗಡೆಯವರ ವಾತ್ಸಲ್ಯ ಕಾರ್ಯಕ್ರಮದಡಿ ಸಮಾಜದ ನಿರ್ಗತಿಕ ಕುಟುಂಬಗಳಿಗೆ ಸಹಾಯಧನವನ್ನು ಪ್ರತಿ ತಿಂಗಳು ರೂಪಾಯಿ ಒಂದು ಸಾವಿರದಂತೆ ನೀಡುತ್ತಿದ್ದಾರೆ. ಅದೇ ಪ್ರಕಾರವಾಗಿ ಮಂಕಿ ವಲಯದ ನೀಲಾ ಸೋಮಯ್ಯ ನಾಯ್ಕ್ ಇವರ ಮಗನಾದ ಗೋವಿಂದ್ ಇವರು ಎರಡು ಕಾಲುಗಳಿಲ್ಲದೆ ನಡೆದಾಡಲು ಅಶಕ್ತರಾಗಿದ್ದು ಅವರ ತಾಯಿ ನೀಲಾರವರಿಗೆ 72 ವರ್ಷ ವಯಸ್ಸಾಗಿದ್ದು ದುಡಿಯಲು ಕೂಡ ಸಾಧ್ಯವಾಗುತ್ತಿಲ್ಲ. ಇವರ ಜೀವನ ನಿರ್ವಹಣೆಗೋಸ್ಕರ ಪೂಜ್ಯರು ಪ್ರತಿ ತಿಂಗಳು ರೂಪಾಯಿ 750 ಸಹಾಯಧನವನ್ನು ಮಂಜೂರು ಮಾಡಿದ್ದಾರೆ. ಅದೇ ರೀತಿ ಮಂಕಿ ದೇವರ ಗದ್ದೆಯ ಲಕ್ಷ್ಮಿ ಕಾರ್ವಿ 7ನೇ ತರಗತಿ ಓದುತ್ತಿರುವಾಗ ಬಿದ್ದು ಕಾಲಿನ ಸ್ವಾಧೀನವನ್ನು ಕಳೆದುಕೊಂಡಿರುತ್ತಾರೆ ಇವರ ತಾಯಿಗೆ 60 ವರ್ಷ ಮೇಲ್ಪಟ್ಟಿದ್ದು ಹಾಗಾಗಿ ಇವರ ಜೀವನ ನಿರ್ವಹಣೆಗೆ ಪ್ರತಿ ತಿಂಗಳು ರೂಪಾಯಿ 1000/- ಸಹಾಯಧನವನ್ನು ಮಂಜೂರು ಮಾಡಿರುತ್ತಾರೆ. ಈ ಎರಡು ಕುಟುಂಬಗಳಿಗೆ ಕ್ಷೇತ್ರದಿಂದ ಮಂಜೂರಾದ ಸಹಾಯಧನವನ್ನು ವಿಪತ್ತು ನಿರ್ವಹಣಾ ಘಟಕದ ಸಂಯೋಜಕರಾದ ಸ್ಥಳೀಯರಾದ ಶ್ರೀ ಮಂಜುನಾಥ ರವರು ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಮಂಕಿ ವಲಯದ ಮೇಲ್ವಿಚಾರಕರಾದ ಅಶೋಕ್ ಗೌಡ ಇವರು ಉಪಸ್ಥಿತರಿದ್ದರು ಜ್ಞಾನವಿಕಾಸ ಸಮನ್ವಯಧಿಕಾರಿ ವಿನೋದಾ ಬಾಲಚಂದ್ರ ಹಾಗೂ ಸೇವಾ ಪ್ರತಿನಿಧಿ ಆಶಾ ಮತ್ತು ರೇಣುಕಾರವರು ಉಪಸ್ಥಿತರಿದ್ದರು.

error: