May 4, 2024

Bhavana Tv

Its Your Channel

ಚಂದಾವರ ಗ್ರಾ.ಪಂ. ವ್ಯಾಪ್ತಿಯ ಕುಮಟಾ ಕೊಡಮಡಗು ರಸ್ತೆ ಕಾಮಗಾರಿಗೆ ಶಾಸಕ ದಿನಕರ ಶೆಟ್ಟಿ ಶಂಕುಸ್ಥಾಪನೆ.

ಹೊನ್ನಾವರ ತಾಲೂಕಿನ ಚಂದಾವರ ಗ್ರಾ.ಪಂ. ವ್ಯಾಪ್ತಿಯ ವಡಗೇರಿ ಸಮೀಪ 19 ಕೋಟಿ ವೆಚ್ಚದ ಕುಮಟಾ- ಕೊಡಮಡುಗು ರಾಜ್ಯ ಹೆದ್ದಾರಿಯ ರಸ್ತೆ ಕಾಮಗಾರಿಗೆ ಶಾಸಕ ದಿನಕರ ಶೆಟ್ಟಿ ಶುಕ್ರವಾರ ಚಾಲನೆ ನೀಡಿದರು.
ಎಸ್.ಎಚ್.ಡಿ.ಪಿ., ಮತ್ತು ಲೊಕೋಪಯೋಗಿ ಇಲಾಖೆಯಡಿ ಹೊನ್ನಾವರ ಮತ್ತು ಕುಮಟಾ ತಾಲೂಕಿನ ಎರಡು ರಸ್ತೆಗೆ 22 ಕೋಟಿ ಮಂಜೂರಾಗಿದ್ದು, ಅದರಲ್ಲಿ ಕೊಡಮುಡುಗು, ಕುಮಟಾ ಸಂಪರ್ಕಿಸುವ 12.50 ಕಿ.ಮೀ ರಸ್ತೆ, ಅಗಲೀಕರಣ ಹಾಗೂ ಡಾಂಬರಿಕರಣ ಕಾಮಗಾರಿಗೆ 19 ಕೋಟಿ ಬಿಡುಗಡೆಯಾಗಿದೆ. ಈ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಶಾಸಕರು ಮಾತನಾಡಿ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮೂಲಕ ಗ್ರಾಮೀಣ ಭಾಗದಲ್ಲಿಯೂ ಹಲವು ರಸ್ತೆ, ಸೇತುವೆ ಕಾಮಗಾರಿ ನಡೆಯುತ್ತಿದೆ ಎಂದರು.

ವಡಗೇರಿ ಪ್ರಾಥಮಿಕ ಶಾಲೆಗೆ ರಂಗಮAದಿರ ಒದಗಿಸುವಂತೆ ಶಾಲಾ ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸೀತಾರಾಮ ನಾಯ್ಕ ನೇತೃತ್ವದಲ್ಲಿ ಶಾಲಾ ಶಿಕ್ಷಕರು ಹಾಗೂ ಸಾರ್ವಜನಿಕರು ಶಾಸಕರಿಗೆ ಮನವಿ ಸಲ್ಲಿಸಿದರು. ಮನವಿಗೆ ಸ್ಪಂದಿಸಿ ಶಾಸಕರ ಪ್ರವೇಶಾಭಿವೃದ್ದಿನಿಧಿಯಿಂದ ಹಣ ಬಿಡುಗಡೆಗೊಳಿಸುವ ಬಗ್ಗೆ ಭರವಸೆ ನೀಡಿದರು.
ಗ್ರಾ.ಪಂ. ಅಧ್ಯಕ್ಷರಾದ ಛಾಯಾ ಉಬೇಕರ್, ಕೃಷ್ಣ ಗೌಡ, ಸತೀಶ ಹೆಬ್ಬಾರ, ಸದಸ್ಯರಾದ ಆಸಿಪ್ ಅಲಿಘನಿ, ಹುದಾ ಹುಸೇನ್, ಮಲ್ಲಿಕಾ ಭಂಡಾರಿ, ಮಂಜುನಾಥ ಮಡಿವಾಳ, ಅಖಿಲ್ ಖಾಜಿ, ಅಣ್ಣಪ್ಪ ನಾಯ್ಕ, ಜಟ್ಟು ಮುಕ್ರಿ, ಗಣಪು ಮುಕ್ರಿ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಾದ ಯೋಗಾನಂದ ಸುದರ್ಶನ, ಎಂ.ಎಸ್.ನಾಯ್ಕ, ಪಂಚಾಯತಿ ಅಭಿವೃದ್ದಿ ಅಧಿಕಾರಿ ವಿ.ಎ.ಪಟಗಾರ, ಸಿಬ್ಬಂದಿಗಳು, ಪಕ್ಷದ ಕಾರ್ಯಕರ್ತರು, ಸಾರ್ವಜನಿಕರು ಹಾಜರಿದ್ದರು.

ವರದಿ: ವೆಂಕಟೇಶ ಮೇಸ್ತ ಹೊನ್ನಾವರ

error: